Karnataka Times
Trending Stories, Viral News, Gossips & Everything in Kannada

Agniveer: ಸೈನ್ಯ ಸೇರಲು ಬಯಸುವ ಅಗ್ನಿವೀರರಿಗೆ ಸಿಹಿಸುದ್ದಿ.

ಸದ್ಯ ಕೇಂದ್ರ ಸರ್ಕಾರದ (Central Govt) ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಗೆಂದು ಪೂರಕವಾಗಿ ಗೃಹ ಸಚಿವಾಲಯವು(Ministry of Home Affairs)ಇದೀಗ ಗಡಿ ಭದ್ರತಾ ಪಡೆಯಲ್ಲಿ (Border Security Force)
ಖಾಲಿ ಇರುವ ಹುದ್ದೆಗಳಲ್ಲಿ ಮಾಜಿ ಅಗ್ನಿವೀರ್‌ಗಳಿಗೆಂದು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯೊಂದಿಗೆ ಶೇಕಡಾ 10 ರಷ್ಟು ಹುದ್ದೆಗಳನ್ನು ಮೀಸಲಾತಿ (Reservation)ನೀಡುವುದಾಗಿ ಇದೀಗ ಪ್ರಕಟಿಸಿದೆ.
ಹೌದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಜನರಲ್ ಡ್ಯೂಟಿ ಕೇಡರ್ (Force General Duty Cadre)
(ನಾನ್ ಗೆಜೆಟೆಡ್) ನೇಮಕಾತಿ ನಿಯಮಗಳು 2015 ಅನ್ನು ತಿದ್ದುಪಡಿ ಮಾಡಿದ ಬಳಿಕ ಅಧಿಸೂಚನೆಯ ಮೂಲಕವಾಗಿ ಇದೀಗ ಘೋಷಣೆ ಮಾಡಲಾಗಿದ್ದು ಇದು ಮಾರ್ಚ್ 9 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ.
ಇನ್ನು ಖಾಲಿ ಹುದ್ದೆಗಳಲ್ಲಿ ಶೇಕಡಾ ೧೦ ರಷ್ಟು ಮಾಜಿ ಅಗ್ನಿವೀರ್‌ಗಳಿಗೆ ಮೀಸಲಿಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದ್ದು ಮಾಜಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ನ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಸುಮಾರು ಐದು ವರ್ಷಗಳವರೆಗೆ ಸಡಿಲಗೊಳಿಸಿದರೆ ಇತರ ಬ್ಯಾಚ್‌ಗಳ (Batch) ಅಭ್ಯರ್ಥಿಗಳಿಗೆ ಮಿತಿಯು ಮೂರು ವರ್ಷಗಳವರೆಗೆ ಸಡಿಲಿಸಬಹುದಾಗಿದೆ ಎಂದು ಕೂಡ ಸಚಿವಾಲಯ ತಿಳಿಸಿದೆ. ಹೌದು ಮಾಜಿ ಅಗ್ನಿವೀರ್‌ಗಳಿಗೆ ದೈಹಿಕ ದಕ್ಷತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇನ್ನು ಕಳೆದ ವರ್ಷ ಜೂನ್ 14ರಂದು ಕೇಂದ್ರವು 17 ಹಾಹೂ 21 ವರ್ಷ ವಯಸ್ಸಿನ ಯುವಕರನ್ನು ಸೇನೆ ನೌಕಾಪಡೆ ಹಾಗೂ ವಾಯುಪಡೆಗಳಲ್ಲಿ ಹೆಚ್ಚಾಗಿ ನಾಲ್ಕು ವರ್ಷಗಳ ಅಲ್ಪಾವಧಿಯ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಲು ಅಗ್ನಿಪಥ್ ಯೋಜನೆಯನ್ನು ಜಾರಿ ಮಾಡಿತು. ಹೌದು ಅಗ್ನಿಪಥ್ ಯೋಜನೆಯಡಿ ನೇಮಕಗೊಂಡವರನ್ನು ಅಗ್ನಿವೀರರು ಎಂದು ಕರೆಯಲಾಗುತ್ತದೆ. ಇನ್ನು ನಾಲ್ಕು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡ ನಂತರ ಪ್ರತಿ ಬ್ಯಾಚ್‌ನಿಂದ 25 ಪ್ರತಿಶತದಷ್ಟು ನೇಮಕಗೊಂಡವರಿಗೆ ನಿಯಮಿತ ಸೇವೆಯನ್ನು ನೀಡಲಾಗುತ್ತದೆ.

Join WhatsApp
Google News
Join Telegram
Join Instagram

ಆ ಸಂಧರ್ಭದಲ್ಲಿ ಗೃಹ ಸಚಿವಾಲಯವು ಕೇಂದ್ರ ಅರೆಸೇನಾ ಪಡೆಗಳು ಹಾಗೂ ಅಸ್ಸಾಂ ರೈಫಲ್ಸ್‌ನಲ್ಲಿ (Assam rifles) ಶೇಕಡಾ 10 ರಷ್ಟು ಖಾಲಿ ಹುದ್ದೆಗಳನ್ನು ಸಜ್ಜುಗೊಳಿಸಿದ ಶೇಕಡಾ 75 ರಷ್ಟು ಅಗ್ನಿವೀರ್‌ಗಳಿಗೆ ಮೀಸಲಿಡಲಾಗುವುದು ಎಂದು ಘೋಷಿಸಿತ್ತು. ಇನ್ನು ಮಾಜಿ ಅಗ್ನಿವೀರ್‌ಗಳ ಮೊದಲ ಬ್ಯಾಚ್‌ಗೆ ಗರಿಷ್ಠ ವಯಸ್ಸಿನ ಮಿತಿಯನ್ನು ಐದು ವರ್ಷಗಳವರೆಗೆ ಹಾಹೂ ನಂತರದ ಬ್ಯಾಚ್‌ಗಳಿಗೆ ಮೂರು ವರ್ಷಗಳವರೆಗೆ ಸಡಿಲಿಸಲಾಗಿದೆ ಎಂದು ಅದು ಘೋಷಿಸಿತು. ಹೆಚ್ಚುವರಿಯಾಗಿ ಮಾಜಿ ಅಗ್ನಿವೀರ್‌ಗಳಿಗೆ ದೈಹಿಕ ಪ್ರಾವೀಣ್ಯತೆ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ಇದೀಗ ಸಚಿವಾಲಯ ತಿಳಿಸಿದೆ.

Leave A Reply

Your email address will not be published.