Karnataka Times
Trending Stories, Viral News, Gossips & Everything in Kannada

15 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಇದ್ದವರಿಗೆ ಗುಡ್ ನ್ಯೂಸ್! ಕೇಂದ್ರದ ಹೊಸ ನಿರ್ಧಾರ

advertisement

ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ತಮ್ಮದೇ ಆಗಿರುವಂತಹ ಸ್ವಂತ ಮನೆಯನ್ನು ಹೊಂದಬೇಕು ಎನ್ನುವಂತಹ ಹಾಗೂ ತಮ್ಮ ಕುಟುಂಬಕ್ಕಾಗಿ ಏನಾದರು ಬಿಟ್ಟು ಹೋಗಬೇಕು ಎನ್ನುವಂತಹ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮಿಡಲ್ ಕ್ಲಾಸ್ ಕುಟುಂಬದಲ್ಲಿ ಜನಿಸಿರುವಂತಹ ಹುಡುಗರು ಈ ಕನಸಿನ ಚಿಕ್ಕ ವಯಸ್ಸಿನಿಂದಲೂ ಕೂಡ ಕಾಣುತ್ತಾರೆ. ಆದರೆ ಕೆಲವೊಂದು ಬಡ ಕುಟುಂಬ ಇವತ್ತಿಗೂ ಕೂಡ ಸ್ವಂತ ಮನೆಯನ್ನು ಕಟ್ಟುವುದಕ್ಕೆ ಅಥವಾ ಖರೀದಿಸುವುದಕ್ಕೆ ಬೇಕಾಗಿರುವಂತಹ ಆರ್ಥಿಕ ಸ್ವಾತಂತ್ರ್ಯವನ್ನು ಹೊಂದಿರುವುದಿಲ್ಲ.

ಇನ್ನು ಲೋನ್ (Loan) ಪಡೆದುಕೊಂಡು ಮನೆಯನ್ನು ಕಟ್ಟಿದ್ರು ಕೂಡ ಅದನ್ನ ತೀರಿಸುವುದು ಅಷ್ಟೊಂದು ಸುಲಭದ ಮಾತಲ್ಲ ಅನ್ನೋದನ್ನ ಕೂಡ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾಗಿದೆ. ಯಾಕೆಂದ್ರೆ ಲೋನ್ ಮೇಲೆ ಹೆಚ್ಚಾಗುವಂತಹ ಬಡ್ಡಿದರ ಹಾಗೂ ಲೋನ್ ಒಂದು ದೀರ್ಘಕಾಲಿಕ ಸಾಲದ ವಿಧಾನ ವಾಗಿದ್ದು ಅದನ್ನು ಕಟ್ಟೋದಕ್ಕೆ ಕನಿಷ್ಠ ಪಕ್ಷ 15ರಿಂದ 20 ವರ್ಷ ಬೇಕಾಗುತ್ತದೆ ಅನ್ನೋದನ್ನು ಕೂಡ ಇಲ್ಲಿ ನೀವು ತಿಳಿದುಕೊಳ್ಳಬೇಕಾಗುತ್ತದೆ.

ಇನ್ನು ಸ್ವಂತ ಮನೆ ಇಲ್ಲದೆ ಇರುವಂತಹ ಬಡವರಿಗಾಗಿಯೇ ಪ್ರಧಾನಮಂತ್ರಿಯ ಆವಾಸ್ ಯೋಜನೆ (PM Awas Yojana) ಯನ್ನು ಜಾರಿಗೆ ತಂದಿರೋದು. ಈ ಯೋಜನೆಯ ಮೂಲಕ ಬಡವರು ಕೂಡ ತಮ್ಮ ಸ್ವಂತ ಮನೆಯನ್ನು ಕಡಿಮೆ ಖರ್ಚಿನಲ್ಲಿ ಕಟ್ಟಬಹುದಾಗಿದೆ. ತಮ್ಮ ಸ್ವಂತ ಮನೆಯನ್ನು ಹೊಂದಬೇಕು ಎನ್ನುವಂತಹ ಬಡವರ ಕನಸಿಗೆ ಸರ್ಕಾರ ನನಸು ಮಾಡುವಂತಹ ಸಹಾಯವನ್ನು ಕೂಡ ಮಾಡುತ್ತದೆ.

 

Image Credit: MagicBricks

 

advertisement

ಅದರಲ್ಲಿ ವಿಶೇಷವಾಗಿ ಕಳೆದ 15 ವರ್ಷಗಳಿಂದಲೂ ಕೂಡ ನೀವು ಬಾಡಿಗೆ ಮನೆಯಲ್ಲಿದ್ದು ಸ್ವಂತ ಮನೆಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದರೆ ಇನ್ನು ಮುಂದೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ನಿಮ್ಮ ಸ್ವಂತ ಮನೆಯನ್ನು ಹೊಂದುವಂತಹ ಕನಸು ಅತಿ ಶೀಘ್ರದಲ್ಲಿ ನೆರವೇರಲಿದೆ.

ಕುಟುಂಬದ ಆದಾಯ 3 ರಿಂದ 18 ಲಕ್ಷ ಇರುವಂತಹ ಕುಟುಂಬದವರು ದೇಶದಲ್ಲಿ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿಲ್ಲದೆ ಹೋದಲ್ಲಿ ಹಾಗೂ ಈ ಯೋಜನೆಗೆ ನಿಮ್ಮ ಕುಟುಂಬದಲ್ಲಿ ಬೇರೆ ಯಾರು ಕೂಡ ಅರ್ಜಿ ಹಾಕಿಲ್ಲದೆ ಹೋದಲ್ಲಿ ಆ ಸಂದರ್ಭದಲ್ಲಿ ನೀವು ಈ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

 

Image Credit: Newstrack

 

ಈ ಯೋಜನೆ (PM Awas Yojana) ಯಲ್ಲಿ ನೀವು ಪಡೆದುಕೊಳ್ಳುವಂತಹ ಸಾಲದ ಮೇಲೆ ಸರ್ಕಾರದಿಂದ ಸಬ್ಸಿಡಿ ಕೂಡ ದೊರಕುತ್ತದೆ ಹಾಗೂ ಸರ್ಕಾರದಿಂದ 1.5 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ದೊರಕುತ್ತದೆ ಅದನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಸುವಂತಹ ಕೆಲಸವನ್ನು ಮಾಡುವುದಕ್ಕೆ ಕೂಡ ಸರ್ಕಾರ ಹೊರಟಿದೆ ಎನ್ನುವುದಾಗಿ ತಿಳಿದು ಬಂದಿದ್ದು ಇದು ಒಂದು ವೇಳೆ ಹೆಚ್ಚಾದರೆ ಇನ್ನೂ ನಿಮಗೆ ಸಹಾಯಕವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಖಂಡಿತವಾಗಿ ನಿಮ್ಮ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವಂತಹ ಆಸೆ ಈಡೇರಲಿದೆ.

advertisement

Leave A Reply

Your email address will not be published.