Govt New Rules: ದೇಶಾದ್ಯಂತ ರಸ್ತೆಗಿಳಿಯುವ ಎಲ್ಲಾ ಸರಕು, ಪ್ಯಾಸೆಂಜರ್ ವಾಹನ ಲಾರಿ ಸೇರಿದಂತೆ ಎಲ್ಲರಿಗೂ ಹೊಸ ನಿಯಮ
ದೇಶದಲ್ಲಿ ಆಂತರಿಕ ಹಾಗೂ ಬಾಹ್ಯ ರಫ್ತು ಹಾಗೂ ಆಮದು ಪ್ರಮಾಣ ಹೆಚ್ಚಾದಂತೆ ದೇಶಿಯ ಸಾರಿಗೆ ವ್ಯವಸ್ಥೆ ಅಭಿವೃದ್ಧಿಹೊಂದುತ್ತಿದೆ, ಅದೇ ರೀತಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸರಕನ್ನು ಹೊತ್ತು ಸಾಗುವ ಲಾರಿ, ಗೂಡ್ಸ್ , ಮೋಟಾರು ವಾಹನಗಳು ತಮ್ಮ ಸಾಮಾರ್ಥ್ಯ ಮೀರಿ ಸರಕುಗಳನ್ನು ಲೋಡ್ ಮಾಡಿ ಸಾಗಾಟಕ್ಕೆ ಪರದಾಡಿ ಕೆಲವೊಂದು ಸಂದರ್ಭದಲ್ಲಿ ಅಪಘಾತದಂತಾಹ ಸಮಸ್ಯೆ ಸಹ ಬಂದು ಬಿಡುತ್ತದೆ. ಇಂತಹ ಸಮಸ್ಯೆ ಪರಿಹಾರಕ್ಕೆಂದೆ ಕಡ್ಡಾಯವಾಗಿ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ (Vehicles Fitness Exam) ಒಳಪಡಿಸಲಾಗಿದ್ದು ಅಕ್ಟೋಬರ್ 1, 2024ರವರೆಗೆ ಗಡುವು ನೀಡಲಾಗಿದೆ.
Fitness Exam ಎಂದರೇನು?
ನಮ್ಮ ದೇಹಕ್ಕೆ ಹೇಗೆ ಫಟ್ನೆಸ್ ಮುಖ್ಯವೊ ಹಾಗೇ ನಾವು ಚಲಿಸುವ ವಾಹನಕ್ಕೂ ಒಂದು ಫಿಟ್ನೆಸ್ (Fitness) ಪರೀಕ್ಷೆ ಇರುತ್ತದೆ. ಅದರಲ್ಲಿ ಟಯರ್, ಎಂಜಿನ್, ಸ್ಟೇರಿಂಗ್, ಬ್ರೇಕ್ ಕಂಡಿಷನ್ ಎಲ್ಲದನ್ನು ಯಾಂತ್ರಿಕವಾಗಿ ಪರಿಶೀಲನೆ ಮಾಡಲಾಗುತ್ತದೆ. ಇವೆಲ್ಲವೂ ಸುಸ್ಥಿತಿಯಲ್ಲಿದ್ದು ಈ ವಾಹನ ಎಷ್ಟು ಲೋಡ್ ಭಾರ ಹೊರುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಸಹ ಅಂದಾಜಿಸಲಾಗುತ್ತದೆ. ಈ ಮೂಲಕ ಅಪಘಾತ ಎಲ್ಲ ನಡೆಯುವುದನ್ನು ತಪ್ಪುಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ.
ಸಚಿವಾಲಯ ತಿಳಿಸಿದ್ದೇನು?
ಎಪ್ರಿಲ್ 1, 2024 ಈ ಪರೀಕ್ಷೆ ಮಾಡಿಸಲು ಅಂತಿಮ ದಿನವಾಗಿದೆ ಎಂದು ಸಚಿವಾಲಯ ಆದೇಶ ಹೊರಡಿಸಿದ್ದು ಇದೀಗ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಮೂಲಕ ದೇಶಾದ್ಯಂತ ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳು (ATS) ಹೆಚ್ಚಿನ ಮತ್ತು ಮಧ್ಯಮ ಪ್ರಯಾಣಿಕರ ವಾಹನ, ಹೆಚ್ಚು ಮತ್ತು ಕಡಿಮೆ ಪ್ರಮಾಣದ ಭಾರ ಹೊರುವ ಸರಕಿನ ವಾಹನಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಮೋಟಾರು ವಾಹನದ ಅಧಿ ನಿಯಮ 1989 ರ ನಿಯಮ 175ರ ಪ್ರಕಾರ ಕಡ್ಡಾಯವಾಗಿ ಈ ಪರೀಕ್ಷೆಯನ್ನು ಇಂತಹ ವಾಹನಗಳು ಮಾಡಿಸಬೇಕೆಂದು ಸಚಿವಾಲಯ ತಿಳಿಸಿದೆ. ಹಾಗಾಗಿ ಕಳೆದ ಎಪ್ರಿಲ್ 5 ರಂದು ಈ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಮುಂದಿನ ದಿನದಲ್ಲಿ ಈ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದೆ ಎಂದು ಮಾಹಿತಿ ಮೂಲಗಳು ತಿಳಿಸಿದೆ.