Karnataka Times
Trending Stories, Viral News, Gossips & Everything in Kannada

Aadhaar Card Rules: ಇಂದು ರಾತ್ರಿಯಿಂದಲೇ ಆಧಾರ್ ಕಾರ್ಡ್ ನಿಯಮಗಳನ್ನೇ ಬದಲಾಯಿಸಿದ ಸರ್ಕಾರ! ಹೊಸ ಸೂಚನೆ

advertisement

ಭಾರತ ಸರ್ಕಾರ ಜಾರಿಗೆ ತಂದಿರುವಂತಹ ದಾಖಲೆ ಪತ್ರಗಳಲ್ಲಿ ಆಧಾರ್ ಕಾರ್ಡ್ ಅತ್ಯಂತ ಪ್ರಮುಖವಾಗಿದೆ ಎಂದು ನಿಮಗೆಲ್ಲರಿಗೂ ತಿಳಿದಿರುವಂತಹ ವಿಚಾರವಾಗಿದೆ. ಸರ್ಕಾರದ ಯಾವುದೇ ಕೆಲಸ ಇರಲಿ ಅಲ್ಲಿ ಆಧಾರ್ ಕಾರ್ಡ್ ಖಂಡಿತವಾಗಿ ಬೇಕೇ ಬೇಕು. ಇನ್ನು ಆಧಾರ್ ಕಾರ್ಡ್ (Aadhaar Card) ಅನ್ನು ಅಪ್ಡೇಟ್ ಮಾಡುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ಈಗಾಗಲೇ ಭಾರತ ಸರ್ಕಾರ ಸಾಕಷ್ಟು ಸಮಯಗಳ ಹಿಂದೆನೇ ಹೇಳಿತ್ತು.

ಆಧಾರ್ ಕಾರ್ಡ್ (Aadhaar Card) ಅನ್ನು ಸರಿಯಾದ ರೀತಿಯಲ್ಲಿ ಅಪ್ಡೇಟ್ ಮಾಡದೆ ಹೋದಲ್ಲಿ ಅದನ್ನು ಕೆಲವೊಂದು ಪ್ರಮುಖ ಕಾರ್ಯಗಳಿಗೆ ಬಳಸಿಕೊಳ್ಳದೇ ಇರುವಂತಹ ಪರಿಸ್ಥಿತಿಗೆ ಬರಬಹುದಾಗಿದೆ. ಆದರೆ ಅದಕ್ಕಿಂತಲೂ ಪ್ರಮುಖವಾಗಿ ಈಗ ನಾವು ಮಾತನಾಡಲು ಹೊರಟಿರುವುದು ರಾತ್ರೋರಾತ್ರಿ ಬದಲಾವಣೆ ಆಗಿರುವಂತಹ ಒಂದು ಹೊಸ ನಿಯಮದ ಬಗ್ಗೆ.

ರಾತ್ರಿ ಬದಲಾಗಿದೆ ನೋಡಿ ಹೊಸ ನಿಯಮ:

 

Image Source: ABP News

 

advertisement

ಹೌದು ಈಗ ನೀವು ಒಂದು ವೇಳೆ ಹೊಸದಾಗಿ ಆಧಾರ್ ಕಾರ್ಡ್ (Aadhaar Card) ಮಾಡಿಸಬೇಕು ಅಂತ ಅಂದ್ರೆ ಮೊದಲಿನ ರೀತಿಯಲ್ಲಿ ಕೂಡಲೇ ಸಿಗೋದಿಲ್ಲ. ಕನಿಷ್ಠ ಪಕ್ಷ ಹೊಸ ಆಧಾರ್ ಕಾರ್ಡ್ ಗಾಗಿ ಆರು ತಿಂಗಳಗಳ ಕಾಲ ಕಾಯ್ಬೇಕಾಗಿರುತ್ತದೆ ಅನ್ನೋದಾಗಿ ಸರ್ಕಾರದಿಂದ ಮಾಹಿತಿ ಸಿಕ್ಕಿದೆ. ಈ ಹಿಂದೆ ಹೊಸ ಆಧಾರ್ ಕಾರ್ಡ್ ಅನ್ನು ಮಾಡಿಸಿದ ಕೂಡಲೇ ಏಳು ದಿನಗಳ ಒಳಗಾಗಿ ಆಧಾರ್ ಕಾರ್ಡ್ಅನ್ನು ಕಳುಹಿಸಲಾಗುತ್ತಿತ್ತು ಆದರೆ ಇನ್ನು ಮುಂದೆ ಆ ರೀತಿ ಆಗುವುದಿಲ್ಲ. ಆದರೆ ಜುಲೈ ತಿಂಗಳಿನಿಂದ ಪ್ರಾರಂಭವಾಗಿ ಹೊಸ ನಿಯಮಗಳ ಪ್ರಕಾರ ಹೊಸ ಆಧಾರ್ ಕಾರ್ಡ್ (Aadhaar Card) ಅನ್ನು ಪಡೆದುಕೊಳ್ಳಲು ನೀವು ಅರ್ಜಿ ಸಲ್ಲಿಸಿದ ಆರು ತಿಂಗಳುಗಳ ಕಾಲ ಕಾಯಬೇಕಾಗುತ್ತದೆ.

18 ವರ್ಷ ವಯಸ್ಸು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಹೊಸ ಆಧಾರ್ ಕಾರ್ಡ್ (Aadhaar Card) ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಅಂದರೆ ಆರು ತಿಂಗಳುಗಳ ಕಾಲ ಕಾಯಿಲೆ ಬೇಕು ಅನ್ನೋದಾಗಿ ಹೊಸ ನಿಯಮಗಳು ಜಾರಿಯಾಗಿದೆ. ಸರ್ಕಾರದ ಕಡೆಯಿಂದ ಯಾವುದೇ ನಿಯಮಗಳನ್ನು ಗಡಿಬಿಡಿಯಲ್ಲಿ ಪಾಲಿಸಬಾರದು ಎನ್ನುವ ಕಾರಣಕ್ಕಾಗಿ ಈ ನಿಯಮಗಳನ್ನು ಜಾರಿಗೆ ತರಲಾಗಿದೆ. ಪ್ರತಿಯೊಂದು ಹಂತಗಳನ್ನ ಪಾಲಿಸಿಕೊಂಡೆ ಮುಂದುವರಿಯಬೇಕು ಎನ್ನುವುದಾಗಿ ಕೂಡ ಕಟ್ಟಪ್ಪಣೆ ನೀಡಲಾಗಿದೆ.

 

Image Source: Zee Business

 

ಇನ್ನು ಹತ್ತು ವರ್ಷಗಳ ಹಿಂದೆ ಮಾಡಿಸಿಕೊಂಡಿರುವಂತಹ ಆಧಾರ್ ಕಾರ್ಡ್ (Aadhaar Card) ಅನ್ನು ಕೂಡ UIDAI ಅಥವಾ ಆಧಾರ್ ಕಾರ್ಡ್ ಕೇಂದ್ರಕ್ಕೆ ಹೋಗಿ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗಿರುವಂತಹ ಮಾಹಿತಿಗಳನ್ನ ಅಪ್ಡೇಟ್ ಮಾಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಕೂಡ ಇದೇ ಸಂದರ್ಭದಲ್ಲಿ ಮತ್ತೊಮ್ಮೆ ಪುನರುಚ್ಛರಿಸಲಾಗಿದೆ. ಇದನ್ನು ಆನ್ಲೈನ್ ಅಥವಾ ಆಫ್ಲೈನ್ ಎರಡು ಮಾಧ್ಯಮದ ಮೂಲಕ ಕೂಡ ಅಪ್ಡೇಟ್ ಮಾಡುವಂತಹ ಅವಕಾಶ ಇದೆ.

advertisement

Leave A Reply

Your email address will not be published.