Karnataka Times
Trending Stories, Viral News, Gossips & Everything in Kannada

Toll Gate Fee: ಟೋಲ್ ಗೇಟ್ ಬಳಿ ಹೀಗಾದ್ರೆ ಹಣ ನೀಡುವುದೇ ಬೇಡ, ಹೊಸ ನಿಯಮ

Advertisement

ಸಾಮಾನ್ಯವಾಗಿ ದಿನವು ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ಕೆಲಸಕ್ಕಾಗಿ ಹೋಗಬೇಕಾದರೆ ರಾಷ್ಟ್ರೀಯ ಹೆದ್ದಾರಿ (National Highway) ಮೂಲಕ ಸಂಚರಿಸುವುದು ಅನಿವಾರ್ಯವಾಗಿರುತ್ತದೆ. ಹೀಗೆ ವಾಹನಗಳಲ್ಲಿ ಪ್ರಯಾಣಿಸುವಾಗ ಟೋಲ್ (Toll) ಪ್ಲಾಜಾ ವನ್ನು ಪಾಸ್ ಮಾಡಲೇಬೇಕು. ಟೋಲ್ ಪ್ಲಾಜಾ ಮೂಲಕ ಹೋಗುವುದಾದರೆ ಟೋಲ್ ತೆರಿಗೆ ಪಾವತಿಸಬೇಕು ಎನ್ನುವುದು ನಿಮಗೆಲ್ಲರಿಗೂ ಗೊತ್ತು. ಇದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳಲ್ಲಿ ಒಂದು. ಟೋಲ್ ಪ್ಲಾಜಾದಲ್ಲಿ ಹಣ ಪಾವತಿಸುವ ನಿಯಮ ಮಾತ್ರವಲ್ಲ. ಎನ್ ಹೆಚ್ ಎಐ ಮಕ್ಕಳು ಜನರಿಗೆ ಗೊತ್ತಿಲ್ಲ. ಈ ನಿಯಮದ ಪ್ರಕಾರ ಮೊತ್ತವನ್ನು ಪಾವತಿಸದೆಯೂ ಹೋಗಬಹುದು ಹೇಗೆ ಗೊತ್ತೇ?

Toll ಪ್ಲಾಜಾಕ್ಕಿಂತ ಹೆಚ್ಚು ಸಮಯ ನಿಂತಿದ್ದರೆ ಹಣ ಪಾವತಿ ಮಾಡುವುದೇ ಬೇಡ:

ಟೋಲ್ (Toll) ಪ್ಲಾಜಾದಲ್ಲಿ ಉದ್ದನೆಯ ಸರತಿ ಸಾಲು ಇರುತ್ತದೆ. ಕೆಲವೊಂದು ಸಂದರ್ಭದಲ್ಲಿ ಹೆಚ್ಚು ವಾಹನಗಳು ಟ್ರಾಫಿಕ್ (Traffic) ಕ್ರಿಯೇಟ್ ಮಾಡುತ್ತವೆ. ಆದರೂ ಫ್ಲಾಶ್ ಟ್ಯಾಗ್ ಆರಂಭವಾದ ನಂತರ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕೆಲವೊಮ್ಮೆ ನಿಧಾನ ಪ್ರಕ್ರಿಯೆಯಿಂದಾಗಿ ವಾಹನ ಮಾಲೀಕರು ಹೆಚ್ಚು ಹೊತ್ತು ಕಾಯಬೇಕಾಗುತ್ತದೆ. ಟೂರ್ ಪ್ಲಾಜಾದಲ್ಲಿ 10 ಸೆಕೆಂಡ್ ಗಳಿಗಿಂತ ಹೆಚ್ಚಿಗೆ ನಿಲ್ಲಬಾರದು ಎನ್ನುವ ನಿಯಮ ಇದೆ. ಪೀಕ್ ಅವರ್ ಅಥವಾ ಪ್ರೈಮ್ ಟೈಮ್ ಆಗಿದ್ದರು ಕೂಡ 10 ಸೆಕೆಂಡ್ ಗಳಿಗಿಂತ ಹೆಚ್ಚು ಸಮಯದಲ್ಲಿ ನಿಲ್ಲಬಾರದು.

Tax ಪಾವತಿಸದೇ ಮುಂದುವರೆಯಬಹುದು:

NHAI (National Highway authority of India) 2021 ಮೇ ತಿಂಗಳಿನಲ್ಲಿ ಆದೇಶ ಹೊರಡಿಸಿದ್ದು, ವಾಹನ ಮಾಲೀಕರು 10 ಸೆಕೆಂಡಿಗಿಂತ ಹೆಚ್ಚು ಸಮಯ ಕಾದಿದ್ದರೆ ಟೋಲ್ ಹಣ ಕಟ್ಟಬೇಕಾದ ಅಗತ್ಯವಿಲ್ಲ. ಹಣವನ್ನು ಪಾವತಿ ಮಾಡದೇ ಹಾಗೆ ಮುಂದುವರೆಯಬಹುದು. ಆದರೆ ಈಗ ಫಾಸ್ಟ್ ಟ್ಯಾಗ್ ನಿಂದಾಗಿ ಜನ ಅಷ್ಟು ಹೊತ್ತು ಕೂಡ ಕಾಯುವ ಅಗತ್ಯವಿಲ್ಲ. ಕೂಡಲೇ ಟೋಲ್ ಪ್ಲಾಜಾ ದಿಂದ ಹೊರಹೋಗಬಹುದು.

Leave A Reply

Your email address will not be published.