Mobile: ನಿಮ್ಮ ಮೊಬೈಲ್ ಅಲ್ಲಿ *99# ಒತ್ತಿದರೆ ಏನಾಗಲಿದೆ ಗೊತ್ತೇ? ಸಿಹಿಸುದ್ದಿ ಕೊಟ್ಟ ಸರ್ಕಾರ
ಇಂದು ಯಾವುದೇ ಹಣಕಾಸಿನ ವ್ಯವಹಾರ ಮಾಡುವುದಿದ್ದರೂ ಗೂಗಲ್ ಪೇ (Google Pay), ಫೋನ್ ಪೇ (Phone Pe), ಪೇಟಿಎಂ (Paytm), ಮೊದಲಾದ ಯುಪಿಐ ಪ್ಲಾಟ್ ಫಾರ್ಮ್ ಅನ್ನು ಅವಲಂಬಿಸಿದ್ದಾರೆ. ಯಾವುದೇ ಸಣ್ಣ ಹಣಕಾಸಿನ ವ್ಯವಹಾರದಲ್ಲಿ ಅಥವಾ ಹೆಚ್ಚು ಹಣ ಕಳುಹಿಸುವ ಕೆಲಸವಿರಲಿ ಎಲ್ಲವೂ ಆನ್ಲೈನ್ ಮೂಲಕವೇ ಆಗಿಬಿಡುತ್ತದೆ. ಅದಕ್ಯೂ ಕೆಲವೊಮ್ಮೆ ನೆಟ್ವರ್ಕ್ ಸಮಸ್ಯೆಯಿಂದ ಅಥವಾ ಮೊಬೈಲ್ (Mobile) ಚಾರ್ಜ್ ಖಾಲಿಯಾಗುವುದರಿಂದ ತುರ್ತು ಪರಿಸ್ಥಿತಿಯಲ್ಲಿಯೂ ಕೂಡ ಆನ್ಲೈನ್ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಹಣ ಪಾವತಿ ಮಾಡಲಾಗದೆ ಚಿಂತೆಗೀಡಾಗುತ್ತೇವೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ ಈ ಒಂದು ಟ್ರಿಕ್ ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ ಕೂಡ ಹಣ ವರ್ಗಾವಣೆ ಮಾಡಬಹುದು.
*99# ಸೇವೆಯ ಪ್ರಯೋಜನ ಪಡೆಯಿರಿ:
USSD (ಅನ್ ಸ್ಟ್ರಕ್ಚರ್ ಸಪ್ಲಿಮೆಂಟರಿ ಸರ್ವಿಸ್ ಡಾಟಾ) ಆಧಾರಿತ ಬ್ಯಾಂಕಿಂಗ್ ಸೇವೆಯ ಮೂಲಕ ಇಂಟರ್ನೆಟ್ ಇಲ್ಲದೆ ಹಣ ಪಾವತಿ ಮಾಡಬಹುದು. *99# ಮೊಬೈಲ್ ಬ್ಯಾಂಕಿಂಗ್ ಸೇವೆ ಪ್ರಯೋಜನ ಪಡೆಯಬಹುದು. ಇದು ಉತ್ತಮ ಬ್ಯಾಂಕಿಂಗ್ ಸೇವೆಯಾಗಿದ್ದು 4 ಟೆಲಿಕಾಂ ಹಾಗೂ 83 ಪ್ರಮುಖ ಬ್ಯಾಂಕ್ಗಳಲ್ಲಿ ಈ ಸೇವೆ ಲಭ್ಯವಿದೆ. ನೀವು ಇಂಗ್ಲೀಷ್ ಮತ್ತು ಹಿಂದಿ ಭಾಷೆ ಮಾತ್ರವಲ್ಲದೆ ಇತರ 13 ಭಾಷೆಗಳಲ್ಲಿಯೂ ಸೇವೆ ಪಡೆದುಕೊಳ್ಳಬಹುದು. ಈ ಮೂಲಕ ನೀವು ಇಂಟರ್ನೆಟ್ ಇಲ್ಲದೆ ಹಣ ಕಳಿಸುವುದು ಮಾತ್ರವಲ್ಲದೆ, ಯುಪಿಐ ಪಿನ್ (UPI PIN) ಬದಲಾವಣೆ ಖಾತೆಯ ಬ್ಯಾಲೆನ್ಸ್ ತಿಳಿದುಕೊಳ್ಳುವುದು ಈ ಎಲ್ಲಾ ಕೆಲಸಗಳನ್ನು ಕೂಡ ಮಾಡಬಹುದು. ನೆಟ್ವರ್ಕ್ ಸಮಸ್ಯೆ ಇದು ಹಣ ಪಾವತಿ ಮಾಡಲು ಕಷ್ಟಪಡುವವರಿಗೆ ಇದು ಹೆಚ್ಚಿನ ಪ್ರಯೋಜನ ನೀಡುತ್ತದೆ.
ಆಫ್ಲೈನ್ ನಲ್ಲಿ UPI ಪಾವತಿ ಮಾಡಲು ಈ ಸ್ಟೆಪ್ಸ್ ಅನುಸರಿಸಿ.
Step 1. ಆಫ್ ಲೈನ್ ಇರುವಾಗಲು ಯುಪಿಐ ಪೇಮೆಂಟ್ ಮಾಡಲು ಬಯಸಿದರೆ ಮೊದಲು ನಿಮ್ಮ ಸ್ಮಾರ್ಟ್ ಫೋನ್ ನಿಂದ *99# ಈ ನಂಬರ್ಗೆ ಡಯಲ್ ಮಾಡಿ.
Step 2. ನೀವು ಬ್ಯಾಂಕ ಖಾತೆಗೆ ಯಾವ ನಂಬರ್ ಲಿಂಕ್ ಮಾಡಿರುತ್ತಿರೋ ಅದೇ ನಂಬರ್ ನಿಂದ ಈ ಸಂಖ್ಯೆಗೆ ಡಯಲ್ ಮಾಡಬೇಕು.
Step 3. ಅಲ್ಲಿ ನೀವು ಭಾಷೆ ಆಯ್ಕೆಯನ್ನು ಮಾಡಿಕೊಳ್ಳಬೇಕು. ನಂತರ ಬ್ಯಾಂಕ್ ಹೆಸರು ನಮೂದಿಸಬೇಕು.
Step 4. ಈಗ ನಿಮ್ಮ ಮೊಬೈಲ್ ನಂಬರ್ ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿ ನಿಮಗೆ ಕಾಣಿಸುತ್ತದೆ.
Step 5. ಡೆಬಿಟ್ ಕಾರ್ಡ್ ನ ಮುಕ್ತಾಯ ದಿನಾಂಕ ಮತ್ತು ಕೊನೆಯ ಆರು ಅಂಕೆಗಳನ್ನು ನೀವು ನಮೂದಿಸಬೇಕು.
Step 6. ಈ ಸೆಟ್ಟಿಂಗ್ ಪೂರ್ಣಗೊಂಡ ನಂತರ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ನೀವು ಹಣ ಪಾವತಿ ಮಾಡಬಹುದು.
Step 7. *99# ಡಯಲ್ ಮಾಡಿದ ನಂತರ ನಿಮ್ಮ ಫೋನ್ ಸಂಖ್ಯೆಯಿಂದ ಹಣ ವರ್ಗಾಯಿಸಲು ಒಂದನ್ನು ನಮೂದಿಸಬೇಕು.
Step 8. ಈಗ ನೀವು ಯಾರ ಖಾತೆಗೆ ಹಣ ಕಳುಹಿಸುತ್ತಿರುವ ಅವರ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನಮೂದಿಸಬೇಕು ಬಳಿಕ ಯುಪಿಐ ಪಿನ್ ಹಾಕಬೇಕು.
Step 9. ಯುಪಿಐ ಪಿನ್ ಹಾಕಿದ ನಂತರ ನಿಮ್ಮ ಪಾವತಿಯನ್ನು ಪೂರ್ಣಗೊಳಿಸಲಾಗುತ್ತದೆ.
ಈ ಆಫ್ಲೈನ್ ಸೇವೆಯಲ್ಲಿ ನೀವು ದಿನಕ್ಕೆ 5 ವರೆಗೆ ಮಾತ್ರ ಹಣ ಪಾವತಿ ಮಾಡಬಹುದು ಅದಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ.