Karnataka Times
Trending Stories, Viral News, Gossips & Everything in Kannada

Insurance: ಇನ್ಸೂರೆನ್ಸ್ ಮಾಡಿಸಿದ ಎಲ್ಲರಿಗೂ ಹೊಸ ನಿಯಮಾವಳಿ, ದೇಶಾದ್ಯಂತ ಜಾರಿಗೆ

Advertisement

April 1 ರಿಂದ 2023 ರ ಹೊಸ ಹಣಕಾಸು ವರ್ಷ ಆರಂಭವಾಗಿದೆ. ಹಾಗಾಗಿ ಹೊಸ ಹಣಕಾಸು ವರ್ಷದ ಆರಂಭದಲ್ಲಿಯೇ ಕೆಲವು ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗಿದ್ದು ವಿಮಾ (Insurance) ಕ್ಷೇತ್ರದಲ್ಲಿ ಆಗಿರುವ ದೊಡ್ಡ ಬದಲಾವಣೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಈ ಬದಲಾವಣೆಗಳಲ್ಲಿ ವಿವಿಧ ವಿಮಾ ಕಂತುಗಳ ಮೇಲಿನ ತೆರಿಗೆ ರಿಯಾಯಿತಿಯನ್ನು ರದ್ದುಗೊಳಿಸಲಾಗಿದೆ ಹಾಗಾಗಿ ನೀವು ಕೂಡ ಇಂತಹ ಇನ್ಸೂರೆನ್ಸ್ ಮಾಡಿದ್ದೀರಾ ಎಂಬುದನ್ನು ತಿಳಿದುಕೊಳ್ಳಿ.

ಪ್ರಸಕ್ತ ಹಣಕಾಸು ವರ್ಷದಿಂದ ವಿಮೆಗೆ ಸಂಬಂಧಿಸಿದ ಹಲವಾರು ವೆಚ್ಚಗಳು, ಕಮಿಷನ್ ಮೊದಲಾದ ವಿಚಾರಗಳಲ್ಲಿ ಬದಲಾವಣೆ ಮಾಡಲಾಗಿದೆ. ನೀವು ಈ ವರ್ಷದಿಂದ ಹೊಸ ವಿಮೆ ಆರಂಭಿಸುವುದಿದ್ದರೆ ಮೊದಲು ವಿಮೆಯ ಪ್ರೀಮಿಯಂ ಹಾಗೂ ವಿಮೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಲೇಬೇಕು.

ತೆರಿಗೆ ಕಟ್ಟುವುದು ಅನಿವಾರ್ಯ:

ವಾರ್ಷಿಕ ಪ್ರೀಮಿಯಂ 5 ಲಕ್ಷ ಆಗಿದ್ದರೆ ಅದಕ್ಕೆ ತೆರಿಗೆ ಪಾವತಿಸಬೇಕು. ಯುಲಿಪ್ -ಯೂನಿಟ್ ಲಿಂಕ್ ಇನ್ಶೂರೆನ್ಸ್ ಪ್ಲಾನ್ ಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಕಮಿಷನ್ ಮೇಲಿನ ಮಿತಿ ರದ್ದು:

ಇನ್ಶೂರೆನ್ಸ್ ನಿಯಂತ್ರಕ ಐಆರ್‌ಡಿಎಐ, ನಿರ್ವಹಣೆಯ ವೆಚ್ಚ ಮತ್ತು ಕಮಿಷನ್ ನಲ್ಲಿ ಹೆಚ್ಚಿನ ಬದಲಾವಣೆಗಳನ್ನು ತಂದಿದ್ದು, ಏಪ್ರಿಲ್ ಒಂದರಿಂದ ಇದು ಅಪ್ಲೈ ಆಗಿದೆ. ಇನ್ಸೂರೆನ್ಸ್ ಏಜೆಂಟ್ ಅಥವಾ ಎಗ್ರಿಗೇಟರ್ಗಳ ಮೇಲಿನ ಕಮಿಷನ್ ಮಿತಿಯನ್ನು ತೆಗೆದು ಹಾಕಲು ARDAI ನಿರ್ಧಾರ ಮಾಡಿದೆ. ಕಮಿಷನ್ ಮಿತಿ ತೆಗೆದು ಹಾಕಬೇಕು ಎಂದು ಈ ಹಿಂದೆ ಪ್ರಸ್ಥಾಪಿಸಲಾಗಿತ್ತು.

ಗ್ರಾಹಕರ ಜ್ಬಿಗೆ ಬಿತ್ತು ಕತ್ತರಿ:

ವಿಮೆ ಕಂಪನಿಗಳು ತಮ್ಮ ಇಚ್ಛೆಗೆ ಅನುಗುಣವಾಗಿ ಕಮಿಷನ್ ಮೊತ್ತವನ್ನು ನಿರ್ಧಾರ ಮಾಡಬಹುದು ಹಾಗಾಗಿ ಹಣಕಾಸು ವರ್ಷದಲ್ಲಿ ಹೊಸ ವಿಮಾ ಪಾಲಿಸಿ ಖರೀದಿಸುವ ಮೊದಲು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೊಸದಾಗಿ ವಿಮಾ ಮಾಡಿಸುವವರಿಗೆ ತೆರಿಗೆ ರಿಯಾಯಿತಿ ರದ್ದುಗೊಳಿಸಿರುವುದು ಮಾತ್ರವಲ್ಲದೆ ನಿರ್ವಹಣಾ ವೆಚ್ಚ ಕಮಿಷನ್ ಮಿತಿಯ ಮೇಲಿನ ಬದಲಾವಣೆ ಎಲ್ಲವೂ ಜನರ ಜೇಬಿಗೆ ಕತ್ತರಿ ಹಾಕಬಹುದು. ಆದ್ದರಿಂದ ವಿಮೆ ಖರೀದಿಸುವ ಮೊದಲು ಈ ಎಲ್ಲಾ ವಿಚಾರದ ಬಗ್ಗೆ ಸರಿಯಾಗಿ ವಿಶ್ಲೇಷಿಸಿ ವಿಮೆ ಆರಂಭಿಸಿ.

Leave A Reply

Your email address will not be published.