Govt Notification: ಬೆಳ್ಳಂಬೆಳಿಗ್ಗೆ ದೇಶಾದ್ಯಂತ ಹೊಸ ಕಾನೂನಿನ ಬಗ್ಗೆ ಸೂಚನೆ ಕೊಟ್ಟ ಸರ್ಕಾರ

Advertisement
ಇದೇ ಬರುವ ಸಪ್ಟೆಂಬರ್ 18 ರಿಂದ 22 ರ ವರೆಗೆ 5 ದಿನಗಳ ಕಾಲ ಸಂಸತ್ತಿನಲ್ಲಿ ವಿಶೇಷ ಅಧಿವೇಶನವನ್ನು ಕೇಂದ್ರ ಸರ್ಕಾರ ನಡೆಸಲಿದೆ. ಅದೇ ರೀತಿ ಸೆಪ್ಟೆಂಬರ್ 9 ಹಾಗೂ 10 ರಂದು ರಾಷ್ಟ್ರ ಜಿ 20 ಶೃಂಗ ಸಭೆ ಕೂಡ ನಡೆಯಲಿದೆ. ಈ ಸಭೆಗಳಲ್ಲಿ ವಿಶೇಷವಾಗಿ 18 ರಿಂದ 22 ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಸಾಕಷ್ಟು ವಿಷಯಗಳು ಚರ್ಚೆಯಾಗಲಿವೆ. ಅದರಲ್ಲಿ ಬಹುಕಾಲದಿಂದ ನಿರೀಕ್ಷೆ ಮಾಡಲಾಗಿದ್ದ “ಒಂದು ರಾಷ್ಟ್ರ ಒಂದು ಚುನಾವಣೆ” ಎನ್ನುವ ಮಸೂದೆಗೆ ಅಂಗೀಕಾರ ಸಿಗಬಹುದಾ ಎನ್ನುವ ಕುತೂಹಲ ಮನೆ ಮಾಡಿದೆ.
ನಡೆಯಲಿದೆ ವಿಶೇಷ ಸಂಸತ್ತಿನ ಅಧಿವೇಶನ ಸಾಮಾನ್ಯವಾಗಿ ವರ್ಷದಲ್ಲಿ ಮೂರು ಸಂಸತ್ತಿನ ಅಧಿವೇಶನ ನಡೆಯುತ್ತದೆ. ಬಜೆಟ್ ಅಧಿವೇಶನ ಮಾನ್ಸೂನ್ ಹಾಗೂ ಚಳಿಗಾಲದ ಅಧಿವೇಶನಗಳು. ಈ ಅಧಿವೇಶನದಲ್ಲಿ ಸರ್ಕಾರದ ಪ್ರಮುಖ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಕೆಲವು ಹೊಸ ನಿರ್ಧಾರಗಳಿಗೆ ಅನುಮೋದನೆ ಕೂಡ ಸಿಗುತ್ತದೆ. ಈ ಬಾರಿಯ ವಿಶೇಷ ಅಧಿವೇಶನದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಾಗೂ ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹಿರಿಯ ಪತ್ರಕರ್ತರೊಬ್ಬರು ತಿಳಿಸಿದ್ದಾರೆ.
ಎಲ್ಲರಿಗೂ ತಿಳಿದಿರುವಂತೆ ಲೋಕಸಭೆ ಚುನಾವಣೆ ಏಪ್ರಿಲ್ ಅಥವಾ ಮೇ ತಿಂಗಳಿನ 2024ರ ಇಸ್ವಿ ಅಂದರೆ ಮುಂದಿನ ವರ್ಷ ನಡೆಯಲಿದೆ. ಆದರೆ ಮೋದಿ (Narendra Modi) ಸರ್ಕಾರದ ಮಾಸ್ಟರ್ ಪ್ಲಾನ್ ಪ್ರಕಾರ ಡಿಸೆಂಬರ್ ಅಥವಾ ಜನವರಿ 2024ರಲ್ಲಿ ಲೋಕಸಭಾ ಚುನಾವಣೆ ನಡೆಯಬಹುದು. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಬಿಹಾರ ಸಿಎಂ ವಿದೇಶಕುಮಾರ ಲೋಕಸಭಾ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆ ಎರಡೂ ಒಟ್ಟಿಗೆ ನಡೆಯಲಿದೆ ಎನ್ನುವ ಪ್ರಶ್ನೆಗಳು ಕೂಡ ಮೂಡುತ್ತಿವೆ. ಎಲ್ಲದಕ್ಕೂ ಐದು ದಿನಗಳ ಕಾಲ ನಡೆಯುವ ವಿಶೇಷ ಅಧಿವೇಶನದಲ್ಲಿ ಉತ್ತರ ಸಿಗಬಹುದು.
ಮೂಲ ವರದಿಯ ಪ್ರಕಾರ ಒಂದು ರಾಷ್ಟ್ರ ಒಂದು ಚುನಾವಣೆ ಎನ್ನುವ ಮಸೂದೆಯನ್ನು ಪರಿಚಯಿಸುವ ಸಾಧ್ಯತೆ ಇದೆ. ಈ ಹಿಂದೆ ಹಲವು ಬಾರಿ ಇದರ ಬಗ್ಗೆ ಪ್ರಸ್ತಾವನೆ ಮಾಡಲಾಗಿದ್ದರೂ ಕೂಡ ಹಲವು ಪಕ್ಷಗಳು ಇದನ್ನು ಒಪ್ಪಿಕೊಳ್ಳದೆ ಇರುವ ಕಾರಣ ಒಮ್ಮತದ ಅಭಿಪ್ರಾಯವಿಲ್ಲದೆ ಈ ಮಸೂದೆ ಮಂಡಿಸಲು ಸಾಧ್ಯವಾಗಿಲ್ಲ. ಒಂದು ರಾಷ್ಟ್ರ ಒಂದು ಚುನಾವಣೆ ಕಲ್ಪನೆಯ ಅಡಿಯಲ್ಲಿ ಲೋಕಸಭೆ ಮತ್ತು ಎಲ್ಲಾ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ಕೂಡ ಒಂದೇ ದಿನ ಒಂದೇ ಮತದಾನದಲ್ಲಿ ಮಾಡಿ ಮುಗಿಸುವುದರ ಮೂಲಕ ಕೋಟ್ಯಾಂತರ ರೂಪಾಯಿಗಳ ಚುನಾವಣೆ ವೆಚ್ಚವನ್ನು ಉಳಿಸಬಹುದು ಎನ್ನುವುದು ಈ ಮಸೂದೆಯ ಉದ್ದೇಶ.
ಸಪ್ಟೆಂಬರ್ 18-22 ರಲ್ಲಿ ನಡೆಯಲಿರುವ ವಿಶೇಷ ಅಧಿವೇಶನದ ಬಗ್ಗೆ ಕುತೂಹಲ ಹೆಚ್ಚಾಗಿದ್ದು ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಜೊತೆಗೆ ಬಹುನಿರೀಕ್ಷಿತ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಅಂಗೀಕಾರಗೊಳ್ಳಬಹುದೇ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.