ಆಹಾರ ಇಲಾಖೆ ಸ್ಫೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದ್ದು, ಪಡಿತರ ಚೀಟಿ ಹೊಂದಿರುವವರಿಗೆ ಇದು ಆತಂಕಕಾರಿ ವಿಷಯವಾಗಿದೆ. ರಾಜ್ಯದಲ್ಲಿ ಸುಮಾರು 22 ಲಕ್ಷಕ್ಕೂ ಹೆಚ್ಚಿನ ಪಡಿತರ ಚೀಟಿ (Ration Card) ಅನರ್ಹಗೊಳಿಸುವ ಸಾಧ್ಯತೆ ಇದೆ.
ಹೌದು, ಆಹಾರ ಇಲಾಖೆ ಈಗಾಗಲೇ 14 ಮಾನದಂಡಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಬಿಪಿಎಲ್ ಕಾರ್ಡ್, ಅಂತ್ಯೋದಯ ಕಾರ್ಡ್ ಪಡೆದುಕೊಂಡಿರುವವರ ರೇಷನ್ ಕಾರ್ಡ್ ರದ್ದಾಗುವ ಎಲ್ಲಾ ಸಾಧ್ಯತೆಗಳು ಇವೆ.
ಇಂಥವರಿಗೆ ಸಿಗಲ್ಲ ಇನ್ನು ಮುಂದೆ ರೇಷನ್
14 ಮಾನದಂಡಗಳ ಪೈಕಿ ಕಾರು 100 ಸಿಸಿ ಗಿಂತ ಮೇಲ್ಪಟ್ಟ ಪವರ್ ಇರುವ ದ್ವಿಚಕ್ರವಾಹನ, 7.5 ಎಕರೆ ಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ಉದ್ಯೋಗ ಹೊಂದಿದ್ದರೆ, ತೆರಿಗೆ ಪಾವತಿದಾರರಾಗಿದ್ದರೆ ಅಂಥವರ ಅಂತ್ಯೋದಯ ಕಾರ್ಡ್ (Antyodaya Card) ಮತ್ತು ಬಿಪಿಎಲ್ ಕಾರ್ಡ್ (BPL Ration Card) ಹೊಂದಿದ್ದರೆ ತಕ್ಷಣ ಅವರ ಕಾರ್ಡ್ ರದ್ದುಪಡಿಸಲಾಗುತ್ತದೆ.
ಸರ್ಕಾರದ ಕಟ್ಟುನಿಟ್ಟಿನ ನಿಯಮ
ಬಡತನ ರೇಖೆಗಿಂತ ಕೆಳಗಿರುವವರಿಗೆ ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ (Antyodaya Ration Card) ವಿತರಣೆ ಮಾಡಿ ಅದರಿಂದ ಬಡವರಿಗೆ ಒದಗಿಸುವುದು ಸರ್ಕಾರದ ಉದ್ದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಬಡತನ ರೇಖೆಗಿಂತ ಮೇಲ್ಪಟ್ಟವರೇ ಇಂತಹ ಕಾರ್ಡನ್ನು ಹೆಚ್ಚಾಗಿ ಹೊಂದಿರುವುದು ಆಹಾರ ಇಲಾಖೆಯ ಗಮನಕ್ಕೆ ಬಂದಿದೆ. ಈಗಾಗಲೇ 10, 97,621 ಬಿಪಿಎಲ್ ಕಾರ್ಡ್ 10,54,368 ಅಂತ್ಯೋದಯ ಕಾರ್ಡ್ ಗಳ ಅಕ್ರಮ ವಿತರಣೆ ಆಗಿದೆ. ಈಗಾಗಲೇ ಇ- ಆಡಳಿತ ಕೇಂದ್ರದಿಂದ ಡಾಟಾ ಕಲೆಕ್ಟ್ ಮಾಡಿರುವ ಆಹಾರ ಇಲಾಖೆ ಮುಂದಿನ 10 ದಿನಗಳಲ್ಲಿ 22 ಲಕ್ಷಕ್ಕೂ ಹೆಚ್ಚಿನ ಪಡಿತರ ಚೀಟಿಗಳನ್ನು ರದ್ದುಪಡಿಸಲಿದೆ.
ಬಡತನ ರೇಖೆಗಿಂತ ಮೇಲ್ಪಟ್ಟವರು, ಹಾಗೂ ಅಕ್ರಮವಾಗಿ ಪಡಿತರ ಚೀಟಿ ಪಡೆದುಕೊಂಡಿರುವವರು ತಮ ಕಾರ್ಡನ್ನು ಹಿಂತಿರುಗಿಸಬೇಕು ಎಂದು ಈಗಾಗಲೇ ಹೇಳಲಾಗಿತ್ತು. ಆದರೆ ಸರ್ಕಾರದ ಈ ನಿಯಮವನ್ನು ಯಾರು ಪರಿಗಣಿಸದೆ ಇರುವ ಸಲುವಾಗಿ ಸರ್ಕಾರವೇ ಈಗ ನೇರ ರದ್ದುಪಡಿಗೆ ಮುಂದಾಗಿದೆ.