Karnataka Times
Trending Stories, Viral News, Gossips & Everything in Kannada

Fixed Deposit: 5 ಲಕ್ಷಕ್ಕಿಂತ ಹೆಚ್ಚಿನ FD ಇಟ್ಟವರಿಗೆ ರಿಸರ್ವ್ ಬ್ಯಾಂಕ್ ಹೊಸ ಸೂಚನೆ

ಪ್ರತಿಯೊಬ್ಬರು ಕೂಡ ದುಡಿದ ಹಣವನ್ನು ತಮ್ಮ ಮುಂದಿನ ಭವಿಷ್ಯಕ್ಕಾಗಿ ಅಥವಾ ಕಷ್ಟಕಾಲದ ಸಮಯದಲ್ಲಿ ತಮ್ಮ ಸಹಾಯಕ್ಕಾಗಿ ಇರಲಿ ಎನ್ನುವ ಕಾರಣಕ್ಕಾಗಿ ಬ್ಯಾಂಕಿನಲ್ಲಿ ಜಮಾ ಮಾಡುತ್ತಾರೆ. ಆದರೆ ಹಣವನ್ನು ಎಲ್ಲಿ ಜಮಾ ಮಾಡಬೇಕು ಹಾಗೂ ಎಷ್ಟು ಜಮಾ ಮಾಡಬೇಕು ಎನ್ನುವಂತಹ ನಿಯಮಾವಳಿಗಳ ಬಗ್ಗೆ ತಿಳಿಯದೆ ಜಮಾ ಮಾಡಿದರೆ ಅದು ಖಂಡಿತವಾಗಿ ಕೆಲವೊಮ್ಮೆ ನಿಮಗೆ ನಷ್ಟವನ್ನು ಕೂಡ ಉಂಟು ಮಾಡಬಹುದಾದಂತಹ ಸಾಧ್ಯತೆ ಇರುತ್ತದೆ ಹೀಗಾಗಿ ಇವತ್ತಿನ ಈ ಆರ್ಟಿಕಲ್ ನಲ್ಲಿ ನಾವು ನಿಮಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಲು ಹೊರಟಿರುವಂತಹ ಒಂದು ನಿಯಮದ ಬಗ್ಗೆ ವಿವರಿಸಲು ಹೊರಟಿದ್ದೇವೆ.

Advertisement

ಪ್ರತಿಯೊಬ್ಬರೂ ಕೂಡ ದೀರ್ಘಕಾಲಿಕ ಹೂಡಿಕೆಯ (Long-Term Investment) ರೂಪದಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಅನ್ನು ತಮ್ಮ ಮೊದಲ ಆಯ್ಕೆಯನ್ನಾಗಿ ಮಾಡಿಕೊಳ್ಳುತ್ತಾರೆ. ಯಾವುದೇ ರೀತಿಯ ಹಣ ಜಮಾವಣೆ ಇರಲಿ ಆದರೆ ಅದಕ್ಕೆ ಕೆಲವೊಂದು ಲಿಮಿಟ್ ಇರುತ್ತದೆ ಅದಕ್ಕಿಂತ ಹೆಚ್ಚಿನ ಹಣದ ಜಮಾವಣೆ ಮಾಡಿದಲ್ಲಿ ನೀವು ಕೆಲವೊಮ್ಮೆ ಅಪಾಯದ ಸಂಕೇತಗಳನ್ನು ಎದುರು ಕಾಣಬೇಕಾಗುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಟ್ಟು ಕೊಳ್ಳಬೇಕಾಗುತ್ತದೆ. ಹೌದು ಅದರಲ್ಲೂ ವಿಶೇಷವಾಗಿ ಕೆಲವೊಂದು ಆಫರ್ ಗಳನ್ನು ನೋಡಿ ಮರುಳಾಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.

Advertisement

ಅದೇನೆಂದರೆ ಕೆಲವೊಮ್ಮೆ RBI ಅದೀನದಲ್ಲಿ ಇಲ್ಲದೆ ಇರುವಂತಹ ಕೆಲವೊಂದು ಸಹಕಾರಿ ಬ್ಯಾಂಕುಗಳು (Cooperative Banks) ಹೆಚ್ಚಿನ ಬಡ್ಡಿಯ ಆಮಿಷವನ್ನು ಒಡ್ಡಿ ನಿಮ್ಮ ಬಳಿ ಹಣವನ್ನು ಜಮಾ ಮಾಡುವಂತೆ ಮಾಡಿಸಿಕೊಳ್ಳುತ್ತಾರೆ. ಅವುಗಳಲ್ಲಿ ಕೆಲವೊಮ್ಮೆ ನಂಬಿಕಸ್ತ ಬ್ಯಾಂಕುಗಳು ಇಲ್ಲದೆ ಇರುವಂತಹ ಸಾಧ್ಯತೆ ಕೂಡ ಇರುತ್ತದೆ. ಕೆಲವೊಮ್ಮೆ ಅಂತಹ ಸಹಕಾರಿ ಬ್ಯಾಂಕುಗಳು (Cooperative Banks) ನಷ್ಟಕ್ಕೆ ಒಳಗಾದಾಗ ನಿಮ್ಮ ಹಣ ಏನಾಗುತ್ತದೆ ಎನ್ನುವುದರ ಬಗ್ಗೆ ಕೂಡ ನೀವು ಜಮಾ ಮಾಡುವುದಕ್ಕಿಂತ ಮುಂಚೆ ಯೋಚನೆ ಮಾಡಬೇಕಾಗಿರುತ್ತದೆ. ಅದರಲ್ಲೂ ನಿಮ್ಮ ಹಣದ ಮೇಲಿರುವಂತಹ ಇನ್ಸೂರೆನ್ಸ್ (Insurance) ನ ಮಾಹಿತಿಯನ್ನು ಕೂಡ ನೀಡುತ್ತೇವೆ.

Advertisement

DICGC ನಿಯಮಗಳ ಪ್ರಕಾರ ಒಂದು ಬ್ಯಾಂಕಿನಲ್ಲಿ ಒಬ್ಬರು ಗರಿಷ್ಠ ಪ್ರಮಾಣದಲ್ಲಿ 5 ಲಕ್ಷ ದವರೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಅವರು ಒಂದು ಬ್ಯಾಂಕಿನಲ್ಲಿ ಎಷ್ಟೇ ಹಣವನ್ನು ಇಟ್ಟಿದ್ದರೂ ಕೂಡ ಅವರಿಗೆ ಪರಿಹಾರ ಸಿಗುವುದು ಕೇವಲ 5 ಲಕ್ಷಗಳವರೆಗೆ ಮಾತ್ರ. ಅದು ಕೇವಲ RBI ಅಧೀನದಲ್ಲಿದ್ದು DICGC ನಿಯಮಗಳ ಅನ್ವಯ ಇದ್ದರೆ ಮಾತ್ರ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗಿರುತ್ತದೆ. ಹೀಗಾಗಿ ಬಡ್ಡಿದರ (Interest Rate) ಹೆಚ್ಚಿಗೆ ನೀಡುತ್ತಾರೆ ಎನ್ನುವ ಕಾರಣಕ್ಕಾಗಿ ನೀವು ಯಾವ್ಯಾವುದೋ ಸಹಕಾರಿ ಬ್ಯಾಂಕುಗಳಿಗೆ ಹಣವನ್ನು ಫಿಕ್ಸಿಡ್ ಡೆಪಾಸಿಟ್ (FD) ಅಥವಾ ಯಾವುದೇ ರೀತಿಯ ಜಮಾವಣೆ ಮಾಡುವುದಕ್ಕೆ ಹೋಗಬೇಡಿ.

Advertisement

New notification from RBI for Fixed Deposit holders above 5 lakhs

Also Read: Fixed Deposit: ಎಫ್‌ಡಿ ಮೇಲೆ 9% ಬಡ್ಡಿ ನೀಡುವ ಬ್ಯಾಂಕ್ ಗಳು ಯಾವುದು ಗೊತ್ತಾ..?

 

1 Comment
  1. Cs venkatesh says

    RBI ನವರು A grade certificate annu 100% ಗ್ಯಾರಂಟೀ ಇಲ್ಲದೆ ಇದ್ದಾಗೆ ಕೂಡಲೇ ಕೂಡದು.

Leave A Reply

Your email address will not be published.