Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ಇದ್ದ ಎಲ್ಲರಿಗೂ ಸರ್ಕಾರದ ಕೊನೆಯ ಹೊಸ ಸೂಚನೆ

Advertisement

ಇಂದು ರೇಷನ್ ಕಾರ್ಡ್ (Ration Card) ಇದ್ದರೆ ಮಾತ್ರ ಹಲವು ಸರಕಾರದ ಸೌಲಭ್ಯ ಗಳನ್ನು ಕೂಡ ಪಡೆಯಲು ಸಾಧ್ಯ, ಮುಖ್ಯವಾಗಿ‌ ಇದು ಮಹಿಳೆಯರಿಗೆ ಸಿಗುವ ಗ್ಯಾರೆಂಟಿ ಯೋಜನೆಯಾದ ಗೃಹಲಕ್ಷ್ಮಿ ‌ಯೋಜನೆಗೆ ಈ ರೇಷನದ ಕಾರ್ಡ್ (Ration Card) ಆಗತ್ಯ ವಾದ ದಾಖಲೆ‌ಕೂಡ ಆಗಿದೆ, ಅದರೆ ಕೆಲವೊಂದು ಮಹಿಳೆ ಯರಿಗೆ ಈ ಹಣ ಜಮೆ ಯಾಗಿಲ್ಲ, ಯಾಕಂದ್ರೆ ಆಧಾರ್ (Aadhaar Card), ರೇಷನ್ ಕಾರ್ಡ್ ‌ಲಿಂಕ್ ಮಾಡದೇ ಇದ್ದರೂ ಈ‌ ಸಮಸ್ಯೆ‌ಎದುರಾಗಿರಬಹುದು, ಈ‌ ಗ್ಯಾರಂಟಿ ಯೋಜನೆಗಳನ್ನು ಪಡೆಯಲು‌ಹಲವರು‌ ಮಂದಿ ಹೊಸ ರೇಷನ್ ಕಾರ್ಡ್ ಗಾಗಿ‌ಕಾಯ್ತಾ ಇದ್ದಾರೆ, ಅದರೆ ಇದೀಗ ರೇಷನ್ ‌ಕಾರ್ಡ್ (Ration Card) ತಿದ್ದುಪಡಿಗಾಗಿ ಅವಕಾಶ ಕಲ್ಪಿಸಲಾಗಿದೆ

ಯಾವಾಗ ಅರ್ಜಿ ತಿದ್ದುಪಡಿ ಆರಂಭ:

ರೇಷನ್ ಕಾರ್ಡ್ ಗಳ (Ration Card) ತಿದ್ದುಪಡಿಗೆ ಇದೀಗ ಅವಕಾಶ ನೀಡಿದೆ, ಇದೀಗ ಹೊಸ ಸದಸ್ಯರ ಹೆಸರು ಸೇರ್ಪಡೆ, ಹೆಸರು ತಿದ್ದಪಡಿ, ಹೆಸರು ತೆಗೆಯಲು ಅವಕಾಶ ಕಲ್ಪಿಸಿದೆ, ಸೆಪ್ಟೆಂಬರ್ ಒಂದು‌ ಅಂದರೆ ಇಂದಿನಿಂದ ಪಡಿತರ ಚೀಟಿಯ ತಿದ್ದುಪಡಿ ಗೆ ಅವಕಾಶ ನೀಡಲಾಗಿದೆ, ಇನ್ನು ಅರ್ಜಿ ತಿದ್ದುಪಡಿಗೆ ಸೆ.10 ಕೊನೆಯ ದಿನಾಂಕ ವಾಗಿದೆ.

ದಾಖಲೆ‌ ಅಗತ್ಯ:

ಈಗಾಗಲೇ ನಿಮ್ಮಲ್ಲಿರುವ ಪಡಿತರ ಚೀಟಿಗೆ ಹೊಸದಾಗಿ ಸದಸ್ಯರನ್ನು ಸೇಪರ್ಡೆ ಮಾಡುವುದಾದರೆ ಅದಕ್ಕೆ ಬೇಕಾದ ದಾಖಲೆಗಳನ್ನು ನೀಡಬೇಕಾಗುತ್ತದೆ,

ಯಾವ ದಾಖಲೆ:

ಒಂದು ವೇಳೆ ರೇಷನ್ ಕಾರ್ಡ್ ಗೆ ವ್ಯಕ್ತಿಯ ಹೆಸರು ಸೇರಿಸುದಾದರೆ, ವ್ಯಕ್ತಿಯ ಕಾರ್ಡ್ ನೀಡಬೇಕಿದೆ. ಆಧಾರ್ ಸಂಖ್ಯೆಯ ಮಾಹಿತಿ ಯೊಂದಿಗೆ ಇ-ಕೈವೆಸಿ ಆಗಿರಬೇಕಿದೆ.ಅದೇ ಮದುವೆಯ ನಂತ್ರ ಮಹಿಳೆಯ ಆಧಾರ್ ಕಾರ್ಡ್ (Aadhaar Card), ವಿವಾಹ ನೋಂದಣಿ ಪತ್ರ, ಗಂಡನ ಪಡಿತರ ಪೋಟೋ ನೀಡಬೇಕು.

ಅರ್ಜಿ ಸಲ್ಲಿಸಿ:

ರೇಷನ್ ಕಾರ್ಡ್ ತಿದ್ದು ಪಡಿ ಮಾಡದವರು ಅದಷ್ಟು ಬೇಗನೆ ತಿದ್ದುಪಡಿ ‌ಮಾಡಬೇಕಿದೆ, ಹೊಸ ಕಾರ್ಡ್ ಅರ್ಜಿ‌ಸಲ್ಲಿಕೆ ಕೂಡ ಶೀಘ್ರದಲ್ಲಿಯೇ ನೀಡಲಿದೆ, ಸೇವಾ ಸಿಂಧು‌, ಬಾಪೂಜಿ‌ ಒನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿ.

Leave A Reply

Your email address will not be published.