Karnataka Times
Trending Stories, Viral News, Gossips & Everything in Kannada

8th Pay Commission: 8ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರ ವೇತನ ಇನ್ನಷ್ಟು ಹೆಚ್ಚಲಿದೆ!

ಏಳನೇ ವೇತನ ಆಯೋಗದ ಅಡಿಯಲ್ಲಿ ಡಿಎ ಎಚ್ಆರ್ ಎ (ತುಟ್ಟಿ ಭತ್ಯೆ)ಹೆಚ್ಚಳವನ್ನು ಎದುರು ನೋಡುತ್ತಿರುವ ಸರ್ಕಾರಿ ನೌಕರರಿಗೆ(Government Employees) ಹೊಸ ಗಿಫ್ಟ್ ನೀಡಲು ಮೋದಿ ಸರ್ಕಾರ ತಯಾರಿ ನಡೆಸಿದೆ.ಆರ್ಥಿಕ ವರ್ಷದ ಕೊನೆಯ ಒಳಗೆ ಅಂದರೆ 2023 ಮಾರ್ಚ್(March) ತಿಂಗಳಿನ ಒಳಗೆ ತುಟ್ಟಿ ಭತ್ಯೆ ಪಾವತಿಸಲು ಸರ್ಕಾರ ಆದೇಶ ಹೊರಡಿಸಬಹುದು ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ(Narendra Modi) ಸರ್ಕಾರ ಈಗಿರುವ ಏಳನೇ ವೇತನ ಆಯೋಗದ ಬದಲಿಗೆ ಎಂಟನೇ ವೇತನ ಆಯೋಗವನ್ನು ಜಾರಿಗೆ ತರಲು ನಿರ್ಧರಿಸಿದೆ ಎನ್ನುವ ಮಾಹಿತಿ ಇದೆ.

ಚುನಾವಣೆಗೂ ಮೊದಲೇ ಕೇಂದ್ರ ಸರ್ಕಾರದಿಂದ ಎಂಟನೇ ವೇತನ ಆಯೋಗ ಜಾರಿಗೆ ಬರಬಹುದು ಎಂದು ವರದಿ ಆಗಿದೆ ಎಂಟನೇ ವೇತನ ಆಯೋಗದ ಕುರಿತು ಈಗಾಗಲೇ ಮಾತುಕತೆ ಪ್ರಗತಿಯಲ್ಲಿದ್ದು ಸರ್ಕಾರಿ ಇಲಾಖೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. 2024ರ ವೇಳೆಗೆ 8ನೇ ವೇತನ ಆಯೋಗ ಜಾರಿಗೆ ಬರಬಹುದು. ಇದು ಜಾರಿಯಾದ ನಂತರ ಕೇಂದ್ರ ನೌಕರರಿಗೆ ದೊಡ್ಡ ರಿಲೀಫ್(Relief) ಸಿಗಲಿದೆ ಎನ್ನುವ ನಿರೀಕ್ಷೆ ಇದೆ.

Join WhatsApp
Google News
Join Telegram
Join Instagram

ಎಂಟನೇ ವೇತನ ಆಯೋಗ ಜಾರಿಯಾದರೆ ಸರ್ಕಾರಿ ನೌಕರರಿಗೆ ಬಂಪರ್ ಲಾಟರಿ ಹೊಡೆಯುತ್ತೆ ಎಂದು ಮಾತನಾಡಿಕೊಳ್ಳಲಾಗುತ್ತಿದೆ. ಈ ಮೊದಲಿನ ವೇತನ ಆಯೋಗಕ್ಕಿಂತ ಎಂಟನೇ ವೇತನ ಆಯೋಗ ಬಹಳ ವಿಭಿನ್ನವಾಗಿರಬಹುದು. ಉದಾಹರಣೆಗೆ ಫಿಟ್ಮೆಂಟ್ ಅಂಶದ ಬದಲಿಗೆ ವೇತನವನ್ನು ಬೇರೆ ಯಾವುದೋ ರೀತಿಯಲ್ಲಿ ಪರಿಶೀಲಿಸಿ ಜಾರಿಗೊಳಿಸಲಾಗುತ್ತದೆ. ಹತ್ತು ವರ್ಷಗಳ ಮಧ್ಯದ ಅಂತರದಲ್ಲಿ ನಡೆಯುತ್ತಿದ್ದ ಪರಿಶೀಲನೆ ವಾರ್ಷಿಕವಾಗಿ ಜಾರಿಗೊಳಿಸಬೇಕು ಎನ್ನುವ ನಿಯಮ ಜಾರಿಗೆ ಬರಬಹುದು.

ಹೊಸ ವೇತನ ಆಯೋಗ ಎರಡು ವರ್ಷಗಳ ನಂತರ ಅಂದರೆ 2026ರಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಈಗಾಗಲೇ 8ನೇ ವೇತನ ಆಯೋಗ ರಚಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಕೇಂದ್ರದಿಂದ ಅಧಿಕೃತ ಪ್ರಕಟಣೆ ಇನ್ನೂ ಬಂದಿಲ್ಲ ಆದರೆ ಈ ಬಗ್ಗೆ ವರದಿ ಆಗಿದ್ದು, ಮುಂದಿನ ವರ್ಷದಿಂದ ಕೇಂದ್ರ ಸರ್ಕಾರಿ ನೌಕರರ ವೇತನ ಶೇಕಡ 44% ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಹಳೆಯ ಆಯೋಗಗಳಿಗೆ ಹೋಲಿಸಿದರೆ ಹೊಸ ವೇತನ ಆಯೋಗದಲ್ಲಿ ಸಾಕಷ್ಟು ವಿಚಾರಗಳಲ್ಲಿ ಬದಲಾವಣೆ ನಿರೀಕ್ಷಿಸಬಹುದು.

 

Leave A Reply

Your email address will not be published.