Karnataka Times
Trending Stories, Viral News, Gossips & Everything in Kannada

Property: ಭೂಮಿ ಅತಿಕ್ರಮಣವಾಗಿದ್ದವರಿಗೆ ಸಿಹಿಸುದ್ದಿ! ತಕ್ಷಣ ಹೀಗೆ ಮಾಡಿ ಹೊಸ ನಿಯಮ

ನಮ್ಮ ದೇಶದಲ್ಲಿ ಆಸ್ತಿಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ದಿನವೂ ಕೋರ್ಟು ಕಚೇರಿ ಎಂದು ಆಸ್ತಿ ವಿವಾದಕ್ಕಾಗಿ ಅಲೆದಾಡುವವರು ಇದ್ದಾರೆ ಅದೆಷ್ಟೋ ಪ್ರಕರಣಗಳು ಇದುವರೆಗೆ ಇತ್ಯರ್ಥವಾಗದೆ ನ್ಯಾಯಾಲಯದ ಚೌಕಟ್ಟಿನಲ್ಲಿಯೇ ಬಿದ್ದಿವೆ. ಈಗಿರುವಾಗ ಕಾನೂನಿನ ಕೆಲವು ನಿಯಮದ ಬಗ್ಗೆ ನೀವು ತಿಳಿದುಕೊಳ್ಳಬೇಕು ಯಾಕೆಂದರೆ ಎಷ್ಟು ಬಾರಿ ನಮಗೆ ಗೊತ್ತಿಲ್ಲದೆ ನಮ್ಮ ಆಸ್ತಿಯಲ್ಲಿ ಬೇರೆಯವರು ತಮ್ಮ ಹಕ್ಕು ಚಲಾಯಿಸುವಂತಹ ಸಂದರ್ಭ ಎದುರಾಗಬಹುದು. ಇಂತಹ ಸಮಯದಲ್ಲಿ ಕಾನೂನಿನ ಚೌಕಟ್ಟಿನ ಒಳಗೆ ಯಾವ ರೀತಿ ನ್ಯಾಯ ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಂಡರೆ ಒಳ್ಳೆಯದು.

Advertisement

Property Encroachment:

Advertisement

ನಿಮ್ಮ ಆಸ್ತಿಯನ್ನು ಯಾರಾದ್ರೂ ಅತಿಕ್ರಮಣ ಮಾಡಿದರೆ ಅಥವಾ ನಿಮ್ಮ ಜಾಗದಲ್ಲಿ ನಿಮ್ಮ ಅನುಮತಿ ಇಲ್ಲದೆ ಬಂದು ಕುಳಿತುಕೊಂಡು ಅಧಿಕಾರ ಚಲಾಯಿಸುತ್ತಿದ್ದರೆ ಆಗ ನೀವು ಅವರನ್ನು ಅಲ್ಲಿಂದ ಎಬ್ಬಿಸುವುದು ಹೇಗೆ ಎನ್ನುವ ಯೋಚನೆ ಇರುತ್ತೆ ಇದಕ್ಕೂ ಕೂಡ ಭಾರತೀಯ ಕಾನೂನಿನಲ್ಲಿ ನ್ಯಾಯವನ್ನು ಹೇಳಲಾಗಿದೆ.

Advertisement

ಕೆಲವೊಮ್ಮೆ ಅತಿಕ್ರಮಣ (Property Encroachment) ದಾರದಿಂದ ಆಸ್ತಿಯನ್ನು ಬಿಡುಗಡೆ ಮಾಡಿಸಿಕೊಳ್ಳುವ ಸಮಯದಲ್ಲಿ ಹಿಂಸಾಚಾರ ಕೂಡ ನಡೆಯಬಹುದು ಭಾರತೀಯ ಕಾನೂನಿನಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಆದರೆ ಆತ್ಮ ರಕ್ಷಣೆಯ ಸಂದರ್ಭದಲ್ಲಿ ಹಿಂಸೆ ನಡೆದರೆ ಆಗ ಕಾನೂನು ಏನು ಹೇಳುತ್ತೆ ಗೊತ್ತಾ?

Advertisement

ಕಾನೂನಿನ ಪ್ರಕಾರ ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನು ಅಕ್ರಮವಾಗಿ ಯಾರು ಒತ್ತುವರಿ ಮಾಡಿಕೊಳ್ಳುವಂತಿಲ್ಲ ಅಂತಹ ಸಂದರ್ಭದಲ್ಲಿ ನೀವು ಅತಿಕ್ರಮಣ (Property Encroachment) ದಾರರನ್ನು ಓಡಿಸಲು ಬಂದೂಕು ಅಥವಾ ಲಾಟಿ ಬಳಸಬಹುದು ಆದರೆ ಇದಕ್ಕೆ ಸ್ಪಷ್ಟವಾಗಿರುವ ಕಾನೂನು ಕೂಡ ಇದೆ.

ದೇಶದಲ್ಲಿ ಪ್ರತಿಯೊಬ್ಬರಿಗೂ ಆತ್ಮ ರಕ್ಷಣೆಯ ಹಕ್ಕು ಇರುತ್ತದೆ ಕಾನೂನಿನ 96 ಹಾಗೂ 106 ರ ವರೆಗೆ ಸ್ವರಕ್ಷಣೆಯ ಹಕ್ಕಿನ ನಿಯಮ ಹಾಗೂ ನಿಬಂಧನೆಗಳನ್ನು ವಿವರಿಸಲಾಗಿದೆ. ಯಾವುದೇ ನಾಗರಿಕ ತನ್ನ ಜೀವ ಹಾಗೂ ಆಸ್ತಿಯ ಭದ್ರತೆಯ ಹಕ್ಕನ್ನು ಹೊಂದಿರುತ್ತಾನೆ ಎಂಬುದನ್ನು ಕಾನೂನು ಇಲ್ಲಿ ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಯಾವುದೇ ಹಿಂಸಾಚಾರ ನಿಮಗೆ ಹಾಗೂ ನಿಮ್ಮ ಆಸ್ತಿಗೆ ಹಾನಿಯನ್ನು ಉಂಟು ಮಾಡುವಂತಿದ್ದರೆ ನಿಮ್ಮ ಜೀವವನ್ನು ಉಳಿಸಿಕೊಳ್ಳಲು ನೀವು ಈ ಹಕ್ಕನ್ನು ಚಲಾಯಿಸಬಹುದು. ಇಂತಹ ಸಮಯದಲ್ಲಿ ನ್ಯಾಯಾಲಯದ ಮೂಲಕ ಪರಿಹಾರ ಕಂಡುಕೊಳ್ಳುವುದು ಹೆಚ್ಚು ಸೂಕ್ತ.

ಆಸ್ತಿ (Property) ರಕ್ಷಣೆ ಮಾಡಿಕೊಳ್ಳುವುದು ಅವರವರ ಹಕ್ಕು ಹಾಗಾಗಿ ಸಾಮರ್ಥ್ಯ ಇದ್ದರೆ ಅದನ್ನ ಉಳಿಸಿಕೊಳ್ಳಬಹುದು. ಇನ್ನು ಎಷ್ಟೋ ಸಂದರ್ಭದಲ್ಲಿ ಆಸ್ತಿ ಸ್ವಾಧೀನಪಡಿಸಿಕೊಳ್ಳುವಲ್ಲಿ ಹಿಂಸಾಚಾರ ಹೆಚ್ಚಾಗಿ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ಕೂಡ ಬರುತ್ತದೆ ಇನ್ನು ಯಾರನ್ನಾದರೂ ಜಾಗದಿಂದ ಎಬ್ಬಿಸಬೇಕು ಅಂದರೆ ಬೆದರಿಕೆ ಹಾಕಬಹುದೇ ಹೊರತು ಕೊಲ್ಲುವಂತಹ ನಿರ್ಣಯಕ್ಕೆ ಬರಬಾರದು. ಯಾಕಂದ್ರೆ ಈ ರೀತಿಯಾದಂತಹ ವಿವಾದ ಇನ್ನೂ ಹೆಚ್ಚಾಗಬಹುದು ಇದರಿಂದ ಮತ್ತು ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಕಾನೂನಿನಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ.

ಇನ್ನು ನಿಮ್ಮ ಜಾಗ (Land) ವನ್ನು ಯಾರಾದರೂ ಅತಿಕ್ರಮಿಸಿ ಅಲ್ಲಿ ನಿರ್ಮಾಣವನ್ನು ಮಾಡಿದ್ದರೆ ನೀವು ನಿಮ್ಮ ಜಾಗವನ್ನು ಹಿಂಪಡೆಯಲು ನೀವು ಬಲವನ್ನು ಪ್ರಯೋಗ ಮಾಡಬಹುದು ಎಂದು ಕಾನೂನು ಅನುಮತಿ ನೀಡುತ್ತದೆ ಅಂದರೆ ನಿಮ್ಮ ಆಸ್ತಿಯಲ್ಲಿ ಬೇರೆಯವರು ಕಟ್ಟಡ ನಿರ್ಮಾಣ ಮಾಡಿದರೆ ಅದನ್ನು ಕೆಡವುವ ಮೂಲಕ ನೀವು ನಿಮ್ಮ ಆಸ್ತಿಯನ್ನು ವಶಪಡಿಸಿಕೊಳ್ಳಬಹುದು.

ಸಾಮಾನ್ಯವಾಗಿ ಕಾನೂನಿನ ನಿಯಮದ ಪ್ರಕಾರ ಯಾರು ಕೂಡ ಆಸ್ತಿ ಅಥವಾ ನಿರ್ಮಾಣವನ್ನು ಕೆಡವುವುದರ ವಿರುದ್ಧ ಕಾನೂನು ಕ್ರಮ ಜಾರಿಗೊಳಿಸಲಾಗುತ್ತದೆ ಆದರೆ ನೀವು ಆತ್ಮ ರಕ್ಷಣೆಯ ಹಕ್ಕು ಹೊಂದಿದ್ದರೆ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಯಾರಾದರೂ ನಿಮ್ಮ ವಿರುದ್ಧ ಪೋಲಿಸ್ ಅಥವಾ ನ್ಯಾಯಾಲಯಕ್ಕೆ ದೂರು ನೀಡಿದರೆ ನಿಮ್ಮ ಪರವಾಗಿ ನ್ಯಾಯ ತೀರ್ಮಾನವಾಗಬಹುದು. ಹಾಗಾಗಿ ಕಾನೂನಿನ ಚೌಕಟ್ಟಿನ ಅಡಿಯಲ್ಲಿ ನಿಮ್ಮ ಆಸ್ತಿಯನ್ನು ಯಾರಾದ್ರೂ ಆಕ್ರಮಿಸಿಕೊಂಡಿದ್ದರೆ ಅದನ್ನು ನೀವು ಹಿಂಪಡೆದುಕೊಳ್ಳಲು ಸಾಧ್ಯವಿದೆ.

Leave A Reply

Your email address will not be published.