Karnataka Times
Trending Stories, Viral News, Gossips & Everything in Kannada

Aadhar Pan Link: ಆಧಾರ್-ಪ್ಯಾನ್ ಲಿಂಕ್ ದಂಡದ ವಿಚಾರವಾಗಿ ಸರ್ಕಾರದ ಮತ್ತೊಂದು ಖಡಕ್ ನಿರ್ಧಾರ

ಆಧಾರ್(Aadhar) ಹಾಗೂ ಪ್ಯಾನ್ ಕಾರ್ಡ್ ಲಿಂಕ್(Pan Card Link) ಮಾಡುವ ಗಡುವನ್ನು ಈಗಾಗಲೇ ವಿಸ್ತರಿಸಲಾಗಿದೆ. ಮಾರ್ಚ್ 31 ಕೊನೆಯ ದಿನಾಂಕ ಎಂದು ಸರ್ಕಾರ ಘೋಷಿಸಿದ್ದು ಆದರೆ ಕಾರಣಾಂತರಗಳಿಂದ ಈ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಜೂನ್ 30ರವರೆಗೂ ಮುಂದುವರಿಸಲಾಗಿದೆ. ಜೊತೆಗೆ ಯಾವುದೇ ಹಣ ಪಾವತಿ ಮಾಡದೆ ಲಿಂಕ್ ಮಾಡಿಕೊಳ್ಳಬಹುದು. ಎಂದು ಸರ್ಕಾರ ತಿಳಿಸಿದೆ.

Advertisement

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್(Nirmala Sitaram), ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಯಾವುದೇ ಹೆಚ್ಚುವರಿ ಹಣ ಪಾವತಿ ಮಾಡಬೇಕಾಗಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದೇ ಬರುವ ಜೂನ್ 30ರ ಒಳಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ದಂಡವನ್ನು ಪಾವತಿಸಬೇಕು ಜೊತೆಗೆ ಫ್ಯಾನ್ ನಂಬರ್ ಕೂಡ ನಿಷ್ಕ್ರಿಯವಾಗುತ್ತದೆ.

Advertisement

ಮಾರ್ಚ್ ವರೆಗೆ ಉಚಿತವಾಗಿ ಲಿಂಕ್ ಮಾಡಿಕೊಳ್ಳಬಹುದಿತ್ತು:

Advertisement

ಮಾರ್ಚ್ 31 2022ರವರಿಗೆ, ಆಧಾರ್ ಪ್ಯಾನ್ ಲಿಂಕ್ ಮಾಡುವುದು ಉಚಿತ ಪ್ರಕ್ರಿಯೆ ಆಗಿತ್ತು. ನಂತರ ಏಪ್ರಿಲ್ ವರೆಗೆ ಗಡುವು ವಿಸ್ತರಿಸಲಾಗಿತ್ತಾದರು 500 ರೂಪಾಯಿಗಳ ವಿಳಂಬ ಶುಲ್ಕ ಪಾವತಿಸಬೇಕಿತ್ತು. ನಂತರ ಜುಲೈ 1ರಿಂದ 500 ರೂಪಾಯಿಗಳನ್ನು ಸಾವಿರ ರೂಪಾಯಿಗೆ ಹೆಚ್ಚಿಸಲಾಯಿತು. ಅಂದರೆ ಈ ಮಾರ್ಚ್ ವರೆಗೂ ಸಾವಿರ ರೂಪಾಯಿ ದಂಡವನ್ನು ಕಟ್ಟಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಿ ಕೊಳ್ಳಲು ಸಾಧ್ಯವಿತ್ತು. ಯೂನಿಯನ್ ಮಿನಿಸ್ಟರ್ ನಿರ್ಮಲಾ ಸೀತಾರಾಮನ್ ಅವರು “ಈಗಾಗಲೇ ಸಾಕಷ್ಟು ಸಮಯ ನೀಡಲಾಗಿತ್ತು. ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಿಕೊಳ್ಳಲೇಬೇಕು” ಎಂದು ಹೇಳಿದ್ದಾರೆ.

Advertisement

ಆದಾಯ ತೆರಿಗೆ ಸಮಸ್ಯೆಗೆ ಕಾರಣವಾಗಬಹುದು:

ಜೂನ್ 30ರ ಗಡುವನ್ನು ತಪ್ಪಿದರೆ ದಂಡವೂ ಹೆಚ್ಚಾಗಲಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. ಪ್ಯಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಳ್ಳಲೇಬೇಕು. ಇಲ್ಲವಾದರೆ ಟಿಡಿಎಸ್, ಟಿಸಿಎಸ್ ಸೇರಿದಂತೆ ಮೊದಲಾದ ಪಾವತಿಯ ಮೇಲೆ ಹೆಚ್ಚಿನ ಮೊತ್ತ ಭರಿಸಬೇಕಾಗುತ್ತದೆ.

ಜುಲೈ 1, 2017ರವರೆಗೆ ಫ್ಯಾನ್ ಮಾಡಿಕೊಂಡವರಿಗೆ ಇದು ಕಡ್ಡಾಯ:

ಆದಾಯ ತೆರಿಗೆ ಕಾಯ್ದೆ 1961ರ ನಿಯಮಗಳ ಅಡಿಯಲ್ಲಿ ಜುಲೈ ಒಂದು 2017ರಲ್ಲಿ ಪಾನ್ ಕಾರ್ಡ್ ಪಡೆದಿರುವವರು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುತ್ತಾರೆ. 2017ರಿಂದ ಫ್ಯಾನ್ ಹೊಂದಿರುವವರು ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿಕೊಳ್ಳಲೇಬೇಕು. ಇಲ್ಲವಾದರೆ 1961ರ ನಿಬಂಧನೆಯ ಅಡಿಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಜೂನ್ 30, 2023ರ ವರೆಗೆ ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ದಿನಾಂಕವನ್ನು ವಿಸ್ತರಿಸಲಾಗಿದೆ.

Leave A Reply

Your email address will not be published.