Karnataka Times
Trending Stories, Viral News, Gossips & Everything in Kannada

Rented House: ದೇಶದ ಯಾವುದೇ ಭಾಗದಲ್ಲಿ ಬಾಡಿಗೆ ಮನೆ ಇದ್ದವರಿಗೆ ಸಿಹಿಸುದ್ದಿ!

Advertisement

ನಗರ ಪ್ರದೇಶಗಳಲ್ಲಿ ವಾಸಿಸುವ ಹಲವರು ಬಾಡಿಗೆ ಮನೆ (Rented House) ಯಲ್ಲಿಯೇ ವಾಸಿಸುತ್ತಾರೆ. ಯಾಕೆಂದರೆ ಒಂದು ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ಎಲ್ಲರಿಗೂ ನನಸಾಗಿಸಿಕೊಳ್ಳಲು ಸಾಧ್ಯವಿಲ್ಲ ಹಾಗಾಗಿ ಜೀವನಪರ್ಯಂತ ಬಾಡಿಗೆ ಮನೆಯಲ್ಲಿಯೇ ವಾಸಿಸುವವರು ಕೂಡ ಇದ್ದಾರೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಹೊಸ ಯೋಜನೆ ಒಂದನ್ನು ಜಾರಿಗೆ ತರಲಿದೆ. ಯಾರೆಲ್ಲಾ ತಮ್ಮದೇ ಆದ ಸ್ವಂತ ಸೂರು ಹೊಂದಬೇಕು ಎಂದು ಕನಸನ್ನು ಹೊಂದಿರುತ್ತಾರೋ ಅಂತವರ ಕನಸನ್ನು ನನಸಾಗಿಸುವಂತಹ ಯೋಜನೆ ಇದು.

ನನಸಾಗುತ್ತಾ ಮಧ್ಯಮ ವರ್ಗದವರ ಕನಸು:

ಈ ಬಾರಿ ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ನಗರ ಪ್ರದೇಶದಲ್ಲಿ ವಾಸಿಸುವವರು ಸ್ವಂತ ಮನೆ ಹೊಂದಬೇಕು ಎನ್ನುವ ಹಾಗೂ ಮಧ್ಯಮ ವರ್ಗದ ಕುಟುಂಬದ ಸೂರು ನಿರ್ಮಾಣ ಮಾಡಿಕೊಳ್ಳುವ ಕನಸಿನ ಬಗ್ಗೆ ಮಾತನಾಡಿದರೆ ಇದಕ್ಕಾಗಿ ಹೊಸದೊಂದು ಯೋಜನೆ ರೂಪಿಸುವುದಾಗಿ ತಿಳಿಸಿದ್ದಾರೆ.

ನಗರಗಳಲ್ಲಿ ಸ್ವಂತ ಮನೆ ಇರಬೇಕು ಎನ್ನುವ ಮಧ್ಯಮ ವರ್ಗದ ಕುಟುಂಬದ ಕನಸುಗಳು ಇನ್ನೂ ನನಸಾಗಬಹುದು ಅದೆಷ್ಟೋ ಜನ ದೆಹಲಿ, ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಸ್ವಂತ ಸೋರು ನಿರ್ಮಾಣ ಮಾಡಿಕೊಳ್ಳಲು ದುಬಾರಿಯಾಗಿರುವ ಕಾರಣ ಬಾಡಿಗೆ ಮನೆ (Rented House) ಯಲ್ಲಿ ವಾಸ ಮಾಡುತ್ತಾರೆ ಇನ್ನು ಗೃಹ ಸಾಲ (Home Loan) ತೆಗೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಬೇಕು ಇಂದು ಯೋಚಿಸಿದರೆ ಗೃಹ ಸಾಲದ ಬಡ್ಡಿ ದರ ಬಹಳ ಜಾಸ್ತಿ ಹಾಗಾಗಿ ಈ ಎಲ್ಲದಕ್ಕೂ ಬ್ರೇಕ್ ಹಾಕಲು ಸರ್ಕಾರದ ಈ ಹೊಸ ನಿಯಮ ಸಹಾಯಕವಾಗಬಹುದು.

ಸಿಗಲಿದೆ ಬಡ್ಡಿ ದರದಲ್ಲಿ ವಿನಾಯಿತಿ:

ಗೃಹ ಸಾಲ ತೆಗೆದುಕೊಂಡು ಮನೆ ನಿರ್ಮಾಣ ಮಾಡಿಕೊಳ್ಳುವವರ ಆಸೆಯನ್ನು ಈಡೇರಿಸುವ ಸಲುವಾಗಿ, ಗೃಹ ಸಾಲದ ಬಡ್ಡಿ ದರದ ಮೇಲೆ ವಿನಾಯಿತಿ ಕೊಡಲು ನಿರ್ಧರಿಸಲಾಗಿದೆ ಎಂದು ಸಚಿವ ಹರ್ದಿಪ್ ಸಿಂಗ್ ತಿಳಿಸಿದ್ದಾರೆ. ಬ್ಯಾಂಕ್ ನಿಗದಿಪಡಿಸಿರುವ ಸಾಲಗಳ ಮೇಲಿನ ಬಡ್ಡಿಯ ಮೇಲೆ ಕೇಂದ್ರ ಸರ್ಕಾರ ವಿನಾಯಿತಿ ಕೊಡಲಿದೆ ಇದು ಸೆಪ್ಟೆಂಬರ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಮಾರ್ಗದರ್ಶಿ ಮನೋಜ್ ಜೋಶಿ ಅವರು ಮಾಹಿತಿ ನೀಡಿದ್ದಾರೆ.

ಆವಾಸ್ ಯೋಜನೆ ವಿಸ್ತರಣೆ:

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಆವಾಸ್ ಯೋಜನೆ- ನಗರ (PMAY-U) 2024 ಡಿಸೆಂಬರ್ ಗೆ ಮುಗಿಯಲಿದೆ. ಯೋಜನೆ ಆರಂಭವಾಗಿದ್ದು 2015 ಜೂನ್ ತಿಂಗಳಿನಲ್ಲಿ. ನಗರ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳು ಯೋಜನೆಯ ಮೂಲಕ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಇನ್ನು ಈ ಯೋಜನೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಕೂಡ ಇದೆ.

ಈ ಯೋಜನೆಯ ಅಡಿಯಲ್ಲಿ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸುಮಾರು ಎರಡು ಕೋಟಿ ಮನೆಗಳನ್ನು ಜನರಿಗೆ ನೀಡುವ ಉದ್ದೇಶವನ್ನು ಹೊಂದಿತ್ತು. 2023 ಆಗಸ್ಟ್ 23ರ ಲೆಕ್ಕಾಚಾರದ ಪ್ರಕಾರ ಈವರೆಗೆ ಒಟ್ಟು 1.19 ಕೋಟಿ ಮನೆಗಳಿಗೆ ಅನುಮೋದನೆ ಸಿಕ್ಕಿದೆ. ಹಾಗಾಗಿ ಈ ಯೋಜನೆಯನ್ನು ಇನ್ನಷ್ಟು ವಿಸ್ತರಿಸುವುದರ ಮೂಲಕ ಇನ್ನೂ ಹೆಚ್ಚು ಜನರಿಗೆ ಮನೆಯಲ್ಲಿ ನಿರ್ಮಾಣ ಮಾಡಿಕೊಳ್ಳಲು ಅನುಮೋದನೆ ನೀಡಬೇಕು ಎಂದು ಕೇಂದ್ರದಲ್ಲಿ ಚರ್ಚೆ ಮಾಡಲಾಗಿದೆ.

Also Read: Rent House: ಬಾಡಿಗೆ ಮನೆಗೆ ಬಂತು ದೇಶಾದ್ಯಂತ ಹೊಸ ನಿಯಮ

Leave A Reply

Your email address will not be published.