Karnataka Times
Trending Stories, Viral News, Gossips & Everything in Kannada

Voter ID Link: ಪಾನ್ ಆಯ್ತು ಇದೀಗ ವೋಟರ್ ಐಡಿ ಆಧಾರ್ ಲಿಂಕ್ ಕುರಿತು ಸರ್ಕಾರದ ಹೊಸ ಆಜ್ಞೆ

Advertisement

ಆಧಾರ್ ಪಾನ್ ಕಾರ್ಡ್ (Adhar pan link) ಲಿಂಕ್ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಮುಂಬರುವ ವಿಧಾನ ಸಭಾ (Vidhanasabha) ಚುನಾವಣೆಗೆ ಇದು ಸಮಸ್ಯೆಯಾಗುತ್ತಾ ಜನರ ಮತಚಲಾವಣೆಗೆ ಇದು ಸಮಸ್ಯೆ ಆಗಬಹುದಾ ಹೀಗೆ ಅನೇಕ ಪ್ರಶ್ನೆಗಳು ಜನಸಾಮಾನ್ಯರಲ್ಲಿ ಕಾಡಿತ್ತು ಈ ಮೂಲಕ ಅದಕ್ಕೆಲ್ಲ ಉತ್ತರವನ್ನು ನೀವು ಈ ಲೇಖನದಲ್ಲಿ ಕಂಡುಕೊಳ್ಳಬಹುದು.

ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ (Adhar link) ಇಲ್ಲದಿದ್ದರೆ ಸಮಸ್ಯೆ ಯಾಗುತ್ತೆ ಎಂಬ ಸುದ್ದಿ ಹರಿದಾಡಿದ್ದು ಇದೀಗ ಆ ಬಗ್ಗೆ ಸ್ಪಷ್ಟನೆ ದೊರೆತಿದೆ. ಈ ಮೂಲಕ ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ನಿಖರವಾದ ಮಾಹಿತಿಯನ್ನು ಹೊರಹಾಕಿದ್ದಾರೆ.

ಕಾನೂನು ಸಚಿವ ಹೇಳಿದ್ದೇನು:

ಕಾನೂನು ಸಚಿವ ಕಿರಣ್ ರಿಜಿಜು (Kiran Rijiju) ಅವರು ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ್ದಾರೆ. ಮಾಧ್ಯಮ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕಾನೂನು ಸಚಿವ ಕಿರಣ್ ರಿಜಿಜು ಅವರು ಉತ್ತರಿಸಿ ಮತದಾರರ ಗುರುತು ಚೀಟಿ ಆಧಾರ್ ಲಿಂಕ್ ಆಗಲಿಲ್ಲ. ಈ ಪ್ರಕ್ರಿಯೆ ಇನ್ನು ಮುಂದಿನ ದಿನಗಳಲ್ಲಿ ಬಹುತೇಕ ಕಡೆಗಳಲ್ಲಿ ಸಾಗುತ್ತದೆ. ಇದು ಭವಿಷ್ಯತ್ತಿನ ದೃಷ್ಟಿಯಿಂದ ಅಗತ್ಯವಾಗಿದೆ. ಇದಕ್ಕೆ ಗಡುವಿನ ಕಾಲಾವಧಿ ಈಗ ಮಾಡಲಾಗದು ಇದು ನಿರಂತರ ಪ್ರಕ್ರಿಯೆಯಾಗಿದೆ. ಈಗ ಮತಚಲಾವಣೆ ಮಾಡಲು ಯಾವುದೇ ರೂಲ್ಸ್ ಅಪ್ಲೆ ಮಾಡೊಲ್ಲ. ಆಧಾರ್ ಜೋಡಣೆಯಾಗದ ಮತದಾರರು ಮತದಾನ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಪರಿಣಾಮ ವೇನು?

2022 ಆಗಸ್ಟ್ 1ರಿಂದಲೇ ಗುರುತು ದೃಢೀಕರಣ ಪ್ರಕ್ರಿಯೆ ಸಾಗಿದ್ದು ಈ ಮೂಲಕ ಆಧಾರ್ ಅನ್ನು ದೇಶಿಯ ಗುರುತಾಗಿ ಪರಿಗಣಿಸಿ ಮತದಾರರ ಚೀಟಿ ಪಡೆಯಲು ನೋಂದಣಿ ಪ್ರಕ್ರಿಗೆ ಪರಿಗಣಿಸಲಾಗುತ್ತಿತ್ತು. ಇದೀಗ ಪಾನ್ ಆಧಾರ್ ಲಿಂಕ್ ಸಮಸ್ಯೆ ಸಾವಿರ ರೂ. ದಂಡಪಾವತಿ ವರೆಗೆ ಬಂದಿದ್ದರು ಮುಂಬರುವ ಚುನಾವಣೆಯಲ್ಲಿ ಮತದಾನದಲ್ಲಿ ಯಾವುದೇ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಓಟಾರ್ ಐಡಿ (Voter ID) ಹಾಗೂ ಆಧಾರ್ ಲಿಂಕ್ ಪ್ರಕ್ರಿಯೆಗೆ ಯಾವುದೇ ಗಡುವು ನೀಡಲಿಲ್ಲ.

ಚುನಾವಣೆಯ ಬಳಿಕ ಮತದಾರರ ಗುರುತು ಚೀಟಿ ಹಾಗೂ ಆಧಾರ್ ಲಿಂಕ್ ಕಡ್ಡಾಯ ಗೊಳಿಸಿ ಅದಕ್ಕೆ ನಿರ್ದಿಷ್ಟ ಗಡುವಿನ ದಿನಾಂಕ ನೀಡುವ ಸಾಧ್ಯತೆ ಸಹ ಇದೆ ಎನ್ನಬಹುದು. ಹಾಗಾಗಿ ಸಮಯ ಇದ್ದಾಗಲೇ ಇದರ ಜೋಡಣೆ ಮಾಡಿ ಮುಂದಾಗುವ ಸಮಸ್ಯೆಯಿಂದ ಪರಿಹಾರ ಕಾಣುವುದು ಒಂದು ರೀತಿಯಲ್ಲಿ ಉತ್ತಮ ಉಪಾಯ ಇದೆ ಎಂದು ಹೇಳಬಹುದು.

Leave A Reply

Your email address will not be published.