Karnataka Times
Trending Stories, Viral News, Gossips & Everything in Kannada

Passport: ದೇಶಾದ್ಯಂತ ಪಾಸ್ಪೋರ್ಟ್ ಮಾಡುವವರಿಗೆ ಹೊಸ ನಿಯಮ, ಬಂಪರ್ ಸಿಹಿಸುದ್ದಿ

ಭಾರತದಲ್ಲಿ ಕೆಲವೊಂದು ಜನಪ್ರಿಯ ಯೋಜನೆಗಳು ಸಾಮಾನ್ಯ ಜನರಿಗೆ ಬೇಕಾಗಿರುವಂತಹ ಕೆಲವೊಂದು ಸೇವೆಗಳನ್ನು ತ್ವರಿತ ಗತಿಯಲ್ಲಿ ನೀಡುವಂತಹ ಪ್ರಯತ್ನವನ್ನು ಮಾಡುವುದರಿಂದಾಗಿ ಸಾಕಷ್ಟು ಜನಪ್ರಿಯವಾಗಿದೆ. ಅವುಗಳಲ್ಲಿ ತತ್ಕಾಲ್ ಯೋಜನೆ ಕೂಡ ಒಂದಾಗಿದೆ. ಇನ್ನು ಪಾಸ್ಪೋರ್ಟ್ ಆದಷ್ಟು ಬೇಗ ಸಿಗಬೇಕು ಎನ್ನುವವರು ತತ್ಕಾಲ್ ಪಾಸ್ಪೋರ್ಟ್ ಯೋಜನೆಯ(Tatkal Passport Yojane) ಮೂಲಕ ಕೇವಲ ಮೂರೇ ಮೂರು ದಿನಗಳಲ್ಲಿ ಪಾಸ್ಪೋರ್ಟ್ ಅನ್ನು ಪಡೆಯಬಹುದಾಗಿದೆ.

Advertisement

ಈ ಪ್ರಕ್ರಿಯೆಯಲ್ಲಿ ಮೊದಲಿಗೆ ನಿಮಗೆ ಮೂರು ದಿನಗಳ ಸಮಯದಲ್ಲಿ ಪಾಸ್ಪೋರ್ಟ್ ಅನ್ನು ನೀಡಲಾಗುತ್ತದೆ ನಂತರವಷ್ಟೇ ಪೊಲೀಸ್ ಚೆಕಿಂಗ್ (Checking) ಗಾಗಿ ಬರುತ್ತಾರೆ. ವಿದೇಶಿ ಸಚಿವಾಲಯ ಆದಷ್ಟು ಬೇಗವಾಗಿ ಪಾಸ್ಪೋರ್ಟ್ ಗಳನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಈ ತಕ್ಷಣದ ಯೋಜನೆಯನ್ನು ಜಾರಿಗೆ ತಂದಿದೆ. ಕೆಲವರಿಗೆ ಅರ್ಜೆಂಟಾಗಿ ಪ್ರಯಾಣ ಮಾಡುವ ಕಾರಣಕ್ಕಾಗಿ ಪಾಸ್ಪೋರ್ಟ್ ಬೇಕಾಗಿರುತ್ತದೆ. ಹೀಗಾಗಿ ನೀವು ಪಾಸ್ಪೋರ್ಟ್ ಇಂಡಿಯಾ ವೆಬ್ಸೈಟ್ಗೆ(Passport India Website) ಭೇಟಿ ನೀಡುವ ಮೂಲಕ ನಿಮ್ಮ ಅರ್ಜಿ ಅಪ್ರೂವ್ (Approve) ಆದ ಮೂರು ದಿನಗಳಲ್ಲಿ ನೀವು ಪಾಸ್ಪೋರ್ಟ್ ಅನ್ನು ಪಡೆಯಬಹುದಾಗಿದ್ದು ಇದಕ್ಕೆ ಬೇಕಾಗುವಂತಹ ದಾಖಲೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.

Advertisement

ಈ ವೆಬ್ಸೈಟ್ನಲ್ಲಿ ದಾಖಲೆಗಳ ಪಟ್ಟಿಗಳ ಪ್ರಕಾರ, ಪರಿಶೀಲನ ಸರ್ಟಿಫಿಕೇಟ್, Voter ID, ರೇಷನ್ ಕಾರ್ಡ್, LPG ಕನೆಕ್ಷನ್ ಬಿಲ್, ನಿಮ್ಮ ಬ್ಯಾಂಕಿನ ಪಾಸ್ ಬುಕ್ (Bank Pass Book) ಹಾಗೂ ಡ್ರೈವಿಂಗ್ ಲೈಸೆನ್ಸ್(Driving Licence), ಸೇವಾ ಫೋಟೋವಿನ ಗುರುತಿನ ಚೀಟಿ, ಸ್ಟುಡೆಂಟ್ ಸರ್ಟಿಫಿಕೇಟ್ (Student Certificate), ಪ್ರಾಪರ್ಟಿ ಡಾಕ್ಯುಮೆಂಟ್ (Property document), ಪೆನ್ಷನ್ ದಾಖಲೆ (Pension Document), ರೈಲ್ವೆ ಐಡಿ (Railway id) ಹಾಗೂ ನೀವು ಯಾವ ಸಮುದಾಯಕ್ಕೆ ಸೇರಿದ್ದೀರಿ ಅನ್ನುವ ಸರ್ಟಿಫಿಕೇಟ್ ಕೂಡ ಬೇಕಾಗುತ್ತದೆ. 18 ವರ್ಷ ವಯಸ್ಸಿಗಿಂತ ಕಡಿಮೆ ಇದ್ದರೆ ನೀವು ಕೇವಲ ಎರಡು ದಾಖಲೆಗಳನ್ನು ಸಬ್ಮಿಟ್ ಮಾಡಬೇಕಾಗುತ್ತದೆ ಒಂದು ವೇಳೆ 18 ವರ್ಷಕ್ಕೂ ಮೇಲ್ಪಟ್ಟವರಾಗಿದ್ದರೆ 3500 ರೂಪಾಯಿ ಶುಲ್ಕವನ್ನು ಕಟ್ಟಿ ನಿಮ್ಮ ವಿವರಗಳನ್ನು ಸಬ್ಮಿಟ್ ಮಾಡಬೇಕು. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ (Website) ಭೇಟಿ ನೀಡಿ.

Leave A Reply

Your email address will not be published.