Karnataka Times
Trending Stories, Viral News, Gossips & Everything in Kannada

Gas Cylinder: 500 ರೂ ಗೆ ಸಿಗುತ್ತಿದೆ ಗ್ಯಾಸ್ ಸಿಲಿಂಡರ್, ಬಂಪರ್ ಘೋಷಣೆ

Advertisement

ಹಣದುಬ್ಬರದಿಂದ ಜನರಿಗೆ ಸಾಕು ಸಾಕೆನಿಸಿದೆ. ಏಕೆಂದರೆ ಗೃಹ ಬಳಕೆಯ ಪ್ರತಿಯೊಂದು ವಸ್ತುವಿನ ಬೆಲೆಯು ಗಗನಕ್ಕೆ ಏರಿದೆ. ಎಲ್ ಪಿ ಜಿ ಸಿಲಿಂಡರ್ (LPG Cylinder) ಗ್ಯಾಸ್ ಕೂಡ 500 ರಿಂದ 1500ರೂ. ವರೆಗೆ ಏರಿಕೆ ಕಂಡಿದೆ. ಇಂಧನದ ಬೆಲೆಯು ಹೆಚ್ಚಾಗಿದೆ. ಸರ್ಕಾರ 500 ರೂಪಾಯಿಯ ಗ್ಯಾಸ್ ಸಿಲಿಂಡರ್ (Gas Cylinder) ಅನ್ನು ಗ್ರಾಹಕರಿಗೆ ನೀಡಲು ಯೋಜನೆ ರೂಪಿಸಿದೆ. ಇದಕ್ಕಾಗಿ ನೀವು ಕೆಲವು ಪ್ರಮುಖ ದಾಖಲೆಗಳನ್ನು ಸರ್ಕಾರಕ್ಕೆ ನೀಡಬೇಕು ಈ ರೀತಿ ಐನೂರು ರೂಪಾಯಿಗಳಿಗೆ ಸಿಲಿಂಡರ್ ಪಡೆದುಕೊಳ್ಳಲು ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸದ್ಯ ಈ ರೂಲ್ಸ್ ರಾಜಸ್ಥಾನ ಸರ್ಕಾರ ಬಡವರಿಗಾಗಿ ಜಾರಿಗೆ ತಂದಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ (Ashok Gehlot), ಬಡವರಿಗೆ 500 ರೂಪಾಯಿಗಳಿಗೆ ಎಲ್‌ಪಿಜಿ ಸಿಲಿಂಡರ್ (LPG Cylinder) ನೀಡುವುದಾಗಿ ಘೋಷಿಸಿದ್ದಾರೆ.

ಯಾರಿಗೆ ಸಿಗಲಿದೆ ಪ್ರಯೋಜನ?

ರಾಜಸ್ಥಾನದಲ್ಲಿ ವಾಸಿಸುವವರಿಗೆ ಈ ಪ್ರಯೋಜನ ಸಿಗಲಿದೆ ಈ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವವರಿಗೆ ಕಡಿಮೆ ಬೆಲೆಗೆ ಎಲ್ ಪಿ ಜಿ ಸಿಗಲಿದೆ. ಈ ಯೋಜನೆಯ ಅಡಿಯಲ್ಲಿ 610 ರೂಪಾಯಿಗಳ ಸಹಾಯಧನವನ್ನು ಫಲಾನುಭವಿಗಳಿಗೆ ಖಾತೆಗೆ ವರ್ಗಾಯಿಸಲಾಗುತ್ತದೆ. ಉಜ್ವಲ ಯೋಜನೆ ಫಲಾನುಭವಿಗಳ ಖಾತೆಗೆ 410 ರೂಪಾಯಿಗಳ ಸಹಾಯಧನವನ್ನು ಕಳುಹಿಸಲಾಗುವುದು. ಅಲ್ಲಿಗೆ ಬಿಪಿಎಲ್ ಕಾರ್ಡ್ ದಾರರು 500 ರೂಪಾಯಿಗಳಿಗೆ ಸಿಲಿಂಡರ್ ಖರೀದಿ ಮಾಡಬಹುದು.

500 ರೂಪಾಯಿಗಳಿಗೆ ಸಿಲಿಂಡರ್ ಪಡೆಯುವುದು ಹೇಗೆ?

ಇದರ ಪ್ರಯೋಜನವನ್ನು ಪಡೆದುಕೊಳ್ಳಲು ನೀವು ರಾಜಸ್ಥಾನದ ನಿವಾಸಿ ಆಗಿರಬೇಕು. ಬಿಪಿಎಲ್ ಅಥವಾ ಉಜ್ವಲ ಯೋಜನೆ ಅಡಿ ಬರುವವರಿಗೆ 500 ಗಳಿಗೆ ಗ್ಯಾಸ್ ಸಿಲಿಂಡರ್ ಲಭ್ಯವಾಗುತ್ತದೆ. ಹಣಕಾಸು ವರ್ಷದ ಆರಂಭದಲ್ಲಿ ಅಂದರೆ ಏಪ್ರಿಲ್ ಒಂದರಿಂದಲೇ ಈ ಯೋಜನೆ ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಗ್ರಾಹಕರಿಗೆ ತಲುಪಿಸಲು ಆಹಾರ ಇಲಾಖೆ ಶೀಘ್ರದಲ್ಲಿಯೇ ಪೋರ್ಟಲ್ ಅನ್ನು ಪ್ರಾರಂಭಿಸಲಿದೆ. ನೀವು ಆನ್ಲೈನ್ ಪೊರ್ಟೇಲ್ ಗೆ ಭೇಟಿ ನೀಡಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅಂದಹಾಗೆ ನಿಮ್ಮ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆಯಾಗಬೇಕಿದ್ದರೆ ನೀವು ಪ್ರತಿ ತಿಂಗಳು ನಿಮ್ಮ ಸಿಲಿಂಡರ್ ಖರೀದಿ ಮಾಡಿದ ರಶೀದಿಯನ್ನು ಅಪ್ಲೋಡ್ ಮಾಡಬೇಕು.

ಸಬ್ಸಿಡಿ ಹಣ ಫಲಾನುಭವಿಗಳ ಖಾತೆಗೆ:

ಎಲ್ ಪಿ ಜಿ ಗ್ಯಾಸ್ ಸಂಪರ್ಕವನ್ನು ತೆಗೆದುಕೊಳ್ಳುವಾಗ ನೀವು ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ನಂತರ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಮೊತ್ತವನ್ನ ಕಳುಹಿಸಲಾಗುತ್ತದೆ. ಈ ರೀತಿ ಬಡವರು ಕೇವಲ ಐದುನೂರು ರೂಪಾಯಿಗಳಿಗೆ ಗ್ಯಾಸ್ ಸಿಲೆಂಡರ್ ಪಡೆಯಬಹುದು. ರಾಜಸ್ಥಾನದಲ್ಲಿ ಒಟ್ಟು 73 ಲಕ್ಷ ಕುಟುಂಬಗಳು ಯೋಜನೆಯ ಪ್ರಯೋಜನ ಪಡೆಯಲಿವೆ ಎಂದು ವರದಿಯಾಗಿದೆ.

Leave A Reply

Your email address will not be published.