Karnataka Times
Trending Stories, Viral News, Gossips & Everything in Kannada

Aadhaar-PAN Card: ಆಧಾರ್ ಹಾಗು ಪಾನ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಬಂತು ನೋಡಿ ಮಹತ್ವದ ಸೂಚನೆ!

advertisement

ಭಾರತ ಸರ್ಕಾರ ಜಾರಿಗೆ ತಂದಿರುವಂತಹ ಪ್ರಮುಖ ದಾಖಲೆ ಪತ್ರಗಳಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ (Aadhaar-PAN Card) ಕೂಡ ಪ್ರಮುಖವಾಗಿ ಕಾಣಿಸಿಕೊಳ್ಳುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಸರ್ಕಾರಿ ಕೆಲಸಗಳಿಗೂ ಹಾಗೂ ನಿಮ್ಮ ಯಾವುದೇ ರೀತಿಯ ಯೋಜನೆಗಳನ್ನು ಪಡೆದುಕೊಳ್ಳುವುದಕ್ಕೆ ಕೂಡ ಆಧಾರ್ ಕಾರ್ಡ್ ನಿಮ್ಮ ಐಡೆಂಟಿಟಿ ಪ್ರೂಫ್ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಇನ್ನು ಪ್ಯಾನ್ ಕಾರ್ಡ್ (PAN Card) ಕೂಡ ಪ್ರತಿಯೊಂದು ಹಣಕಾಸಿನ ಸಂಬಂಧ ಪಟ್ಟಂತಹ ಟ್ರಾನ್ಸಾಕ್ಷನ್ ಗಳಿಗೆ ಹಾಗೂ ಐವತ್ತು ಸಾವಿರ ರೂಪಾಯಿಗಳಿಗಿಂತ ಹೆಚ್ಚಿನ ಯಾವುದೇ ಟ್ರಾನ್ಸಾಕ್ಷನ್ ಗಳಿಗೂ ಕೂಡ ಪಾನ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುತ್ತದೆ. ಯಾವುದೇ ರೀತಿಯ ಲೋನ್ ಪ್ರಕ್ರಿಯೆಯಲ್ಲಿ ಕೂಡ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳ (Aadhaar-PAN Card) ಅವಶ್ಯಕತೆ ಪ್ರಮುಖವಾಗಿರುತ್ತದೆ. ಹೀಗಾಗಿ ಇವೆರಡು ದಾಖಲೆಗಳು ಭಾರತ ದೇಶದಲ್ಲಿ ಪ್ರತಿಯೊಂದು ಕೆಲಸಗಳಿಗೂ ಕೂಡ ಅತ್ಯಂತ ಅಗತ್ಯವಾಗಿ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳಾಗಿವೆ.

 

Image Credit: Tata Capital

 

advertisement

ಇನ್ನು ಯು ಅತ್ಯಂತ ಪ್ರಮುಖ ದಾಖಲೆಗಳಾಗಿರುವ ಕಾರಣದಿಂದಾಗಿ ಇವುಗಳನ್ನು ಅತ್ಯಂತ ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಕೂಡ ಪ್ರತಿಯೊಬ್ಬರ ಆದ್ಯ ಕರ್ತವ್ಯ ಆಗಿರುತ್ತದೆ ಅನ್ನೋದನ್ನ ಕೂಡ ಮರೆಯಬಾರದು. ಇದೇ ರೀತಿಯಲ್ಲಿ ಇತ್ತೀಚಿನ ದಿನಗಳಲ್ಲಿ ನೀವು ತಿಳಿಯಬೇಕಾಗಿರುವಂತಹ ಮತ್ತೊಂದು ವಿಚಾರ ಅಂದ್ರೆ ಇಂತಹ ಪ್ರಮುಖ ಡಾಕ್ಯುಮೆಂಟ್ ಗಳನ್ನ ಬೇರೆಯವರ ಜೊತೆಗೆ ಶೇರ್ ಮಾಡುವುದಕ್ಕೆ ಹೋಗಬಾರದು ಅನ್ನೋದನ್ನ ಕೂಡ ನೀವು ತಿಳಿದುಕೊಳ್ಳಬೇಕು.

ಸಾಕಷ್ಟು ಕಡೆಗಳಲ್ಲಿ ಅಂದ್ರೆ ಒಂದು ವೇಳೆ ಯಾವುದಾದ್ರೂ ವಾಹನವನ್ನು ಮಾರಾಟ ಅಥವಾ ಖರೀದಿ ಮಾಡಬೇಕು ಅಂತ ಅಂದ್ರೆ ಆ ಸಂದರ್ಭದಲ್ಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ (Aadhaar-PAN Card) ಗಳನ್ನು ನೀವು ಬೇರೆಯವರಿಗೆ ಕಳಿಸುವುದು ಅಥವಾ ಬೇರೆ ಯಾವುದೇ ಸಂದರ್ಭದಲ್ಲಿ ಬೇರೆಯವರು ಕೇಳಿದ ತಕ್ಷಣ ಈ ರೀತಿಯ ಪ್ರಮುಖ ದಾಖಲೆ ಪತ್ರಗಳನ್ನ ಸೆಂಡ್ ಮಾಡೋದು ಅಷ್ಟೊಂದು ಸರಿಯಲ್ಲ ಯಾಕೆಂದರೆ ಅವರು ನಿಮ್ಮ ಹೆಸರಿನಲ್ಲಿ ಈ ದಾಖಲೆ ಪತ್ರಗಳನ್ನು ಉಪಯೋಗಿಸಿಕೊಂಡು ಬೇರೆ ಕೆಟ್ಟ ಕೆಲಸಗಳಿಗೆ ಉಪಯೋಗಿಸುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಾದ ನಂತರ ಮುಂದೆ ಭವಿಷ್ಯದಲ್ಲಿ ಇದರಿಂದ ನೀವು ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

 

Image Credit: News18

 

ಇದೇ ರೀತಿಯಲ್ಲಿ ಬೇರೆಯವರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ (Aadhaar-PAN Card) ಗಳನ್ನು ಬಳಸಿಕೊಂಡು ಬೇರೆಯವರು ಸಾಲ (Loan) ವನ್ನು ನಕಲಿಯಾಗಿ ಪಡೆದುಕೊಂಡಿರುವಂತಹ ಉದಾಹರಣೆಗಳು ಕೂಡ ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿದೆ. ಇದು ನಿಮ್ಮ ಸಿಬಿಲ್ ಸ್ಕೋರ್ (CIBIL Score) ಗೆ ಎಫೆಕ್ಟ್ ಆಗಬಹುದು ಹಾಗೂ ಮುಂದಿನ ದಿನಗಳಲ್ಲಿ ನಿಮಗೆ ಬೇಕು ಅಂತ ಅಂದ್ರು ಕೂಡ ಬೇರೆ ಬ್ಯಾಂಕುಗಳು ಸಾಲ ನೀಡದೇ ಇರುವಂತಹ ಪರಿಸ್ಥಿತಿ ಕೂಡ ಈ ಸಂದರ್ಭದಲ್ಲಿ ನಿರ್ಮಾಣವಾಗಬಹುದಾಗಿದೆ. ಹೀಗಾಗಿ ಹುಷಾರಾಗಿ ನಿಮ್ಮ ದಾಖಲೆ ಪತ್ರಗಳನ್ನು ಬೇರೆಯವರಿಗೆ ಸಿಗದಂತೆ ಅಥವಾ ನೀವು ಕಳಿಸಿದಂತೆ ನೋಡಿಕೊಳ್ಳಿ.

advertisement

Leave A Reply

Your email address will not be published.