ಪ್ರತಿ ತಿಂಗಳ ಮೊದಲ ದಿನದಂದು ಸರ್ಕಾರ ತನ್ನ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡುತ್ತದೆ. ಇದರಿಂದ ಸಾಮಾನ್ಯರ ಜೀವನದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಬೀರಬಹುದು. ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿರುವ ಈ ಕೆಲವು ಹೊಸ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ.
ಸುಕನ್ಯಾ ಸಮೃದ್ಧಿ ಯೋಜನೆ
ಆರ್ಥಿಕ ಭದ್ರತೆಯನ್ನು ಹೆಣ್ಣು ಮಕ್ಕಳಿಗೆ ನೀಡುವ ಸರ್ಕಾರದ ಒಂದು ಅದ್ಭುತ ಯೋಜನೆ ಇದಾಗಿದ್ದು ಅಕ್ಟೋಬರ್ 1, 2024 ರಿಂದ ಪ್ರಮುಖ ಬದಲಾವಣೆಯನ್ನು ಈ ಯೋಜನೆಯಲ್ಲಿ (Sukanya Samriddhi Yojana) ತರಲಾಗುವುದು. ಇನ್ನು ಮುಂದೆ ಹೆಣ್ಣು ಮಕ್ಕಳ ಕಾನೂನು ಬದ್ಧ ಪೋಷಕರು ಮಾತ್ರ ಮಕ್ಕಳ ಖಾತೆಯನ್ನು ನಿರ್ವಹಿಸಬಹುದು. ಜೈವಿಕ ಪೋಷಕರು ಅಥವಾ ಕಾನೂನು ಬದ್ಧ ಪೋಷಕರು ಇಲ್ಲದೆ ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದರೆ ತಕ್ಷಣ ಅಂಥವರು ಕಾನೂನು ಬದ್ಧ ಪೋಷಕರಿಗೆ ಖಾತೆಯನ್ನು ವರ್ಗಾಯಿಸಬೇಕಾಗುತ್ತದೆ. ಇಲ್ಲವಾದರೆ SSY ಖಾತೆ ರದ್ದಾಗಲಿದೆ.
ವಾಹನಗಳ ಮೇಲೆ ಸಬ್ಸಿಡಿ
ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಖರೀದಿಸುವವರಿಗೆ 50 ಸಾವಿರ ರೂಪಾಯಿಗಳವರೆಗೆ ಸಬ್ಸಿಡಿಯನ್ನು ಪ್ರಧಾನ ಮಂತ್ರಿ ಇ-ಡ್ರೈವ್ ಯೋಜನೆಯ ಅಡಿಯಲ್ಲಿ ನೀಡಲಾಗುವುದು. ಇದು ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ.
ಆಧಾರ್ ಕಾರ್ಡ್ ನಿಯಮ ಬದಲಾವಣೆ
ಆಧಾರ್ ಕಾರ್ಡ್ (Aadhaar Card) ಗೆ ಸಂಬಂಧಪಟ್ಟಂತೆ ಈ ಹಿಂದೆ ಇದ್ದ ನಿಯಮವನ್ನು ಸ್ವಲ್ಪ ಸರಳಗೊಳಿಸಲಾಗಿದೆ. ತೆರಿಗೆ ಪಾವತಿದಾರರು ಪಾನ್ ಕಾರ್ಡ್ (PAN Card) ಗೆ ಅರ್ಜಿ ಸಲ್ಲಿಸಲು ಅಥವಾ ಐಟಿಆರ್ ಸಲ್ಲಿಸಲು ಇನ್ನು ಮುಂದೆ ಆಧಾರ್ ದಾಖಲಾತಿ ನೀಡುವ ಅಗತ್ಯ ಇಲ್ಲ. ಈ ಹೊಸ ನಿಯಮ ಅಕ್ಟೋಬರ್ 1 2024 ರಿಂದ ಜಾರಿಗೆ ಬರಲಿದೆ.
ಆಸ್ತಿ ಮಾರಾಟದ ನಿಯಮ
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇರುವವರಿಗೆ ಕೇಂದ್ರ ಸರ್ಕಾರದ ಹೊಸ ತೆರಿಗೆ ನಿಯಮ ಅನ್ವಯವಾಗಲಿದೆ. ಅಕ್ಟೋಬರ್ ಒಂದರಿಂದ 50 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದರೆ ಅದರ ಮೇಲೆ 1% TDS ಪಾವತಿಸಬೇಕು.
ಕಾರ್ಮಿಕರ ಕನಿಷ್ಠ ವೇತನ
ಯೂನಿಯನ್ ಗೌರ್ನಮೆಂಟ್ ಅಕ್ಟೋಬರ್ ಒಂದರಿಂದ ಕಾರ್ಮಿಕರ ವೇತನ ದರ ಹೆಚ್ಚಳ ಮಾಡಲಿದೆ. ನಿರ್ಮಾಣ ಕೆಲಸದಲ್ಲಿ ತೊಡಗಿರುವ, ಲೋಡಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರ ದಿನದ ವೇತನವನ್ನು ಕನಿಷ್ಠ 783 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಅರೆ ಕುಶಲ ಕಾರ್ಮಿಕರ ದಿನದ ವೇತನ 868 ರೂಪಾಯಿಗಳು, ಗಾರ್ಡ್ ಕೆಲಸ ಮಾಡುವ ಹಾಗೂ ಚೌಕಿದಾರ್ ಗಳಿಗೆ ದಿನಕ್ಕೆ 1035 ರೂಪಾಯಿಗಳ ವೇತನ ಹೆಚ್ಚಳವಾಗಿದೆ. ಅದೇ ರೀತಿ ಕೌಶಲ್ಯ ಕಾವಲುಗಾರ ಕಾರ್ಮಿಕರ ವೇತನ ದಿನಕ್ಕೆ 954 ಗಳಿಗೆ ಏರಿಕೆ ಮಾಡಲಾಗಿದೆ.
ಎಲ್ಪಿಜಿ ಗ್ಯಾಸ್ ಬೆಲೆ
ಎಲ್ಪಿಸಿ ಸಿಲಿಂಡರ್ (LPG Cylinder) ಗಡ ಬೆಲೆಯಲ್ಲಿಯೂ ಬದಲಾವಣೆಯನ್ನು ಅಕ್ಟೋಬರ್ 1 2024 ರಿಂದ ನಿರೀಕ್ಷಿಸಬಹುದು. 19 ಕೆ.ಜಿ ವಾಣಿಜ್ಯ ಅನಿಲ ಸಿಲೆಂಡರ್ ಬೆಲೆಯಲ್ಲಿ ಆಗಾಗ ಏರಿಳಿತ ಮಾಡಲಾಗುತ್ತಿದ್ದು, 14 ಕೆಜಿ ದೇಶಿಯ ಎಲ್ಪಿಜಿ ಸಿಲಿಂಡರ್ ಬೆಲೆ ಸ್ಥಿರವಾಗಿದೆ. ದಸರಾ ಮತ್ತು ದೀಪಾವಳಿ ಸಮಯದಲ್ಲಿ 14 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆ ಕಡಿತ ಗೊಳ್ಳುವ ಸಾಧ್ಯತೆ ಇದೆ.
ಭಾರತೀಯ ರೈಲ್ವೆ ಹೊಸ ನಿಯಮ
ಟಿಕೆಟ್ ರಹಿತ ಪ್ರಯಾಣ ಮಾಡುವವರ ವಿರುದ್ಧ ವಿಶೇಷ ಕ್ರಮ ಕೈಗೊಳ್ಳುವ ಸಲುವಾಗಿ ಸ್ಪೆಷಲ್ ಡ್ರೈವ್ ಅನ್ನು ಭಾರತೀಯ ರೈಲ್ವೆ ಇಲಾಖೆ ಪ್ರಾರಂಭಿಸಲಿದೆ. ಅನಧಿಕೃತ ಪ್ರಯಾಣವನ್ನು ಹಾಗೂ ಟಿಕೆಟ್ ರಹಿತ ಪ್ರಯಾಣವನ್ನು ತಪ್ಪಿಸುವ ಸಲುವಾಗಿ ಕಠಿಣ ಟಿಕೆಟ್ ತಪಾಸಣೆಯನ್ನು ಜಾರಿಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
It is happy to hear that all are useful for common man.