Karnataka Times
Trending Stories, Viral News, Gossips & Everything in Kannada

Police Constable: ಪೊಲೀಸ್ ಕಾನ್ಸ್ಟೇಬಲ್ ನೌಕರಿಯನ್ನು ಪಡೆಯುವುದು ಹೇಗೆ? ಬೇಕಾದ ಅರ್ಹತೆ ಇಲ್ಲಿದೆ

ಪೊಲೀಸ್ ಕಾನ್ಸ್ಟೇಬಲ್(Police Constable) ಹುದ್ದೆಯನ್ನು ಪಡೆಯುವುದು ಹೇಗೆ ಅದಕ್ಕೆ ಇರಬೇಕಾಗಿರುವಂತಹ ಅರ್ಹತೆಗಳೇನು ಎಂಬುದನ್ನು ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಮೊದಲಿಗೆ ನೀವು ಭಾರತೀಯನಾಗಿರಬೇಕು ಹಾಗೂ ನಿಮ್ಮ ದೈಹಿಕ ಆರೋಗ್ಯ ಎನ್ನುವುದು ಪರಿಪಕ್ವವಾಗಿರಬೇಕು. ವಯಸ್ಸಿನ ವಯೋಮಿತಿಯನ್ನು ನೋಡುವುದಾದರೆ ಕನಿಷ್ಠಪಕ್ಷ 19 ವರ್ಷವಾಗಿರಬೇಕು. ಗರಿಷ್ಟ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ 27 ವರ್ಷ ಹಾಗೂ ಸಾಮಾನ್ಯ ವರ್ಗದವರಿಗೆ 25 ವರ್ಷ ಮತ್ತು ಕಾಡಿನ ಬುಡಕಟ್ಟು ಜನಾಂಗದವರಿಗೆ 30 ವರ್ಷವಾಗಿರುತ್ತದೆ.

Advertisement

ಇನ್ನು ನಿಮ್ಮ ವಿದ್ಯಾರ್ಹತೆ(Education Qualifications) ಅನ್ನು ನೋಡುವುದಾದರೆ ಕನಿಷ್ಟ ಪಕ್ಷ ನೀವು PUC ಪಾಸ್ ಆಗಿರಬೇಕು ಅಥವಾ ಯಾವುದೇ ಡಿಪ್ಲೋಮಾದಲ್ಲಿ ಪದವಿಯನ್ನು ಪಡೆದಿರಬೇಕು. ಆಯ್ಕೆ ಪ್ರಕ್ರಿಯೆ ಏನು ಗಮನಿಸುವುದಾದರೂ ಮೊದಲಿಗೆ ಸಹಿಷ್ಣುತೆ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಆರೋಗ್ಯ ಪರೀಕ್ಷೆ ಲಿಖಿತ ಪರೀಕ್ಷೆ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಮಲ್ಟಿಪಲ್ ಚಾಯ್ಸ್ ಆಪ್ಷನ್ ಗಳು ಇರುತ್ತವೆ. ಸರಿಯಾದ ಉತ್ತರಕ್ಕೆ ಒಂದು ಅಂಕ ಹಾಗೂ ಪ್ರತಿಯೊಂದು ತಪ್ಪು ಉತ್ತರಕ್ಕೆ 0.25 ಅಂಕಗಳು ಕಡಿಮೆಯಾಗುತ್ತವೆ. ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ನೀತಿಶಾಸ್ತ್ರ ಹಾಗೂ ಭಾರತೀಯ ಸ್ವಾತಂತ್ರ ಹೋರಾಟಗಾರರ ಕುರಿತಂತೆ ಪ್ರಶ್ನೆಗಳು ಇದರಲ್ಲಿ ಇರುತ್ತವೆ.

Advertisement

ದೇಹದ ಆಡಳಿತ ಪರೀಕ್ಷೆಯಲ್ಲಿ ನಿಮ್ಮ ಎತ್ತರ ಕನಿಷ್ಠಪಕ್ಷ 168 ಸೆಂಟಿಮೀಟರ್ ಇರಬೇಕು. ಎದೆಯ ಸುತ್ತಳತೆ ಕನಿಷ್ಠಪಕ್ಷ 86 cm ಆಗಿರಬೇಕು. ಮಹಿಳೆಯರ ಕನಿಷ್ಠ ಎತ್ತರ 157 ಸೆಂಟಿಮೀಟರ್ ಹಾಗೂ ಕನಿಷ್ಠ ತೂಕ 45 ಕೆಜಿ ಆಗಿರಬೇಕು. ಸಹಿಷ್ಣು ಪರೀಕ್ಷೆಯಲ್ಲಿ 1600 ಮೀಟರ್ ಅನ್ನು ಆರು ನಿಮಿಷ 30 ಸೆಕೆಂಡ್ ಗಳಲ್ಲಿ ಕಂಪ್ಲೀಟ್ ಮಾಡಬೇಕು. ಉದ್ದ ಜಿಗಿತ ಎತ್ತರ ಜಿಗಿತ ಹಾಗೂ ಗುಂಡು ಎಸೆತದಂತಹ ಅಥ್ಲೆಟಿಕ್ಸ್ ಸ್ಪರ್ಧೆಗಳು ಕೂಡ ಇರುತ್ತವೆ. ಇನ್ನು ವೈದ್ಯಕೀಯ ಪರೀಕ್ಷೆಯಲ್ಲಿ ನಿಮ್ಮ ದೇಹದ ಎಕ್ಸರೇ(X Ray) ಹಾಗೂ ದೂರ ದೃಷ್ಟಿ ಮತ್ತು ಹತ್ತಿರದೃಷ್ಟಿಯನ್ನು ಚೆಕ್ ಮಾಡುತ್ತಾರೆ. ನಿಮ್ಮ ಶ್ರವಣಶಕ್ತಿ ಹಾಗೂ ರಕ್ತ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ.

Advertisement

ಇಲ್ಲಿ ಆಯ್ಕೆ ಆದ ನಂತರ ಮೊದಲಿಗೆ 9 ತಿಂಗಳ ಕಾಲ ನಿಮಗೆ ತರಬೇತಿ(Training) ಇರುತ್ತದೆ. ತರಬೇತಿ ಆದ ನಂತರ ನಿಮಗೆ ಒಂದು ಪರೀಕ್ಷೆ ಇದೆ ಅದನ್ನು ಪಾಸ್ ಮಾಡಬೇಕು. ಇನ್ನು ಸಂಬಳವನ್ನು ನೋಡುವುದಾದರೆ 23,500 ಇಂದ 47650 ವರೆಗೂ ತಿಂಗಳಿಗೆ ಸ್ಯಾಲರಿ ಸಿಗುತ್ತದೆ. ಇದರ ಜೊತೆಗೆ ನಿಮಗೆ ಪಿಂಚಣಿ ಸೌಲಭ್ಯ ಕೂಡ ಇರುವುದರಿಂದ ಇದೊಂದು ಭರವಸೆಯ ಕೆಲಸ ಎಂದರೆ ತಪ್ಪಾಗಲಾರದು. ಈ ಮಾಹಿತಿ ಒಂದು ವೇಳೆ ನೀವು ಪೊಲೀಸ್ ಕಾನ್ಸ್ಟೇಬಲ್ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೆ ಉಪಯುಕ್ತಕರವಾಗಿರಲಿದೆ ಎಂಬುದಾಗಿ ಭಾವಿಸುತ್ತೇವೆ.

Leave A Reply

Your email address will not be published.