Aadhaar Card: ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

Advertisement
ಆಧಾರ್ (Aadhaar Card) ಎನ್ನುವುದು ಎಲ್ಲ ದಾಖಲೆ ಕ್ಕಿಂತ ಅತ್ಯಂತ ಮಹತ್ವದ ದಾಖಲೆಯಾಗಿದೆ. ಸನೇಕ ಸರ್ಕಾರಿ ಸೌಲಭ್ಯಗಳಿಗೆ ಇದು ಅಗತ್ಯವಾಗಿರುತ್ತದೆ, ಆದ್ದರಿಂದ ಅದರ ಬಗ್ಗೆ ಯಾವುದೇ ಸೂಚನೆಗಳನ್ನು ಗಮನಿಸುವುದು ಕೂಡ ಅಷ್ಟೆ ಮುಖ್ಯ ವಾಗಿರುತ್ತದೆ, ನಾವು ಆಧಾರ್ ಸಂಬಂಧಿಸಿದ ಬದಲಾವಣೆಗಳು ಮತ್ತು ನವೀಕರಣಗಳ ಬಗ್ಗೆ ಸಮಯಕ್ಕೆ ಸರಿಯಾಗಿ ಸರ್ಕಾರವು ಮಾಹಿತಿ ನೀಡುತ್ತಲೇ ಇರುತ್ತದೆ, ಆಧಾರ್ ನೀಡಿದ 12 ಅಂಕಿಯ ವೈಯಕ್ತಿಕ ಗುರುತಿನ ಸಂಖ್ಯೆ, ಹೆಸರು, ಮಾಹಿತಿಗಳು ನಿಖರವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ, ಇದೀಗ ಜನರು ತಮ್ಮ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುಂತೆ ಸೂಚನೆ ನೀಡಲಾಗಿದೆ.
ಆಧಾರ್ ದಾಖಲೆ ಅಪ್‌ಡೇಟ್ ಯಾಕೆ ಮಾಡಬೇಕು?
ಜನರು ತಮ್ಮ ವಾಸಸ್ಥಳ ಬದಲಿಸಿದಾಗೆಲ್ಲಾ ಆಧಾರ್ ಕಾರ್ಡ್ (Aadhaar Card) ನಲ್ಲಿ ವಿಳಾಸ ಕೂಡ ಬದಲಿಸಿಕೊಳ್ಳಬಹುದು. ಜನ್ಮದಿನಾಂಕ ತಪ್ಪಿದ್ದರೆ, ಹೆಸರು ಇತ್ಯಾದಿ ವಿವರಗಳ ಬದಲಾವಣೆಗೂ ಇಲ್ಲಿ ಅವಕಾಶ ನೀಡಲಾಗಿದೆ, ಈ ನಿಟ್ಟಿನಲ್ಲಿ ಆಧಾರ್ಗೆ ನೊಂದಾಯಿತಗೊಂಡು ಪ್ರತೀ 10 ವರ್ಷಕ್ಕೊಮ್ಮೆ ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಕೂಡ ಅಗತ್ಯ, ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಮತ್ತೊಮ್ಮೆ ಆಪ್ ಡೆಟ್ ಮಾಡಬೇಕು, ಆಧಾರ್ನಲ್ಲಿ ವಂಚನೆ ಸಾಧ್ಯತೆಯನ್ನು ತಡೆಯಲು ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.
ಆಪ್ಡೇಟ್ ಮಾಡುವುದು ಹೇಗೆ:
Step 1. uidai.gov.in ವೆಬ್‌ಸೈಟ್‌ಗೆ ಭೇಟಿ ನೀಡಿ , My Aadhaar ನಲ್ಲಿ ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್ ಅನ್ನು ಕ್ಲಿಕ್ ಮಾಡಿ.
Step 2. ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಹಾಕಿ, ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒನ್ ಟೈಮ್ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ.
Step 3. ನಂತರ ನೀವು ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಕ್ಲಿಕ್ ಮಾಡಿ, ನಿಮ್ಮ ಯಾವ ದಾಖಲೆ ಬದಲಾಯಿಸಬೇಕು ಆ ವಿವರಗಳನ್ನು ನೀಡಿ
Step 4. ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ವಿಳಾಸ ಪುರಾವೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.
Step 5. ಇದನ್ನು ಪಿಡಿಎಫ್, ಜೆಪಿಇಜಿ ಅಥವಾ ಪಿಎನ್‌ಜಿಯಲ್ಲಿ ಅಪ್‌ಲೋಡ್ ಮಾಡಬಹುದು
Step 6. ಕೊನೆಯಲ್ಲಿ ನೀವು URN ಬಳಸಿಕೊಂಡು UIDAI ವೆಬ್‌ಸೈಟ್‌ನಲ್ಲಿ ನೀವು ಆಧಾರ್ ಬದಲಾವಣೆಗೆ ನೀಡಿದ ಮನವಿ ಸರಿಯಾಗಿದೇಯೆ ಎಂದು ಪರಿಶೀಲಿಸಬಹುದು