Gruha Jyothi: ಗ್ರಹಜ್ಯೋತಿ ಕರೆಂಟ್ ಕೊಟ್ಟ ಕೆಲವೇ ದಿನಕ್ಕೆ ಹೊಸ ರೂಲ್ಸ್! ಸರ್ಕಾರದ ಇನ್ನೊಂದು ನಿರ್ಧಾರ

Advertisement
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಆಡಳಿತದಿಂದ ಅನೇಕ ಯೋಜನೆಗಳು ಈಗ ಮತ್ತೆ ಸಕ್ರಿಯವಾಗುತ್ತಿದೆ. ಅದೇ ರೀತಿ ಶಕ್ತಿಯೋಜನೆ, ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮೀ (Gruha lakshmi) ಬಹುಮಟ್ಟಿಗೆ ಯಶಸ್ವಿ ಆಗುತ್ತಿದ್ದು ಉಳಿದಂತೆ ಯುವನಿಧಿ (Yuvanidhi) ಇನ್ನಷ್ಟೇಬರಬೇಕು. ಗೃಹಜ್ಯೋತಿ (Gruha Jyothi) ಸೌಲಭ್ಯದಿಂದ ಶೂನ್ಯ ಬಿಲ್ ಕಂಡು ಸಂತೃಪ್ತರಾದ ಗ್ರಾಹಕರಿಗೆ ಇದೀಗ ತಲೆ ಕೆಡಿಸಿಕೊಳ್ಳುವ ಸಮಾಚಾರ ಒಂದು ಸಿದ್ಧವಾಗಿದೆ.
ವಿಧಾನ ಸಭೆ ಚುನಾವಣೆ ಅವಧಿಯಲ್ಲಿ ಅನೇಕ ಕೆಲಸ ಕಾರ್ಯಗಳಿಗೆ ತಾತ್ಕಾಲಿಕ ತಡೆ ಇದ್ದು ಅಂತಹದ್ದೆ ಒಂದು ಕ್ರಮ ಈಗ ವಿದ್ಯುತ್ ಬಿಸಿಗೆ ಕಾರಣವಾಗಿದೆ. ಚುನಾವಣೆ ಹಿನ್ನೆಲೆ ವಸೂಲು ಮಾಡದೇ ಉಳಿದಿರುವ ಇಂಧನ ಮತ್ತು ಹೊಂದಾಣಿಕೆ ವೆಚ್ಚದ ಹಳೆಬಾಕಿ ಎಲ್ಲವೂ ಗ್ರಾಹಕರ ಮೇಲೆ ಹೊರೆಯಾಗುವ ಸಾಧ್ಯತೆ ಇದೆ. ಪ್ರತಿ ತಿಂಗಳ ವಿದ್ಯುತ್ ಬೆಲೆಯ ಮೇಲೆ ಯುನಿಟ್ ಗೆ 1.15 ರೂ.ವೆಚ್ಚ ಹೆಚ್ಚಳವಾಗಲಿದೆ. ಸದ್ಯ ಬೆಂಗಳೂರಿನ ವಿದ್ಯುತ್ ಸರಬರಾಜಿನದ (ಬೆಸ್ಕಾಂ) (Bescom) ನಿಂದ ಈ ವಿದ್ಯುತ್ ಮೊತ್ತ ವಸೂಲು ಮಾಡಲು ಆದೇಶ ಬಂದಿದ್ದು ಜನ ಸಾಮಾನ್ಯರಿಗೆ ಫ್ರೀ ಇದ್ರು ಕೆಲ ನಿರ್ದಿಷ್ಟ ಮೊತ್ತ ಕಟ್ಟ ಬೇಕಾಗಿ ಬರಲಿದೆ.
ಯಾರಿಗೆ ಹೊರೆ ಆಗುತ್ತೆ?
ಗೃಹಜ್ಯೋತಿ (Gruha Jyothi) ಅನ್ವಯ ಫ್ರೀ ವಿದ್ಯುತ್ ಪಡೆದವರಿಗೆ ಅಂದರೆ 200 ಯುನಿಟ್ ವರೆಗೆ ಈ ಒಂದು ದರ ಅನ್ವಯ ಆಗಲಾರದು ಬಳಕೆ ಇನ್ನೂರು ಯುನಿಟ್ ಮೀರುತ್ತಿದ್ದಂತೆ ಪ್ರತಿ ಯುನಿಟ್ ಮೇಲೆ ಈ ಅಧಿಕ ದರ ಅನ್ವಯವಾಗಲಿದೆ ಮತ್ತಿ ಪೂರ್ತಿ ಮೊತ್ತ ಸಹ ಭರಿಸಬೇಕಾಗುತ್ತದೆ. ಗೃಹಬಳಕೆ, ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಬಳಕೆದಾರರಿಗೆ ಈ ಹೊರೆ ತಟ್ಟಲಿದೆ. ಸಾಮಾನ್ಯ ಇನ್ನೂರು ಯುನಿಟ್ ಒಳಗೆ ಬಳಸುವವರ ವಿದ್ಯುತ್ ಶುಲ್ಕ ಶೂನ್ಯವಾಗಿದ್ದು ಸರಕಾರವೇ ಈ ಅಧಿಕ ವೆಚ್ಚ ಸಹ ಭರಿಸಲಿದೆ.
ಪ್ರತಿ ತಿಂಗಳ ಹೊಂದಾಣಿಕೆ ವೆಚ್ಚ ಎಂದರೆ 2023 ರ ಸಾಲಿನಲ್ಲಿ ಎಪ್ರಿಲ್ ಜೂನ್ ತಿಂಗಳ ಇಂಧನ ಹೊಂದಾಣಿಕೆಯ ವೆಚ್ಚ ಬಾಕಿ ಇದ್ದು ಯುನಿಟ್ ಮೇಲೆ 64 ಪೈಸೆಯಂತೆ ಬೆಸ್ಕಾಂ ವಸೂಲಿ ಮಾಡುವುದಾಗಿ ಆದೇಶ ಬಂದಿದೆ. ಜುಲೈನಿಂದ ಸೆಪ್ಟೆಂಬರ್ , ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಎರಡು ಹಂತದಲ್ಲಿ ಬಾಕಿ ವಸೂಲಿಗೆ ಎಸ್ಕಾಂ (ESCOM) ನಿಂದ ಆದೇಶ ಬಂದಿದೆ. ಒಂದೆಡೆ ಈ ಅಧಿಕ ಹೊರೆ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮವನ್ನು ಕಾಡಲಿದ್ದರೆ ಇನ್ನೊಂದೆಡೆ ಮಳೆ ಕೊರತೆಯಿಂದ ಜಲಾಶಯಗಳು ಇನ್ನು ಭರ್ತಿ ಆಗಿಲ್ಲ.ಜಲವಿದ್ಯುತ್ ಉತ್ಪಾದನೆಯೂ ಇಲ್ಲ ಆದರೆ ವಿದ್ಯುತ್ ಬೇಡಿಕೆ ಮಾತ್ರ ತುಂಬಾ ಇದೆ.
ಈಗ ಲಭ್ಯ ಇರುವ ವಿದ್ಯುತ್ ಪ್ರಮಾಣ ಕಡಿಮೆ ಇದ್ದು ಯುನಿಟ್ ಮೇಲೆ ದರ ಏರಿಕೆ ಮಾಡಿ ಜನರು ಮಿತ ಬಳಕೆ ಮಾಡುವ ಕ್ರಮ ಬರುವ ಸಾಧ್ಯತೆ ಇದೆ. ಅತೀಯಾದ ಬೇಡಿಕೆ ಕಡಿಮೆ ಪೂರೈಕೆ ಇದ್ದರೆ ವಿದ್ಯುತ್ ಖರೀದಿ ಮಾಡಬೇಕಾಗುವುದು ಆ ಅಧಿಕ ಹೊರೆ ಕೂಡ ಜನರಿಗೆ ಬೀಳುವ ಸಾಧ್ಯತೆ ಇದೆ.ಈ ಬಗ್ಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ ಮಾತನಾಡಿ, ಮಿತವಾಗಿ ವಿದ್ಯುತ್ ಸಂಪನ್ಮೂಲಗಳ ಬಳಕೆ ಮಾಡಿ ಗೃಹಜ್ಯೋತಿ ಫ್ರೀ ಇರುತ್ತೆ ಎಂದು ಅಸಡ್ಡೆ ಮಾಡಬೇಡಿ ಹಿತ ಮಿತ ಬಳಕೆ ಉತ್ತಮ ಎಂಬ ಕರೆ ನೀಡಿದ್ದಾರೆ.