Karnataka Times
Trending Stories, Viral News, Gossips & Everything in Kannada

Matrutwa Vandana Yojana: ಮೋದಿ ಸರ್ಕಾರದಿಂದ ಗರ್ಭಿಣಿ ಮಹಿಳೆಯರಿಗೆ ಸಿಕ್ತು ಬಂಪರ್ ಆಫರ್!

Advertisement

ಮಗುವಿಗೆ ಜನ್ಮ ನೀಡಿರುವ ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಆರ್ಥಿಕ ಸಬಲತೆಯ ರೇಖೆಗಿಂತ ಕೆಳಗಿರುವಂತಹ ಮಹಿಳೆಯರಿಗೆ ಇದೊಂದು ಅತ್ಯಂತ ಲಾಭದಾಯಕ ಯೋಜನೆ ಆಗಿರಲಿದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಮೋದಿ ಸರ್ಕಾರದಿಂದ(Modi Govt) ಬಿಡುಗಡೆ ಆಗಿರುವಂತಹ ಈ ಯೋಜನೆ ಗರ್ಭಿಣಿ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಗಳನ್ನು ನೀಡಲಿದ್ದು ಅದು ಯಾವ ಯೋಜನೆ ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ಮಹಿಳೆಯರಿಗೆ ಅದರಲ್ಲೂ ವಿಶೇಷವಾಗಿ ಗರ್ಭಿಣಿ ಮಹಿಳೆಯರಿಗೆ ಸಹಕಾರವನ್ನು ಹೆಚ್ಚಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಕಷ್ಟು ಉತ್ತಮ ಪ್ರಯೋಜನಗಳನ್ನು ಉಳ್ಳಂತಹ ಯೋಜನೆಗಳನ್ನು ಜಾರಿಗೆ ತರಲು ಯೋಚಿಸುತ್ತಿದ್ದು ಸದ್ಯಕ್ಕೆ ಅದರ ಅನ್ವಯವಾಗಿ ಗರ್ಭಿಣಿ ಮಹಿಳೆಯರಿಗೆ 6000 ಆರ್ಥಿಕ ಸಹಾಯವನ್ನು ನೀಡುವ ಕೆಲಸವನ್ನು ಕೂಡ ಹಮ್ಮಿಕೊಂಡಿದೆ. ಮಾತೃತ್ವ ವಂದನಾ(Matrutwa Vandana) ಯೋಜನೆ ಅಡಿಯಲ್ಲಿ ಸಾಕಷ್ಟು ಪ್ರಯೋಜನಗಳನ್ನು ಗರ್ಭಿಣಿ ಮಹಿಳೆಯರಿಗೆ ಗರ್ಭವಸ್ಥೆಯ ಸಂದರ್ಭದಲ್ಲಿ ಸಹಾಯವಾಗಲಿ ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಗರ್ಭಿಣಿಯರಿಗೆ 19 ವರ್ಷ ವಯಸ್ಸು ಆಗಿರಲೇಬೇಕು. ಈ ಯೋಜನೆ ಅಡಿಯಲ್ಲಿ ತಾಯಿ ಹಾಗೂ ಮಗು ಇಬ್ಬರೂ ಕೂಡ ಪೌಷ್ಟಿಕಾಂಶ ಆಹಾರವನ್ನಷ್ಟೇ ಸೇವಿಸಬೇಕು ಎನ್ನುವ ಕಾರಣಕ್ಕಾಗಿ ಪೌಷ್ಟಿಕಾಂಶ ಆಹಾರವನ್ನು ಕೂಡ ಒದಗಿಸಲಾಗುತ್ತಿದ್ದು ಈ ಯೋಜನೆ 2017 ರಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ನೀವು ಕೂಡ ಈ ಯೋಜನೆಯ ಭಾಗವಾಗಬಹುದು ಹಾಗೂ 6,000ಗಳನ್ನು ಮೂರು ಕಂತುಗಳ ಲೆಕ್ಕದಲ್ಲಿ ಸರ್ಕಾರ ನಿಮಗೆ ನೀಡಲಿದೆ.

ಹಂತ ಹಂತವಾಗಿ ಅಂದರೆ ಮೊದಲನೇ ತಿಂಗಳು ಒಂದು ಸಾವಿರ ಎರಡು ಹಾಗೂ ಮೂರು ತಿಂಗಳಿನಲ್ಲಿ ತಲಾ 2000 ಸಹಾಯಧನವನ್ನು ಗರ್ಭಿಣಿ(Pregnant Women) ಮಹಿಳೆಯರು ಪಡೆಯಲಿದ್ದಾರೆ. ಒಂದು ವೇಳೆ ಈ ಯೋಜನೆಯಲ್ಲಿ ನೀವು ಏನಾದರೂ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಸಹಾಯವಾಣಿ ಸಂಖ್ಯೆಯಾಗಿರುವ 7998799804 ನಂಬರ್ ಗೆ ಕರೆ ಮಾಡುವ ಮೂಲಕ ಕ್ಷೀಪ್ರಗತಿಯಲ್ಲಿ ಪರಿಹಾರವನ್ನು ಪಡೆದುಕೊಳ್ಳಬಹುದು. ಹೀಗಾಗಿ ತಪ್ಪದೆ ನೀವು ಹಾಗೂ ನಿಮ್ಮ ಸುತ್ತಮುತ್ತಲಿನಲ್ಲಿ ಯಾರಾದರೂ ಈ ಅರ್ಹತೆಗೆ ಒಳಗಾಗಿರುವವರು ಇದ್ದರೆ ತಪ್ಪದೇ ಅವರಿಗೆ ಸಹಾಯ ಮಾಡಲು ಇದರ ಮಾಹಿತಿಯನ್ನು ಅವರಿಗೆ ತಿಳಿಸಿ.

Leave A Reply

Your email address will not be published.