Karnataka Times
Trending Stories, Viral News, Gossips & Everything in Kannada

Court New Rules: ಯಾವುದೇ ವಯಸ್ಸಿನಲ್ಲಿ ಮದುವೆಯಾಗುವ ಎಲ್ಲರಿಗೂ ಕೋರ್ಟ್ ಹೊಸ ಆದೇಶ

Advertisement

ಹಿಂದೂ ವಿವಾಹ ಕಾಯ್ದೆಯ ಕುರಿತು ಸುಪ್ರೀಂ ಕೋರ್ಟ್ ಹೊಸದಾಗಿರುವ ವಿಷಯವನ್ನು ತಿಳಿಸಿದೆ. ಮದ್ರಾಸ್ ಹೈಕೋರ್ಟಿನ ತೀರ್ಪಿನ ಕುರಿತು ಸುಪ್ರೀಂ ಕೋರ್ಟ್ ಈ ಹೊಸ ಆದೇಶವನ್ನು (Court New Rules) ಹೊರಡಿಸಿದ್ದು ವಿವಾಹದ ಕಾಯ್ದೆಯ ಅಡಿಯಲ್ಲಿ ಅಪರಿಚಿತರ ಎದುರು ರಹಸ್ಯವಾಗಿ ಮದುವೆ ಆದರೆ ಆ ಮದುವೆ ಮಾನ್ಯ ಆಗುವುದಿಲ್ಲ ಎಂದು ತಿಳಿಸಿದೆ.

ವಕೀಲರೇ ಪುರೋಹಿತರು?!

ಸುಪ್ರೀಂ ಕೋರ್ಟ್ ನ ಹೊಸ ಆದೇಶದ ಪ್ರಕಾರ ವಧು ವರರು ವಕೀಲರ ಸಮ್ಮುಖದಲ್ಲಿ ಪರಸ್ಪರ ಹಾರ ಬದಲಾಯಿಸಿಕೊಂಡು ಅಥವಾ ಉಂಗುರ ವಿನಿಮಯ ಮಾಡಿಕೊಂಡು ಸರಳವಾಗಿ ವಿವಾಹವಾದರೆ ಆ ವಿವಾಹವನ್ನು ಮಾನ್ಯ ಎಂದು ಪರಿಗಣಿಸಬೇಕು ಎಂಬುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಒಂದು ಗಂಡು, ಹೆಣ್ಣು ಪರಸ್ಪರ ಒಪ್ಪಿಕೊಳ್ಳುವಲ್ಲಿ ಭಾಷೆ, ಪದ್ಧತಿ, ಆಚರಣೆ, ಅಭಿವ್ಯಕ್ತಿ ಯಾವುದು ಕಾನೂನು ಬದ್ಧವಾಗಿ ಮುಖ್ಯವಾಗುವುದಿಲ್ಲ ಆದರೆ ಮದುವೆಯಾಗುವ ವಧು ವರರು ರಹಸ್ಯವಾಗಿ ಮದುವೆಯಾದರೆ ಆ ಮದುವೆ ಮಾನ್ಯ ಎನಿಸಿಕೊಳ್ಳುವುದಿಲ್ಲ.

ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಹಾಗೂ ಅರವಿಂದ ಕುಮಾರ್ ಅವರ ಪೀಠವು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 7 (ಎ) ಅಡಿಯಲ್ಲಿ ಮಹತ್ವದ ತೀರ್ಪನ್ನು ನೀಡಿದ್ದು ವಕೀಲರು ಸ್ನೇಹಿತರು ಅಥವಾ ಸಂಬಂಧಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಮೊದಲಾದವರ ಮುಂದೆ ಮದುವೆ ಆದರೆ ಅದನ್ನು ಮಾನ್ಯ ಎಂದು ತೀರ್ಮಾನಿಸಬೇಕು. 1967 ರಿಂದ ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಸ್ವಾಭಿಮಾನದ ವಿವಾಹ ಕಾಯ್ದೆಗೆ ನ್ಯಾಯಮೂರ್ತಿ ಅರವಿಂದ್ ಕುಮಾರ್ ಹಾಗೂ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಅವರ ಪೀಠ ಅನುಮೋದನೆ ನೀಡಿದೆ.

ಆರ್ಟಿಕಲ್ 7 (ಎ)ಏನು ಹೇಳುತ್ತೆ?

ಯಾವುದೇ ಗಂಡು ಹೆಣ್ಣು ಮದುವೆ ಆಗಲು ಹಿಂದೂ ಸಂಪ್ರದಾಯದ ಪ್ರಕಾರ ಸಂಪ್ರದಾಯ ಬದ್ಧವಾಗಿ ಪುರೋಹಿತರ ಸಮ್ಮುಖದಲ್ಲಿ ಮದುವೆ ಆಗದೆ ಇದ್ದರೂ ವಕೀಲರ ಸಮ್ಮುಖದಲ್ಲಿ ಅಥವಾ ಸ್ನೇಹಿತರ ಸಾಮಾಜಿಕ ಕಾರ್ಯಕರ್ತರ ಸಮ್ಮುಖದಲ್ಲಿ ಮದುವೆ ಆದರೆ ಆ ಮದುವೆ ಮಾನ್ಯ ಎನಿಸಿಕೊಳ್ಳುತ್ತದೆ. ಮೇ 5, 2023ರಲ್ಲಿ ಮದ್ರಾಸ್ ಹೈಕೋರ್ಟ್ ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಿದ್ದ ಅರ್ಜಿಯನ್ನು ಪರಿಶೀಲಿಸಿ. ಈ ತೀರ್ಮಾನವನ್ನು ಸುಪ್ರೀಂ ಕೋರ್ಟ್ ನೀಡಿದೆ.

ಪ್ರೀತಿಸಿ ಮದುವೆ ಆಗುವವರು ಸಾಮಾಜಿಕ ವಿರೋಧ ಅಥವಾ ಇತರ ಅಪಾಯವನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇದರಿಂದ ರಕ್ಷಣೆ ಕೊಡುವ ಸಲುವಾಗಿ ಈ ಹೊಸ ಕಾನೂನು ಜಾರಿಗೆ ಬಂದಿದೆ. ಮದುವೆ ಎನ್ನುವುದು ಮನಸ್ಸಿನ ಬಂಧ ಅದಕ್ಕಾಗಿ ಮದುವೆಯನ್ನು ಸಾರ್ವಜನಿಕ ಘೋಷಣೆ ಮಾಡುವುದು ಅಥವಾ ನಿಗದಿತ ಆಚರಣೆಯನ್ನು ಮಾಡುವುದು ಅಗತ್ಯವಿಲ್ಲ ಗಂಡು-ಹೆಣ್ಣು ಪರಸ್ಪರ ಒಪ್ಪಿ ಮದುವೆ ಆಗುವುದು ಮುಖ್ಯ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ನೀಡಿದೆ.

Leave A Reply

Your email address will not be published.