Aadhaar Card: ಆಧಾರ್ ಕಾರ್ಡ್ ತಿದ್ದುಪಡಿ ಮಾಡಲು ಇನ್ಮೇಲೆ ದೆಹಲಿಗೆ ತೆರಳಬೇಕು! ಇಲ್ಲಿದೆ ನಿಯಮ

Advertisement
ಆಧಾರ್ ಕಾರ್ಡ್ (Aadhaar Card) ಅನ್ನೋವುದು ಎಲ್ಲ ದಾಖಲೆ ಗಿಂತಲೂ ಹೆಚ್ಚಿನ ಮಹತ್ವದ್ದು, ಅತ್ಯಂತ ಪ್ರಮುಖವಾದ ದಾಖಲೆ ಇದಾಗಿದ್ದು , ಬ್ಯಾಂಕ್ ಖಾತೆಯಿಂದ ಸರ್ಕಾರದ ವಿವಿಧ ಯೋಜನೆಗಳ ಅನುಕೂಲ ಪಡೆಯೋ ತನಕ ಆಧಾರ್ ಕಾರ್ಡ್ ಅಗತ್ಯ. ಇಂತಹ ಆಧಾರ್ ಕಾರ್ಡ್ನಲ್ಲಿ , ಹುಟ್ಟಿದ ದಿನಾಂಕ, ವಿಳಾಸ , ಹೀಗೆ ಯಾವುದಾದರೊಂದು ತಪ್ಪಾದಲ್ಲಿ ನಿಮ್ಮ ಇತರ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತದೆ. ಹೀಗಾಗಿ ಆಧಾರ್ ಕಾರ್ಡ್ನಲ್ಲಿ ಏನಾದರೂ ತಪ್ಪಾದಲ್ಲಿ ತಿದ್ದುಪಡಿ ಮಾಡಬೇಕು, ಆದರೆ ಈಗ ಅದು ಸುಲಭವಲ್ಲ, ಯಾಕೆ ಇಲ್ಲಿದೆ ಮಾಹಿತಿ.
ಆಧಾರ್ ನವೀಕರಣ ಕಡ್ಡಾಯ:
ಈ ಹಿಂದೆ ಆಧಾರ್ ತಿದ್ದುಪಡಿ ಮಾಡುವುದು ಸುಲಭವಾಗಿತ್ತು, ಹತ್ತು ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ (Aadhaar Card) ನವೀಕರಿಸಬೇಕು. ಸ್ಥಳ, ವಿಳಾಸವನ್ನು ನೋಂದಾಯಿಸಬೇಕು. ಇದರಿಂದ ನಕಲಿ ಐಡಿ ಕ್ರಿಯೇಟ್ ಆಗಿದ್ದರೆ ತಿಳಿಯುತ್ತದೆ ಎಂಬ ಉದ್ದೇಶ ವಾಗಿತ್ತು, ಯಾವುದೇ ತಪ್ಪು ಮಾಹಿತಿಗಳನ್ನು ತಪ್ಪಿಸುವ ಉದ್ದೇಶದಿಂದ ಆಧಾರ್ ಡೇಟಾವನ್ನು ನವೀಕರಿಸುವ ಅನಿವಾರ್ಯತೆ ಇದೆ ಎಂದು ಯುಡಿಐ ಹೇಳಿತ್ತು.
ಒಂದು ಬಾರಿ ಮಾತ್ರ ಅವಕಾಶ:
ಇದೀಗ ನಕಲಿ ಆಧಾರ್ ಸೃಷ್ಟಿಯಾಗಬಾರದು ಎಂಬುದು ಯುಐಡಿಎಐ ಉದ್ದೇಶವಾಗಿದ್ದರೂ ಹೊಸ ರೂಲ್ಸ್ ಆಧಾರ್ ಅಪ್ಡೇಟ್ ಬಹಳ ಕಂಟಕವಾಗುತ್ತಿದೆ ಎನ್ನಬಹುದು, ಈ ಹಿಂದೆ ಜನ್ಮದಿನಾಂಕವನ್ನು ಬದಲಾಯಿಸಲು ದಾಖಲೆಗಳಿಗೆ ಗೆಜೆಟೆಡ್ ಅಧಿಕಾರಿಗಳ ಸಹಿ ಸಾಕಾಗುತ್ತಿತ್ತು. ಆದರೆ ಹೊಸ ನಿಯದಲ್ಲಿ ಪುರಸಭೆ ಅಥವಾ ಪಂಚಾಯತ್ ನೀಡಿದ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದನ್ನು ಸಹ ಒಮ್ಮೆ ಮಾತ್ರ ಸರಿಪಡಿಸಲು ಅನುಮತಿಸಲಾಗಿದೆ. ಎರಡನೇ ಬಾರಿಗೆ ಬದಲಾವಣೆ ಮಾಡಲು ಬಯಸಿದರೆ ದೆಹಲಿಯ ಕೇಂದ್ರ ಕಚೇರಿಗೆ ಹೋಗಿ ಪೂರಕ ದಾಖಲೆಗಳನ್ನು ಸಲ್ಲಿಸಿ ಮಾಡಬೇಕಾಗುತ್ತದೆ. ಹೌದು ನಮಗೆ ಹೆಸರು ನವೀಕರಣಕ್ಕೆ ಎರಡು ಅವಕಾಶ ಮಾತ್ರ ನೀಡಲಾಗಿದೆ. ಎರಡನೇ ಬಾರಿಯೂ ತಪ್ಪಾದಲ್ಲಿ ಹೊಸದಾಗಿ ಆಧಾರ್ ಕಾರ್ಡ್ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.