Karnataka Times
Trending Stories, Viral News, Gossips & Everything in Kannada

Dream 11: ಡ್ರೀಮ್11 ನಂತಹ ಆನ್ಲೈನ್ ಗೇಮಿಂಗ್ ಆಡುವ ಎಲ್ಲರಿಗೂ ಸರ್ಕಾರದ ಹೊಸ ನಿಯಮ

Advertisement

ಒಂದು ವೇಳೆ ನೀವು Dream 11 ಅಥವಾ ಇದೇ ರೀತಿ ಆನ್ಲೈನ್ ಮೂಲಕ ಹಣವನ್ನು ಗಳಿಸುವಂತಹ ಅಪ್ಲಿಕೇಶನ್ ಅಥವಾ ವೆಬ್ಸೈಟ್ ಗಳಿಂದ ಒಳ್ಳೆಯ ರೀತಿಯಲ್ಲಿ ಹಣವನ್ನು ಕಮಾಯಿ ಮಾಡುತ್ತಿದ್ದರೆ ಈ ಆರ್ಥಿಕ ವರ್ಷ ಅಂದರೆ ಏಪ್ರಿಲ್ 1ರಿಂದ ಗೆಲ್ಲುವ ಹಣದ ಮೇಲೆ ಸರ್ಕಾರಕ್ಕೆ ಭಾರಿ ತೆರಿಗೆಯನ್ನು ಕಟ್ಟಬೇಕಾಗುತ್ತದೆ. ಈ ಬಾರಿ ಬಜೆಟ್ ನಲ್ಲಿ ಕೂಡ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಗೆಲ್ಲುವ ಹಣದ ಮೇಲೆ 30% ಟ್ಯಾಕ್ಸ್ ಅನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ಇದರಲ್ಲಿ ಉಲ್ಲೇಖಿಸಲಾಗಿದೆ. ಅಂದರೆ 10,000 ಗಿಂತ ಅಧಿಕ ಗೆಲುವಿನ ಹಣದ ಮೇಲೆ ಈ ಶರತ್ತು ಆರಂಭವಾಗುತ್ತದೆ ಎಂದು ಹೇಳಬಹುದಾಗಿದೆ.

ಟ್ಯಾಕ್ಸ್ ಕಳ್ಳತನವನ್ನು ನಿಲ್ಲಿಸಲು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಇದೇ ಕಾರಣಕ್ಕಾಗಿ ಆನ್ಲೈನ್ ಗೇಮ್ಗಳಿಂದ ಹಣ ಗಳಿಸುವವರ ಜೇಬಿಗೆ ಕತ್ತರಿ ಬೀಳಲಿದೆ. ಇಷ್ಟು ದಿನ ಯಾರಾದರೂ 1000 ಎಂಟ್ರಿ ಫೀಸ್ ನೀಡಿ 12,000 ಗೆದ್ದರೆ ಸಿಗುವಂತಹ 11 ಸಾವಿರ ರೂಪಾಯಿಯಲ್ಲಿ ಟಿಡಿಎಸ್ 30% ಎಂದರೆ ಅವರ ಕೈಗೆ ಆ ಹಣದಲ್ಲಿ 3300 ಕಡಿತಗೊಂಡು ಸಿಗುತ್ತಿತ್ತು. ಇದು ಹಳೆಯ ವಿಧಾನದಲ್ಲಿ ಆನ್ಲೈನ್ ಗೇಮ್ಗಳಿಂದ ಜನರು ಗೆಲ್ಲುತ್ತಿದ್ದ ಹಣದ ವಿವರವಾಗಿತ್ತು.

ಆದರೆ ಈಗ ನೀವು ಸಾವಿರ ರೂಪಾಯಿ ಎಂಟ್ರಿ ನೀಡಿದರೆ ಆ ಆರಂಭಿಕ ಶುಲ್ಕವನ್ನು ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಅದನ್ನು ಹೊರಗಿಟ್ಟು 8000 ದಲ್ಲಿ 7000 ಮಾತ್ರ ನಿಮ್ಮ ಕೈಗೆ ನೀಡುವಂತೆ ಮಾಡಿ ಅದರಲ್ಲಿ ಎರಡು ಸಾವಿರದ ನೂರು ರೂಪಾಯಿ ಟ್ಯಾಕ್ಸ್ ಅನ್ನು ಕಡಿತಗೊಳಿಸುತ್ತಿದೆ. ಒಟ್ಟಾರೆಯಾಗಿ ಇತ್ತೀಚಿನ ದಿನಗಳಲ್ಲಿ ಡ್ರೀಮ್ 11 ಸೇರಿದಂತೆ ಇನ್ನು ಹಲವಾರು ಆನ್ಲೈನ್ ಫ್ಲ್ಯಾಟ್ ಫಾರ್ಮ್ ಗಳಿಂದ ಹಣವನ್ನು ಗೆಲ್ಲುತ್ತಿದ್ದ ಜನರಿಗೆ ಸರ್ಕಾರ ಟಿಡಿಎಸ್(TDS) ರೂಪದಲ್ಲಿ ತೆರಿಗೆ ಭಾರ ನೀಡಿರುವುದು ನಿಜಕ್ಕೂ ಕೂಡ ಅವರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.