Gas Cylinder: ಗ್ಯಾಸ್ ಬುಕ್ ಮಾಡುವವರಿಗೆ ಇನ್ನೊಂದು ಸಿಹಿಸುದ್ದಿ! ಕೇಂದ್ರದ ಹೊಸ ನಿರ್ಧಾರ
ಇಂದು ಆಧುನಿಕಯುಗದಲ್ಲಿ ಪ್ರತಿಯೊಂದರ ಬೆಲೆ ಕೂಡ ಗಗನಕ್ಕೆ ಏರಿದೆ, ಇಂದು ಸಾಮಾನ್ಯ ಮನುಷ್ಯ ಬದುವುದು ಕೂಡ ಕಷ್ಟ ಸಾದ್ಯ ವಾಗಿದೆ, ಕಳೆದ ಕೆಲವು ದಿನಗಳಿಂದ ಆಹಾರದ ಬೆಲೆಗಳ ಏರಿಕೆ ಆಗಿರುವುದು ತಿಳಿದೇ ಇದೆ, ಇದು ಲಕ್ಷಾಂತರ ಕುಟುಂಬಗಳ ಮೇಲೆ ಬೆಲೆ ಏರಿಕೆ ನಿರ್ದಾರವು ಪರಿಣಾಮ ಬೀರುತ್ತದೆ. ಇದೀಗ ವರ್ಷಾರಂಭದಿಂದ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದ ಜನತೆಗೆ ಈ ಸುದ್ದಿ ಕೊಂಚ ನಿರಾಳತೆ ಸಿಕ್ಕಿದೆ.
ಕಡಿತ ಗೊಳಿಸಿದೆ:
ಕೇಂದ್ರ ಸರ್ಕಾರ ಇದೀಗ ದೇಶದ ಜನತೆಗೆ ಗುಡ್ ನ್ಯೂಸ್ ನೀಡಿದೆ, ಹೌದು ಗೃಹಬಳಕೆಯ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯಲ್ಲಿ 200 ರೂ. ಕಡಿಮೆ ಗೊಳಿಸಿದೆ . ಈ ಮೂಲಕ ಹಲವು ಕಡೆ ಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿಮೆ ಆಗಿದೆ.
ಎಷ್ಟು ಆಗಿದೆ?
ದೆಹಲಿಯಲ್ಲಿ 1680 ರೂ.ಗಳ ಬದಲು 1522.50 ರೂ. ಆಗಿದ್ದು ಕೋಲ್ಕತ್ತಾದಲ್ಲಿ 1636 ರೂ.ಗೆ ಲಭ್ಯವಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 157 ರೂ. ಕಡಿಮೆ ಮಾಡಲಾಗಿದೆ, ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳು ಸೇರಿದಂತೆ ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.
ಬದಲಾವಣೆ ಮಾಡಲಾಗುತ್ತದೆ:
ಎಲ್‌ಪಿಜಿ (LPG) ಸಿಲಿಂಡರ್ ಬೆಲೆ ಗಳನ್ನು ಪ್ರತಿ ತಿಂಗಳಂದು ಪರಿಷ್ಕರಣೆ ಮಾಡಲಾಗುತ್ತದೆ. ಏಪ್ರಿಲ್, ಮೇ ಜೂನ್‌ನಲ್ಲಿ ಬೆಲೆ ಕಡಿಮೆ ಮಾಡಿದ ನಂತರ ಜೂನ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ದರಗಳನ್ನು ಹೆಚ್ಚು ಮಾಡಲಾಗಿತ್ತು . ಇದೀಗ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ದೇಶದ ಜನತೆಗೆ ನೀರಾಳ ಸಿಕ್ಕಿದಂತಾಗಿದೆ.
ಒಟ್ಟಿನಲ್ಲಿ ಬೆಲೆಯು ಪ್ರತಿ ತಿಂಗಳು ಬದಲಾವಣೆ ಪರಿಷ್ಕರಣೆ ಆಗುತ್ತಿರುತ್ತವೆ, ಈಗ ದೆಹಲಿಯಲ್ಲಿ 903 ರೂ.ಗೆ ಸಿಲಿಂಡರ್ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಈಗ ಮೊದಲಿಗಿಂತ 200 ರೂ.ಗಳ ಕಡಿಮೆ ಬೆಲೆಯಲ್ಲಿ ಸಿಲಿಂಡರ್ ಗಳನ್ನು ಖರೀದಿ ಸುತ್ತಿದ್ದಾರೆ.