Karnataka Times
Trending Stories, Viral News, Gossips & Everything in Kannada

Basavaraj Bommai: 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಬಂಪರ್ ಆಫರ್ ಕೊಟ್ಟ ಬೊಮ್ಮಾಯಿ ಸರ್ಕಾರ.

Advertisement

ರಾಜ್ಯ ಸರ್ಕಾರ (Karnataka State Government) ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ ನೀಡಲು ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಕಷ್ಟು ಜನಪ್ರಿಯ ಸಾಲ ಸೌಲಭ್ಯವನ್ನು ನೀಡಲು ಹೊರಟಿದೆ. ಈ ಸಮಾಜದಲ್ಲಿ ಮಹಿಳೆಯರು ಕೂಡ ತಮ್ಮ ಕಾಲಿನ ಮೇಲೆ ನಿಲ್ಲಬೇಕು ಎನ್ನುವ ಕಾರಣಕ್ಕಾಗಿ ಈ ಸಾಲ ಸೌಲಭ್ಯವನ್ನು ನೀಡಲು ಹೊರಟಿದೆ. ಎಲ್ಲಾ ವರ್ಗದ ಮಹಿಳೆಯರು, ಅಂಗವಿಕಲ, ವಿಧವೆ ಸೇರಿದಂತೆ ಯಾವುದೇ ವರ್ಗದಲ್ಲಿ ಇದ್ದರೂ ಕೂಡ ಆ ಮಹಿಳೆಯರಿಗೆ ಈ ಸಾಲ ಸೌಲಭ್ಯ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ.

ಮಹಿಳೆಯರನ್ನು ಸಬಲರನ್ನಾಗಿ ಮಾಡುವಂತಹ ಪ್ರಯತ್ನವನ್ನು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸರ್ಕಾರ ಮಾಡುತ್ತಲೇ ಇದೆ. ಇದಕ್ಕಾಗಿ ಅದರಲ್ಲಿಯೂ ವಿಶೇಷವಾಗಿ ನಿರ್ಗತಿಕ ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವ ಮತ್ತು ಸಹಾಯಕ್ಕಾಗಿ ಎದುರು ನೋಡುತ್ತಿರುವಂತಹ ಮಹಿಳೆಯರಿಗೆ ಲಾಭವಾಗುವಂತೆ ಉದ್ಯೋಗಿನಿ ಯೋಜನೆಯನ್ನು(Udyogini Yojane) ರಾಜ್ಯ ಸರ್ಕಾರ ಪರಿಚಯಿಸಿದ. ಭರ್ಜರಿ 88ಕ್ಕೂ ಅಧಿಕ ಸಣ್ಣಪುಟ್ಟ ಉದ್ಯಮಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಈ ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ನೀಡಲಿದೆ.

ಅವುಗಳಲ್ಲಿ ಕುಕ್ಕುಟೋದ್ಯಮ, ಹೊಲಿಗೆ ಯಂತ್ರ, ಮತ್ಸ್ಯೋದ್ಯಮ ಮತ್ತು ಅಗರಬತ್ತಿ ತಯಾರಿಕೆ ಸೇರಿದಂತೆ ಹಲವಾರು ಉದ್ಯಮಗಳು ಕೂಡ ಸೇರಿದೆ. ಈ ಯೋಜನೆ ಅಡಿಯಲ್ಲಿ ಯಾವುದೇ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿ ವರೆಗೂ ಕೂಡ ಸಾಲ ಸೌಲಭ್ಯ ದೊರಕಲಿದೆ. ಇದಕ್ಕಾಗಿ ಆ ಮಹಿಳೆಯ ಕುಟುಂಬದ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಜನ್ಮ ಪ್ರಮಾಣ ಪತ್ರ ಆಧಾರ್ ಕಾರ್ಡ್ ಸ್ಥಳೀಯ ಶಾಸಕನ ಲೆಟರ್ ಹೆಡ್ ಇರುವಂತ ಪತ್ರ ಇರಬೇಕು. ಬಿಪಿಎಲ್ ಕಾರ್ಡ್ ಪ್ರತಿ ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪತ್ರ ಇರಬೇಕು. ಕಾಲ ಪಡೆದು ಹೇಗೆ ನಿಮ್ಮ ಪ್ರಶ್ನೆಗೆ ಭಾರತ ಸರ್ಕಾರದಿಂದ ಪ್ರಮಾಣಿಕೃತವಾಗಿರುವಂತಹ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕುಗಳು(Govt banks) ಮತ್ತು ವಾಣಿಜ್ಯ ಸಹಕಾರಿ ಬ್ಯಾಂಕುಗಳಲ್ಲಿ ಕೂಡ ಉದ್ಯೋಗಿನಿ ಯೋಜನೆಯಡಿ ನಿಮಗೆ ಸಾಲ ಸೌಲಭ್ಯ ದೊರಕಲಿದೆ.

Leave A Reply

Your email address will not be published.