ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card) ಅತ್ಯಂತ ಪ್ರಮುಖ ದಾಖಲೆಗಳಲ್ಲಒಂದಾಗಿದೆ. ಸರ್ಕಾರದ ಹಲವು ಯೋಜನೆಗಳಿಗೆ ಆಧಾರ್ ಕಾರ್ಡ್ ಅಗತ್ಯವಿದೆ. ಈಗ ಜನರು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಪ್ರಮುಖ ನವೀಕರಣವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇನ್ನು ನಿಮ್ಮ ಬಳಿ ಆಧಾರ್ ಕಾರ್ಡ್ (Aadhaar Card) ಇದ್ದು, ಅದು 10 ವರ್ಷ ಹಳೆಯದಾಗಿದ್ದಾರೆ ಅದನ್ನು ನೀವು ಇನ್ನು ಕೂಡ ಅಪ್ಡೇಟ್ ಮಾಡದಿದ್ದರೆ ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ. UIDAI ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ನೀವು ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಮಾಡಲು ಆಧಾರ್ ಕೇಂದ್ರಕ್ಕೆ ತೆರಳಬೇಕು ಅಲ್ಲಿ 25 ಅಥವಾ 50 ರೂಪಾಯಿಗಳು ಶುಲ್ಕವನ್ನು ನೀಡಬೇಕಾಗುತ್ತದೆ. ಆದರೆ ಇದೀಗ UIDAI ಆಧಾರ್ ಕಾರ್ಡ್ ಅಪ್ಡೇಟ್ ಅನ್ನು ಉಚಿತವಾಗಿ ಮಾಡಿಕೊಡಲು ಮುಂದಾಗಿದೆ. ಈ ಉಚಿತ ಆಧಾರ್ ನವೀಕರಣ (Free Aadhaar Update) ವನ್ನು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುತ್ತದೆ.
ನೀವು ಆಧಾರ್ ಕಾರ್ಡ್‌ನಲ್ಲಿ (Aadhaar Card) ಕೆಲವು ನವೀಕರಣಗಳನ್ನು ಮಾಡಲು ಬಯಸಿದರೆ, ನೀವು ಅದನ್ನು ಸೆಪ್ಟೆಂಬರ್ 14 ರವರೆಗೆ ಉಚಿತವಾಗಿ ಮಾಡಬಹುದು. ಇದರ ನಂತರ, ನವೀಕರಿಸಲು ಹಣ ಖರ್ಚಾಗುತ್ತದೆ.ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್ ವಿವರಗಳು ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡುವ ಸೌಲಭ್ಯವನ್ನು ಒದಗಿಸಿದೆ. ಈ ಮೊದಲು ಈ ಉಚಿತ ಸೇವೆ (Free Service) ಯು ಜೂನ್ 14,2023 ರವರೆಗೆ ಮಾತ್ರ ಇತ್ತು. ಆದರೆ ನಂತರ ಅದನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಯಿತು.
ದೇಶದ ಎಲ್ಲಾ ನಿವಾಸಿಗಳಿಗೆ ಆಧಾರ್ ನೋಂದಣಿ ಉಚಿತವಾಗಿದೆ. ಆಧಾರ್ ಸಂಖ್ಯೆ (Aadhaar Number) ಎಲ್ಲಾ ಜನರಿಗೆ ವಿಶಿಷ್ಟವಾಗಿದೆ. ಈ ಸಂಖ್ಯೆಯು ಜೀವಿತಾವಧಿಯಲ್ಲಿ ಮಾನ್ಯವಾಗಿರುತ್ತದೆ. ಆಧಾರ್ ಸಂಖ್ಯೆ ನಿವಾಸಿಗಳಿಗೆ ಬ್ಯಾಂಕಿಂಗ್, ಮೊಬೈಲ್ ಫೋನ್ ಸಂಪರ್ಕಗಳು ಮತ್ತು ಇತರ ಸರ್ಕಾರಿ ಮತ್ತು ಸರ್ಕಾರೇತರ ಸೇವೆ (Govt and Non-Govt Service) ಗಳನ್ನು ಸರಿಯಾದ ಸಮಯದಲ್ಲಿ ಪಡೆಯಲು ಸಹಾಯ ಮಾಡುತ್ತದೆ.
ಹಳೆಯ ಆಧಾರ್ ಕಾರ್ಡ್ (Aadhaar Card) ಅನ್ನು ಉಚಿತವಾಗಿ ನವೀಕರಿಸುವ ವಿಧಾನ:
- ಮೊದಲನೆಯದಾಗಿ ನೀವು ಅಧಿಕೃತ ವೆಬ್ಸೈಟ್ https://myaadhaar.uidai.gov.in/ ಗೆ ಭೇಟಿ ನೀಡಬೇಕು.
- ವಿಳಾಸವನ್ನು ನವೀಕರಿಸಲು ಮುಂದು ವರೆಯಿರಿ ಆಯ್ಕೆಯನ್ನು ಆಯ್ಕೆಮಾಡಿ,
- ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
- ಡಾಕ್ಯುಮೆಂಟ್ ಅಪ್‌ಡೇಟ್ ಮೇಲೆ ಕ್ಲಿಕ್ ಮಾಡಬೇಕು. ನಿವಾಸಿಯ ಪ್ರಸ್ತುತ ವಿವರಗಳು
- ಆಧಾರ್ ಬಳಕೆದಾರರು ತಮ್ಮ ವಿವರಗಳನ್ನು ಪರಿಶೀಲಿಸಬೇಕಾಗುತ್ತದೆ. ಸರಿಯಾಗಿ -ಕಂಡುಬಂದರೆ, ಮುಂದಿನ ಹೈ ಪರ್ಲಿಂಕ್ ಅನ್ನು ಕ್ಲಿಕ್ ಮಾಡಿ
- ಮುಂದಿನ ಹಂತದಲ್ಲಿ ಗ್ರಾಫ್‌ರನ್ ಪಟ್ಟಿಯಿಂದ ಗುರು ಪುರಾವ ಮತ್ತು ವಿಳಾಸದ ದಾಖಲೆಗಳ ಪುರಾವೆಗಳನ್ನು ಆಯ್ಕೆ ಮಾಡಬೇಕು.
- ವಿಳಾಸ ಪುರಾವೆಯ ಜ್ಞಾನ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು
- ಇಷ್ಟು ಮಾಡಿದರೆ ನಿಮ್ಮ ಆಧಾರ್ ನವೀಕರಣ ವಿನಂತಿಯನ್ನು ಸ್ವೀಕರಿಸಲಾಗುತ್ತದೆ.
Aadhaar Card New Rule on Penalties
Also Read: Aadhaar Card: ಆಧಾರ್ ಕಾರ್ಡ್ ಅಪ್ಡೇಟ್ ಆನ್ ಲೈನ್ ನಲ್ಲಿ ಮಾಡುವಾಗ ಎಚ್ಚರ