ಯಾವುದೇ ತೆರಿಗೆಯನ್ನು ಸಕಾಲಕ್ಕೆ ಕಟ್ಟದೆ ಹೋದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಆದರೆ ಇದೀಗ ರಾಜ್ಯ ಸರ್ಕಾರ ತೆರಿಗೆ ಕಟ್ಟದವರಿಗೆ ಸಿಹಿ ಸುದ್ದಿ ನೀಡಿದ್ದು, ಯಾರೆಲ್ಲಾ ನೀರಿನ ತೆರಿಗೆಯನ್ನು ಬಾಕಿ (Loan) ಉಳಿಸಿಕೊಂಡಿದ್ದಾರೆ. ಅವರ ಬಡ್ಡಿಗಳನ್ನು ಮನ ಮಾಡಿ ಕೇವಲ ಅಸಲು ಪಾವತಿಸುವಂತೆ ಆದೇಶ ನೀಡಿದೆ. ಹೌದು ನೀರಿನ ತೆರಿಗೆ ಬಾಕಿಯನ್ನು ಕಟ್ಟಲು ಒಂದು ಬಾರಿ ಪರಿಹಾರದ ಪ್ರಸ್ತಾವನೆಯನ್ನು ಸಲ್ಲಿಸುವಂತೆ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವರಾದ ಬೈರತಿ ಸುರೇಶ್ ಪಾಲಿಕೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ನೀರಿನ ತೆರಿಗೆ ಬಾಕಿ ಉಳಿಸಿಕೊಂಡಿದ್ದಂತವರಿಗೆ ಅಸಲು ಮೇಲಿನ ಬಡ್ಡಿ ಮನ್ನಾ ಮಾಡಿ, ಕೇವಲ ಅಸಲು ಪಾವತಿಸಲು ಒಂದು ಬಾರಿಗೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ. ಅಲ್ಲದೆ ಇದುವರೆಗೆ ನೀರಿನ ತಿರುಗಿ ಬಾಕಿ ಬಹಳಷ್ಟು ಇದೆ. ಅಂದರೆ ನೀರಿನ ತೆರಿಗೆ ಬಾಕಿ ಇಲ್ಲಿವರೆಗೂ ರೂ. 200 ಕೋಟಿಗಳು ಇದೆ. ಇಷ್ಟೆಲ್ಲ ಕೋಟಿಗಳ ಲೆಕ್ಕದಲ್ಲಿ ತೆರಿಗೆ ಬಾಕಿ ಉಳಿದಿರುವುದು ಸರ್ಕಾರದ ಬುಕ್ಕಸಕ್ಕೆ ನಷ್ಟವೂ ಕೂಡ ಹೌದು. ಅಲ್ಲದೆ ಅಸಲು ಬಡ್ಡಿ ಸೇರಿಸಿ 200 ಕೋಟಿಗಳಷ್ಟು ತೆರಿಗೆ ಬಾಕಿ ಇದೆ. ಹಾಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಇದರೊಂದಿಗೆ ಹೆಚ್ಚಾಗಿ ಬಡ ಮತ್ತು ಮಧ್ಯಮ ವರ್ಗದವರೇ ಬಾಕಿ ಉಳಿಸಿ ಕೊಂಡಿರುವುದರಿಂದ ಬಡ್ಡಿಯನ್ನು ಮನ್ನಾ ಮಾಡಿ ಅಸಲನ್ನು ಕಟ್ಟುವುದಕ್ಕೆ ಸರ್ಕಾರ ಅನುಮತಿ ನೀಡುವ ಚಿಂತನೆ ನಡೆಸಿದ್ದು, ಇದಕ್ಕಾಗಿ ಪಾಲಿಕೆ ವತಿಯಿಂದ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿರುತ್ತಾರೆ.
ಇದಲ್ಲದೆ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಇರುವ ವಾಹನಗಳ ವಾರ್ಷಿಕ ದುರಸ್ಥಿ ಮಾಡಲು ಕಳೆದ 5 ವರ್ಷಗಳಿಂದ ಟೆಂಡರ್ ಕರೆಯದೆ ಒಬ್ಬರಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದ್ದು, ಟೆಂಡರ್ ಕರೆಯದೆ ಏಕೆ ನೀಡುತ್ತಿದ್ದೀರಿ ಎಂದು ಮಾನ್ಯ ಸಚಿವರಾದ ಶ್ರೀ ಬೈರತಿ ಸುರೇಶ ರವರು ಪ್ರಶ್ನಿಸಿದರು. ಅಲ್ಲದೆ ಟೆಂಡರ್ ಅನ್ನು ಕರೆಬೇಕಾಗಿರುವುದು ಅವರ ಕರ್ತವ್ಯವಾಗಿದ್ದು, ಟೆಂಡರ್ ಕಾರ್ಯದೇ ಒಬ್ಬರೇ ವ್ಯಕ್ತಿಗೆ ನೀಡಿರೋದು ತಪ್ಪಾಗಿದೆ ಇದಕ್ಕೆ ಸಂಬಂಧಿಸಿದಂತೆ 15 ದಿನಗಳೊಳಗೆ ವರದಿ ನೀಡುವಂತೆ ಕೂಡ ಪಾಲಿಕೆ ಆಯುಕ್ತರಿಗೆ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಕೇವಲ ಬೆಂಗಳೂರು ಮಾತ್ರವಲ್ಲದೆ ಮೈಸೂರು ವಿಚಾರಗಳ ಕುರಿತು ಚರ್ಚೆಗಳು ನಡೆದಿದ್ದು, ಬೆಂಗಳೂರಿನಷ್ಟೇ ವೇಗವಾಗಿ ಮೈಸೂರು ಬೆಳೆಯುತ್ತಿದ್ದು, ಇದನ್ನು ಪಾರಂಪರಿಕ ನಗರಿ, ಅರಮನೆ ನಗರಿ ಎಂದು ಕರೆಯುತ್ತಾರೆ. ಪ್ರವಾಸಿಗರ ಭೇಟಿಯ ಸಂಖ್ಯೆಯು ಹೆಚ್ಚಾಗಿದ್ದು, 2023-24ನೇ ಸಾಲಿಗೆ ಕೇವಲ 70 ಕೋಟಿ ರೂಪಾಯಿಗಳು ಜಾಹೀರಾತಿನಿಂದ ಆದಾಯ ಎಂದು ಅಂದಾಜಿಸಿರುವುದು ಸರಿಯಲ್ಲ. ಮೈಸೂರು ನಗರದಲ್ಲಿ ಎಲ್ಲಿ ನೋಡಿದರು ಬೃಹದಾಕರದ ಜಾಹೀರಾತು ಫಲಕಗಳು ಕಾಣುತ್ತವೆ ಹೀಗಿದ್ದು, ಆದಾಯದ ಅಂದಾಜನ್ನು ನೀವೆ ನಿರ್ಧಾರಿಸುವುದು ಸರಿಯಲ್ಲ. ಇದನ್ನು ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. 9 ಜಾಹೀರಾತು ಏಜೆನ್ಸಿಗಳು ಮೈಸೂರಿನಲ್ಲಿದ್ದು, ಕೇವಲ ಒಬ್ಬರೆ ಭಾಗವಹಿಸುವುದು, ಅವರಿಗೆ ನೀಡುವುದು ಸರಿಯಾದ ಕ್ರಮವಲ್ಲ. ಟೆಂಡರ್ ಪ್ರಕ್ರಿಯೆ ನಿಯಮಾನುಸಾರ ನಡೆದು ಎಲ್ಲಾರಿಗೂ ಸಿಗುವಂತೆ ಆಗಬೇಕು ಎಂದು ಸಚಿವರು ಸೂಚಿಸಿದರು.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 11 ಇಂದಿರಾ ಕ್ಯಾಂಟಿನ್ ಇದ್ದು, ಮತ್ತೆ 2 ಅನ್ನು ಕಟ್ಟಲು ಸರ್ಕಾರ ಅನುಮತಿ ನೀಡಲು ಅಧಿಕಾರಿಗಳು ಕೇಳಿದಾಗ ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಡುತ್ತದೆ. ಸರ್ಕಾರ ಬಡವರ ಪರವಾಗಿದ್ದು, ಇಂದಿರಾ ಕ್ಯಾಂಟಿನ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಶ್ರೀ ಬೈರತಿ ಸುರೇಶ್ ರವರು ಸೂಚಿಸಿದರು. ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನದ ಕೊರತೆ ಇಲ್ಲ. ಹೀಗಾಗಿ ಕಾಮಗಾರಿಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಲು ಶೀಘ್ರ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಬೇಕೆಂದು ಸಹ ಸೂಚಿಸಿದರು.
ಇನ್ನು ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ಮಾಡಬೇಕು. ಇನ್ನು ಇದರ ವಿಚಾರದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಿಸಿಕೊಂಡಲ್ಲಿ ನಿರ್ವಹಿಸುತ್ತಿರುವ ಗುತ್ತಿಗೆದಾರರ ಮೇಲೆ ಯಾವುದೇ ಮುಲಾಜಿ ಇಲ್ಲದೆ ಕ್ರಮ ಇನ್ನು ನಗರದ ಕೆಲ ಕಡೆಗಳಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದು ಅದನ್ನು ಮುಚ್ಚುವ ಕಾರ್ಯ ಬೇಗ ಆಗಬೇಕು ಎಂದು ಸೂಚಿಸಿದ್ದಾರೆ.