ರಾಜ್ಯದ ಮಹಿಳೆಯರು ಬಹಳಷ್ಟು ಮಹಿಳೆಯರು ಈ ಯೋಜನೆ ಗಾಗಿ ಕಾಯ್ತಾ ಇದ್ದರು, ಕೊನೆಗೂ ಕಾಯುತ್ತಿದ ಕ್ಷಣ ಬಂದೇ ಬಿಟ್ಟಿದೆ. ಹೌದು ಕಾಂಗ್ರೆಸ್ (Congress). ಸರ್ಕಾರದ ಬಹು ನಿರೀಕ್ಷಿತ ನಾಲ್ಕನೇ ಗ್ಯಾರಂಟಿ ಮಹಿಳೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹ ಲಕ್ಷ್ಮೀ ಯೋಜನೆ (Gruha Lakshmi Yojana) ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದ್ದಾರೆ, ಈಗಾಗಲೇ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಹಣ ಕೂಡ ಜಮೆ ಯಾಗಿದೆ, ಇದೀಗ ಯಾರೆಲ್ಲ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿಲ್ಲವೋ ಇನ್ನೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಏನೆಲ್ಲಾ ದಾಖಲೆಗಳು ಬೇಕು?
ಗೃಹಲಕ್ಷ್ಮಿ ಯೋಜನೆಗೆ (Gruha Lakshmi Yojana) (ಆಗಸ್ಟ್ 30) ರಂದು ಚಾಲನೆ ಸಿಕ್ಕಿದೆ, ಇನ್ನೂ ಕೂಡ ನೀವು ಅರ್ಜಿ ಸಲ್ಲಿಕೆ ಮಾಡದಿದ್ದರೆ ಅರ್ಜಿ ಸಲ್ಲಿಸಬಹುದಾಗಿದೆ, ಈಗಲೂ ನಿಮಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು. ಮಾಹಿತಿ ಇಲ್ಲಿದೆ.
ದಾಖಲೆಗಳು ಏನು?
- ಪಡಿತರ ಚೀಟಿ
- ಆಧಾರ್ ಸಂಖ್ಯೆ
- ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ಮಾಹಿತಿ
ಈ ದಾಖಲೆಗಳು ಇದ್ದರೆ, ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ, ತಿಂಗಳಿಗೆ 2000 ಸಾವಿರ ಹಣ ಪಡೆಯಬಹುದಾಗಿದೆ
ರೇಷನ್ ಕಾರ್ಡ್ ಆಪ್ಡೆಡ್ ಗೆ ಅವಕಾಶ ಇದೆ:
ಈಗಾಗಲೇ ಕೆಲವು ಮಹಿಳೆಯರು ರೇಷನ್ ಕಾರ್ಡ್ (Ration Card) ತಿದ್ದುಪಡಿ ವಿಚಾರದಲ್ಲಿ ಅಪ್ಲೈ ಮಾಡಲು ಸಾಧ್ಯ ವಾಗಿಲ್ಲ, ಈಗ ಇದಕ್ಕೂ ಅವಕಾಶ ನೀಡಲಾಗಿದೆ,ರೇಷನ್ ಕಾರ್ಡ್ ಲೀಸ್ಟ್ ನಲ್ಲಿ ಮೊದಲು ಕುಟುಂಬದ ಮಹಿಳೆಯ ಹೆಸರು ಯಾರದ್ದು ಇದೆಯಾ? ಅವರಿಗೆ ಈ ಹಣ ಜಮೆ ಯಾಗುತ್ತದೆ, ತಿದ್ದು ಪಡಿ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಕೊನೆ ದಿನಾಂಕ ಯಾವಾಗ?
ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಅರ್ಜಿ ಸಲ್ಲಿಕೆ ಮಾಡಲು ಇನ್ನು ಕೂಡ ಕೊನೆಯ ದಿನಾಂಕ ನಿಗದಿ ಮಾಡಿಲ್ಲ, ಇದು ನಿರಂತರ ನಡೆಯುವ ಪ್ರಕ್ರಿಯೆ ಆಗಿದ್ದು ಯಾವಾಗ ಬೇಕಾದರೂ ನೀವು ಅರ್ಜಿ ಸಲ್ಲಿಕೆ ಕೂಡ ಮಾಡಬಹುದಾಗಿದೆ, ಸೇವಾಸಿಂಧು ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಕೆ ಮಾಡಿ.