ಸಾಮಾನ್ಯವಾಗಿ ನೀವೆಲ್ಲರೂ ರೂ.10 ನಾಣ್ಯ (10 Rupee Coin) ಹಾಗೂ 20 ರೂಪಾಯಿ ನಾಣ್ಯಗಳನ್ನು ನೋಡಿರುತ್ತೀರಾ..? ಆದರೆ ಅದು 10.20 ರೂಪಾಯಿಗಳ ನೋಟಿನ ವೇಗದಲ್ಲಿ ಚಲಾವಣೆ ಆಗುತ್ತದೆ ಎಂದು ಕೇಳಿದರೆ ನಮ್ಮ ಬಳಿ ಉತ್ತರವಿಲ್ಲ, ಏಕೆಂದರೆ ಈಗಲೂ ಕೂಡ ಹತ್ತು ರೂಪಾಯಿ ನಾಣ್ಯಗಳನ್ನು ಸ್ವೀಕರಿಸಲು ಹಲವಾರು ಜನರು ಹಿಂದೂ ಮುಂದು ನೋಡುತ್ತಾರೆ.
ಇನ್ನು ಕೆಲವರಂತೂ ಆ ರೀತಿ ನಾಣ್ಯಗಳು ಚಲಾವಣೆಯಲ್ಲಿ ಇಲ್ಲ ಎಂಬ ಸಲಹೆಗಳನ್ನು ಕೂಡ ನೀಡುತ್ತಾರೆ, ಇಷ್ಟಕ್ಕೂ ಯಾವುದು ನಿಜ ಎಂಬ ಮಾಹಿತಿ ಇಲ್ಲಿದೆ, ವಹಿವಾಟು ಮತ್ತು ಪಾವತಿಗಾಗಿ ರೂ.10 ರೂಪಾಯಿ ನಾಣ್ಯ ವನ್ನು ಸ್ವೀಕರಿಸಲು ರಿಸರ್ವ್ ಬ್ಯಾಂಕ್ (RBI) ತೆಗೆದುಕೊಂಡ ಜಾಗೃತಿ ಪ್ರಯತ್ನಗಳು ಬಹಳಷ್ಟಿದೆ.
ಖುದಾಗಿ ಹತ್ರುಪಾಯಿ ನಾಣ್ಯಗಳನ್ನು ಚಲಾವಣೆ ಮಾಡುವಂತೆ ವಿವರಿಸಿತ್ತು, ಆರ್ ಬಿ ಐ (RBI) ಇಷ್ಟೆಲ್ಲಾ ಪ್ರಯತ್ನಗಳನ್ನು ಮಾಡಿದ ನಂತರವೂ ಕೂಡ ಅಂಗಡಿಯವರು, ವ್ಯಾಪಾರಿಗಳು ಮತ್ತು ಸಾಮಾನ್ಯ ಸಾರ್ವಜನಿಕರು ರೂ.10 ನಾಣ್ಯ (10 Rupee Coin) ಗಳ ಸ್ವೀಕಾರ ಮತ್ತು ಬಳಕೆಯನ್ನು ನಿರಾಕರಿಸುವುದನ್ನು ರಾಜ್ಯ ಆರ್ಥಿಕ ಇಲಾಖೆಯು ಗಮನಿಸಿದೆ.

ವ್ಯಾಪಾರಿಗಳು, ಸಾರ್ವಜನಿಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10 ನಾಣ್ಯ (10 Rupee Coin) ಗಳನ್ನು ಸ್ವೀಕರಿಸಬೇಕು. ಭಾರತೀಯ ನಾಣ್ಯಗಳ ಕಾಯಿದೆ 2011 ರ ಸೆಕ್ಷನ್ 6ರ ಪ್ರಕಾರ ಅದರಲ್ಲಿ ನಿರ್ದಿಷ್ಟಪಡಿಸಿದ ನಾಣ್ಯಗಳು ಕಾನೂನುಬದ್ಧವಾಗಿರುತ್ತವೆ, ಎಲ್ಲರೂ ದಿನ ನಿತ್ಯದ ವಹಿವಾಟುಗಳಿಗಾಗಿ ಸ್ವೀಕರಿಸಬಹುದಾಗಿದೆ. ರೂ.10 ನಾಣ್ಯ (10 Rupee Coin) ಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011 ರ ಸೆಕ್ಷನ್ 6(1) ರ ಉಲ್ಲಂಘನೆಯಾಗಿದೆ.
ನಾಣ್ಯಗಳ ಬಗ್ಗೆ ತಪ್ಪು ದಾರಿಗೆಳೆಯುವ ಮಾಹಿತಿಯನ್ನು ನಂಬಬಾರದು ಮತ್ತು ವದಂತಿಗಳಿಗೆ ಕಿವಿಗೊಡಬಾರದು. ಎಲ್ಲಾ ಬ್ಯಾಂಕ್‍ಗಳೂ ತಮ್ಮ ವಹಿವಾಟುಗಳಲ್ಲಿ ನಾಣ್ಯಗಳನ್ನು ಸ್ವೀಕರಿಸಲು ಹಾಗೂ ತಮ್ಮ ಎಲ್ಲಾ ಶಾಖೆಗಳಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ನಾಣ್ಯಗಳ ಮಾಹಿತಿಗಾಗಿ www.rbi.org.in/coins ಗೆ ಭೇಟಿ ನೀಡಬಹುದಾಗಿದೆ, ಇನ್ನು ಆರ್.ಬಿ.ಐ (RBI) ವು ಸಾರ್ವಜನಿಕರ ವಹಿವಾಟಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕಾಲಕಾಲಕ್ಕೆ ನಾಣ್ಯಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ರೂ.10 ಮುಖ ಬೆಲೆಯ ನಾಣ್ಯ ಚಲಾವಣೆಯಲ್ಲಿದ್ದು, ಅಧಿಕೃತವಾಗಿ ಅವುಗಳನ್ನು ಸ್ವೀಕರಿಸಬೇಕು.