Rules Change From April 1: ಏಪ್ರಿಲ್ 1 ರಿಂದ ಬದಲಾಗಿದೆ ಈ 20 ನಿಯಮಗಳು, ಎಲ್ಲರಿಗೂ ಖಡಕ್ ಸೂಚನೆ

Advertisement
ಈಗಾಗಲೇ ಏಪ್ರಿಲ್ 1ರಿಂದ 2023 ಹಾಗೂ 24ರ ಆರ್ಥಿಕ ವರ್ಷ ಪ್ರಾರಂಭವಾಗಿದ್ದು ಈ ಆರ್ಥಿಕ ವರ್ಷದ ಮೊದಲ ದಿನದಿಂದಲೇ ಮೋದಿ ನೇತೃತ್ವದ ಕೇಂದ್ರ ಸರ್ಕಾರ(Central Government) ಹಲವಾರು ಬದಲಾವಣೆಗಳನ್ನು ತಂದಿದ್ದು ಇದರಿಂದಾಗಿ ಜನರ ಜೆಬಿಗೆ ಮೇಲೆ ಸಾಕಷ್ಟು ಪರಿಣಾಮ ಬೀರುವಂತಹ ಯೋಜನೆಗಳು ಕೂಡ ಜಾರಿಯಾಗಿದೆ. ಹಾಗಿದ್ದರೆ ಬನ್ನಿ ಆ ಯೋಜನೆಗಳು ಹಾಗೂ ಹೊಸದಾಗಿ ಪರಿಚಿತವಾಗಿರುವಂತಹ ಕಾನೂನು ಗಳೇನು ಎಂಬುದನ್ನು ತಿಳಿಯೋಣ.
ಹಾಗಿದ್ದರೆ ಏಪ್ರಿಲ್ 1ರಿಂದ ಜಾರಿಗೆ ಬಂದಿರುವಂತಹ ಹೊಸ ನಿಯಮಗಳು ಯಾವುವು ಎಂಬುದನ್ನು ಒಂದೊಂದಾಗಿಯೇ ತಿಳಿಯೋಣ. ಹೊಸ ಕಂದಾಯ ವ್ಯವಸ್ಥೆಯ ಡಿಫಾಲ್ಟ್ ಯೋಜನೆ ಜಾರಿಯಾಗಿದ್ದು 87ಎ ನ ಪ್ರಕಾರ ಸಡಿಲಿಕೆ ಹೆಚ್ಚಾಗಿ 25,000 ವರೆಗೂ ತಲುಪಿದೆ. ಹೊಸ ಕಂದಾಯ ಯೋಜನೆಯ ಪ್ರಕಾರ ವಾರ್ಷಿಕ 7 ಲಕ್ಷ ಆದಾಯದವರೆಗೂ ಕೂಡ ಯಾವುದೇ ಟ್ಯಾಕ್ಸ್ ಅನ್ನು ಪಾವತಿ ಮಾಡುವ ಅವಶ್ಯಕತೆ ಇಲ್ಲ. ನಿವೃತ್ತಿಯ ನಂತರ Leave Encashment ನ ಗಡಿರೇಖೆ ಎನ್ನುವುದು 3 ಲಕ್ಷದಿಂದ 25 ಲಕ್ಷ ರೂಪಾಯಿ ಆಗಿಬಿಟ್ಟಿದೆ. Mutual Fund ಮೇಲೆ ಯಾವುದೇ LTCG ಲಾಭ ಇಲ್ಲ. ವ್ಯವಹಾರದ ಶುಲ್ಕದಲ್ಲಿ 6%ಗೂ ಮಿಕ್ಕಿದ್ದನ್ನು NSI ಹಿಂಪಡೆದುಕೊಳ್ಳುತ್ತದೆ.
ವರ್ಷಕ್ಕೆ 5 ಲಕ್ಷ ಪ್ರೀಮಿಯಂ ಇರುವಂತಹ ವಿಮಾ ಪಾಲಿಸಿಗೆ ಟ್ಯಾಕ್ಸ್ ಬೀಳುತ್ತದೆ. 2.5ಲಕ್ಷಕ್ಕೂ ಅಧಿಕ EOFO ನ ಮೇಲೆ ಕೂಡ ಟ್ಯಾಕ್ಸ್ ಬರೆ ಬೀಳಲಿದೆ. 10 ಕೋಟಿಗೂ ಅಧಿಕ ಆಸ್ತಿಯ ವ್ಯವಹಾರದ ಮೇಲೆ ಕೂಡ Gain Tax ಬೀಳುತ್ತೆ. Online Gaming ಬಹುಮಾನದ ಹಣದ ಮೇಲೆ ಕೂಡ TDS ಕಡಿತಗೊಳ್ಳುತ್ತದೆ. ತಂ’ ಬಾಕು ಪದಾರ್ಥಗಳ ಬೆಲೆ ಜಾಸ್ತಿ ಆಗಲಿದೆ. 2000ಕ್ಕೂ ಅಧಿಕ ಡೈರೆಕ್ಟ್ UPI ಟ್ರಾನ್ಸಾಕ್ಷನ್ ಮೇಲೆ 1.1% Inter Operability ಶುಲ್ಕ ಹಾಕಲಾಗುತ್ತದೆ. ಕಮರ್ಷಿಯಲ್ ಎಲ್ಪಿಜಿ ಮೇಲೆ ದರ ಕಡಿಮೆಯಾಗಲಿದೆ.
ಹೊಸ ಟ್ಯಾಕ್ಸ್ ರಿಜೀಮ್ ನಲ್ಲಿ ಕಡಿತದ ಲಾಭ ಸಿಗಲಿದೆ. ಹಿರಿಯ ನಾಗರಿಕರ ಸೇವಿಂಗ್ ಸ್ಕೀಮ್ ನಲ್ಲಿ ಡಿಪೋಸಿಟ್ 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಳವಾಗಿದೆ. ತಿಂಗಳ ಇನ್ಕಮ್ ಸ್ಕೀಮ್ ನಲ್ಲಿ ಖಾತೆಯಲ್ಲಿ ಸಿಂಗಲ್ ಅಕೌಂಟ್ ವಿಭಾಗದಲ್ಲಿ 4.5ರಿಂದ 9 ಲಕ್ಷ ಹಾಗೂ ಜಾಯಿಂಟ್ ಅಕೌಂಟ್ ನಲ್ಲಿ 7.5 ಲಕ್ಷದಿಂದ ಹದಿನೈದು ಲಕ್ಷ ರೂಪಾಯಿ ಆಗಿದೆ. ಕೆಲವು ಕಡೆಗಳಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದ್ದರೆ ಇನ್ನು ಕೆಲವು ಕಡೆಗಳಲ್ಲಿ ಹಣವನ್ನು ಉಳಿತಾಯ ಮಾಡುವಂತಹ ಯೋಜನೆಗಳು ಕೂಡ ಜಾರಿಗೆ ಬಂದಿವೆ.