PPF Scheme: PPF ಯೋಜನೆಯಲ್ಲಿ ಹಣ ಹಾಕಿದವರಿಗೆ ಭರ್ಜರಿ ಗೂಡ್ ನ್ಯೂಸ್

Advertisement
ನೀವು ಪಿಪಿಎಫ್ (PPF) ಹಣ ಹೂಡಿಕೆ ಮಾಡಿದ್ದೀರಾ ಹಾಗಾದ್ರೆ ಈ ಯೋಜನೆಗೆ ಸಂಬಂಧಪಟ್ಟ ಹಾಗೆ ಸರ್ಕಾರ ಒಂದು ಪ್ರಮುಖ ಸುದ್ದಿ ಹೊರಡಿಸಿದೆ. ಸಣ್ಣ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವವರಿಗೆ 2023-24ರ ಹಣಕಾಸು ವರ್ಷದ ಏಪ್ರಿಲ್- ಜೂನ್ ತ್ರೈಮಾಸಿಕದ ಬಡ್ಡಿ ದರ (Interest) ವನ್ನು ಬಿಡುಗಡೆ ಮಾಡಿದೆ ಸರ್ಕಾರ. ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಎಷ್ಟು ಲಾಭ ಸಿಗುತ್ತೆ ಗೊತ್ತಾ?
7.1% ಬಡ್ಡಿದರ:
ಪಿಪಿಎಫ್ ಯೋಜನೆಯಲ್ಲಿ ಬಡ್ಡಿ ದರದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಮೊದಲಿನ ಲಾಭವನ್ನೇ ಬಡ್ಡಿಯ ವಿಚಾರದಲ್ಲಿಯೂ ಪಡೆಯುತ್ತೀರಿ ಇದು 12ನೇ ತ್ರೈಮಾಸಿಕವಾಗಿದ್ದು ಪಿಪಿಎಫ್ ನ ಬಡ್ಡಿ ದರ 7.1 ಇದೆ.
ಯಾವ ಯೋಜನೆಗೆ ಎಷ್ಟು ಬಡ್ಡಿ;
• ಹಿರಿಯ ನಾಗರಿಕರ ಉಳಿತಾಯ ಯೋಜನೆ- ಇದರಲ್ಲಿ ಹಿರಿಯ ನಾಗರಿಕರು 8 ರಿಂದ 8.2% ಬಡ್ಡಿ ದರ ಹೆಚ್ಚಳವನ್ನು ಪಡೆಯಬಹುದು.
• ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ- ಇದರ ಬಡ್ಡಿದರ 7-7.7% ಪಡೆಯಬಹುದು.
• ಸುಕನ್ಯಾ ಸಮೃದ್ಧಿ ಯೋಜನೆ- ಇದರ ಬಡ್ಡಿದರ 7.6 ಇಂದ 8%ವರೆಗೆ ಇದೆ.
• ಕಿಸಾನ್ ವಿಕಾಸ್ – 120 ತಿಂಗಳವರೆಗಿನ ಹೂಡಿಕೆಗೆ 7.2% ಹಾಗೂ 115 ತಿಂಗಳ ಹೂಡಿಕೆಗೆ 7.5% ನಷ್ಟು ಬಡ್ಡಿ ಪಡೆಯಬಹುದು.
500 ರೂಪಾಯಿಯಿಂದ ಹೂಡಿಕೆ (Investment) ಆರಂಭ:
ನೀವು ಪಿಪಿಎಫ್ ನಲ್ಲಿ 500 ರೂಪಾಯಿಗಳಿಂದಲೂ ಹೂಡಿಕೆ ಮಾಡಬಹುದು. ಒಂದು ವರ್ಷಕ್ಕೆ ರೂ. 1.5 ಲಕ್ಷದವರೆಗೆ ಪಿಪಿಎಫ್ ಹೂಡಿಕೆ ಮಾಡಿದರೆ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಈ ಹೂಡಿಕೆಗಳು 15 ವರ್ಷಕ್ಕೆ ಮೆಚ್ಯೂರ್ ಆಗುತ್ತವೆ. ನೀವು ಬಯಸಿದರೆ 15 ವರ್ಷಗಳ ನಂತರವೂ ಹೂಡಿಕೆಯನ್ನು ಮುಂದುವರಿಸಬಹುದು, ವರ್ಷಕ್ಕೊಮ್ಮೆ ಈ ಹಣವನ್ನು ನೀವು ಹಿಂತಿರುಗಿ ಪಡೆಯಬಹುದು.
ಹೂಡಿಕೆಯ ಮೇಲೆ ಸಾಲ:
ಹೂಡಿಕೆ ಮಾಡುವುದರಿಂದ ಹಣ ಉಳಿತಾಯ ಮಾತ್ರವಲ್ಲದೆ ಇನ್ನೊಂದು ಬಹು ಮುಖ್ಯ ಪ್ರಯೋಜನ ಅಂದ್ರೆ ನೀವು ಸಾರ್ವಜನಿಕ ಭವಿಷ್ಯ ನಿಧಿ ಮೇಲೆ ಹೂಡಿಕೆ ಮಾಡಿದರೆ ಬಡ್ಡಿಯ ಲಾಭವು ಸಿಗುತ್ತದೆ ಜೊತೆಗೆ ನೀವು ಸಾಲ (Loan) ವನ್ನು ಕೂಡ ಪಡೆಯಬಹುದು. ಪಿಪಿಎಫ್ ಖಾತೆಯಲ್ಲಿ ಇರುವ ನಿಮ್ಮ ಹಣದ ಮೇಲೆ 25% ನಷ್ಟು ಸಾಲವನ್ನ ಪಡೆಯಬಹುದು.