Karnataka Times
Trending Stories, Viral News, Gossips & Everything in Kannada

Supreme Court: ದೀಪಾವಳಿ ಹಬ್ಬಕ್ಕೂ ಮುನ್ನವೇ ಸುಪ್ರೀಂ ಕೋರ್ಟ್ ನಿಂದ ಮಹತ್ವದ ನಿರ್ಧಾರ

ಯಾವುದೇ ಹಬ್ಬ ಇನ್ನಿತರ ಸಂದರ್ಭದಲ್ಲಿ ನಮ್ಮ ಅದ್ಧೂರಿ ಪ್ರದರ್ಶನಕ್ಕೆ ಅಥವಾ ಮಕ್ಕಳ ಖುಷಿಗಾಗಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತೇವೆ. ಪಟಾಕಿ ಪರಿಸರಕ್ಕೆ ಹಾನಿ ಎಂಬುದು ತಿಳಿದಿದ್ದರೂ ಅದರ ಬೇಡಿಕೆ ಇಂದಿಗೂ ಹಾಗೇ ಇದೆ ಈ ನಿಟ್ಟಿನಲ್ಲಿ ಪರಿಸರ ಮಾರಕವಾಗುವ ಪಟಾಕಿ ಉತ್ಪನ್ನಗಳ ಕುರಿತಾಗಿ ಸುಪ್ರೀಂ ಕೋರ್ಟ್ (Supreme Court) ಈಗ ಒಂದು ಗಂಭೀರ ನಿರ್ಣಯಕ್ಕೆ ಬಂದಿದೆ.

Advertisement

ಪಟಾಕಿ (Fireworks) ಸಿಡಿಸಿದರಷ್ಟೇ ಮಾರಕವಲ್ಲ ಬದಲಾಗಿ ಅದರ ಉತ್ಪಾದನಾ ಕ್ರಮ ಕೂಡ ಮಾರಕವೇ. ಪಟಾಕಿ ಉತ್ಪಾದನೆ (Fireworks Production) ಮಾಡುವ ಕಂಪೆನಿಗಳಿಂದ ರಾಸಾಯನಿಕ ಬಳಕೆ ಮಾಡುವ ಕಾರಣ ಸುತ್ತ ಮುತ್ತಲಿನ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಇದು ಹಾನಿಯಾಗಿದ್ದು ಈ ಹಿಂದೆ ಅನೇಕ ಪ್ರಕರಣ ಉತ್ಪಾದನೆ ತಡೆಗೆ ಸಂಬಂಧಿಸಿದಂತೆ ಕೋರ್ಟಿನ ಮೊರೆ ಹೊಕ್ಕಿದೆ. ಹಾಗಾಗಿ ಕೋರ್ಟ್ ಕೂಡ ಈಗ ವಿನೂತನ ಕ್ರಮ ಕೈಗೊಳ್ಳಲು ಮುಂದಾಗಿದೆ.

Advertisement

ಪ್ರಕರಣ ಜಾರಿ:

Advertisement

2015ರಲ್ಲಿ ಅರ್ಜುನ್ ಗೋಪಾಲ್ (Arjun Gopal) ಎನ್ನುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಪಟಾಕಿ ಉತ್ಪನ್ನ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಸಂಪೂರ್ಣ ನಿಷೇಧಿಸುವಂತೆ ಅರ್ಜಿಯನ್ನು ಕೋರಲಾಗಿದ್ದು ಈ ಬಗ್ಗೆ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ (A.S. Bopanna) ಅವರು ಹಾಗೂ ಎಂ.ಎಂ. ಸುಂದರೇಶ್ (MM Sundaresh) ಅವರು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.

Advertisement

ಈ ಮೂಲಕ ಕೇಂದ್ರ ಸರಕಾರ (Central Govt) ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (Petroleum and Explosive Safety Institute) ಗೆ ದೇಶದೆಲ್ಲೆಡೆ ಹಸಿರು ಪಟಾಕಿ ಹೊರತಾದ ಪಟಾಕಿ ಉತ್ಪಾದನೆ (Fireworks Production) ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಯಾವ ನಿಯಮ ಕ್ರಮ ಕೈಗೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮೂಲಕ ಪ್ರಶ್ನಿಸಲಾಗಿದೆ. ಇದೇ ವಿಚಾರಣೆಗೆ ಕೇಂದ್ರ ಮತ್ತು ನಿಯಂತ್ರಣ ಸಂಸ್ಥೆಯ ಪರವಾಗಿ ಐಶ್ವರ್ಯಾ ಭಾಟಿ ಅವರು ಕೆಲ ಈ ಪ್ರಶ್ನೆ ಕೇಳಿದ್ದಾರೆ‌.ಆಗ ಸರಿಯಾಗಿ ನಿಯಮ ಪಾಲನೆ ಆದರೆ ಈ ಪ್ರಶ್ನೆ ಬರುತ್ತಿರಲಿಲ್ಲ ಎಂದು ನ್ಯಾಯಪೀಠವೇ ಹೇಳಿದೆ.

Image Source: OpIndia

ಸದ್ಯ ಉತ್ಪಾದನೆ ಮತ್ತು ಮಾರಾಟಕ್ಕೆ ಸ್ಪೋಟಕ ಮಾರಾಟ ತಡೆಯ ನಿಯಮಗಳ ಪರಿಶೀಲನೆ ಹಾಗೂ ಈ ಬಗ್ಗೆ ಮೇಲ್ವಿಚಾರಣೆ ಮಾಡಲು ವಿಚಾರಣೆ ಮಾಡಲಾಗುವುದು ಎಂದು ಕೇಂದ್ರ ಮತ್ತು ಸ್ಫೋಟಕ ನಿಯಂತ್ರಣ ಸಂಸ್ಥೆ ತಿಳಿಸಿದೆ‌. ಪಟಾಕಿ ಉದ್ಯಮದಿಂದ ಎಂಟು ಲಕ್ಷಕ್ಕೂ ಅಧಿಕಜನ ಬದುಕು ಕಟ್ಟಿಕೊಂಡಿದ್ದು ಉದ್ಯೋಗ ಸಮಸ್ಯೆ ಎದುರಾಗಬಹುದು. ಈ ಬಗ್ಗೆ ತಜ್ಞರ ಸಲಹೆ ಪಡೆಯುವ ಮೂಲಕ ಹಾನಿಕಾರಕವಲ್ಲದಂತೆ ಸಂಸ್ಥೆ ಮುಂದುವರಿಯಲಿದೆ ಎಂದು ನ್ಯಾಯಪೀಠದ ಮುಂದೆ ಕೇಂದ್ರ ಹಾಗೂ ಸ್ಪೋಟಕ ನಿಯಂತ್ರಣ ಸಂಸ್ಥೆ ತಿಳಿಸಿದೆ‌.ಈ ಬಗ್ಗೆ ಮುಂದಿನ ವಿಚಾರಣೆ ಸೆ. 13 ಕ್ಕೆ ತಿಳಿದುಬರಲಿದ್ದು ಏನಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಉದ್ಭವಿಸಿದೆ.

An important decision by the Supreme Court just before the festival of Diwali

Leave A Reply

Your email address will not be published.