PAN Card: ನಿಮ್ಮ ಪತ್ನಿಯ ಬಳಿಯು ಪ್ಯಾನ್ ಕಾರ್ಡ್ ಇದಿಯಾ ಹಾಗಾದ್ರೆ ಸರ್ಕಾರದಿಂದ ಪಡೆಯಿರಿ 10,000 ರೂ, ಇಲ್ಲಿದೆ ಸತ್ಯಾಸತ್ಯತೆ.
ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಎಷ್ಟು ಪ್ರಮುಖ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತು. ಇಂದು ಯಾವುದೇ ವ್ಯವಹಾರ ಮಾಡುವುದಾದರೆ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ನಂತಹ ದಾಖಲೆಗಳನ್ನು ನೀಡಲೇಬೇಕು. ಪ್ಯಾನ್ ಕಾರ್ಡ್ ಇದ್ದಡೇ ಯಾವುದೇ ಹಣಕಾಸಿನ ವ್ಯವಹಾರ ಕೂಡ ಮಾಡಲು ಸಾಧ್ಯವಿಲ್ಲ. ಭಾರತೀಯ ನಾಗರಿಕರಿಗೆ ಆದಾಯ ತೆರಿಗೆ ಇಲಾಖೆ ನೀಡುವ ಮಹತ್ವದ ದಾಖಲೆ ಇದಾಗಿದೆ. ಇನ್ನು ಮಹಿಳೆಯರ ಬಳಿ ಪ್ಯಾನ್ ಕಾರ್ಡ್ ಇದ್ರೆ ಕೇಂದ್ರ ಸರ್ಕಾರ ಅತ್ಯುತ್ತಮ ಆರ್ಥಿಕ ನೆರವು ನೀಡಲು ಹೊಸ ಯೋಜನೆ ರೂಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ಯಾನ್ ಕಾರ್ಡ್ ಇರುವ ಮಹಿಳೆಯರಿಗೆ 10 ಸಾವಿರ ನಗದು!
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಎಂದು ಹೆಚ್ಚು ವೈರಲ್ ಆಗುತ್ತಿದೆ. ಕೇಂದ್ರ ಸರ್ಕಾರ ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲಾ ಮಹಿಳೆಯರಿಗೆ 10,000 ರೂ. ನಗದು ಮೊತ್ತವನ್ನು ನೀಡಲು ಯೋಜನೆಯ ರೂಪಿಸಿದೆ ಎಂದು ಹೇಳಲಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪಿಐಬಿ ಅದರ ಸತ್ಯಾಸತ್ಯತೆಯನ್ನು ಕಂಡುಹಿಡಿದಿದೆ.
ಪಿಐಬಿ ಟ್ವೀಟ್ ನಲ್ಲಿ ಏನಿದೆ?
ಬಿಐಬಿ ಅಧಿಕೃತ ಪ್ರಕಾರ, ‘ಯೋಜನಾ 4ಯು’ ಎನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಪ್ಯಾನ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರ 10,000 ರೂ. ನಗುದು ಮೊತ್ತವನ್ನು ನೀಡುತ್ತದೆ ಎಂದು ಹೇಳಲಾಗಿದೆ. ಆದರೆ ಸತ್ಯಾಸತ್ಯಗಳನ್ನು ಪರಿಶೀಲಿಸಿದ ನಂತರ ಈ ಸುದ್ದಿ ಕೇವಲ ಗಾಸಿಪ್ ಎಂದು ತಿಳಿದು ಬಂದಿದೆ. ಕೇಂದ್ರ ಸರ್ಕಾರ ಅಂತಹ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ. ಇಂಥ ವೈರಲ್ ಸುದ್ದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಸರ್ಕಾರಿ ಅಧಿಕೃತ ವೆಬ್ಸೈಟ್ನಲ್ಲಿ ಇರುವ ಮಾಹಿತಿಯನ್ನು ಮಾತ್ರ ನಂಬಿ ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.
ವೈರಲ್ ನ್ಯೂಸ್ ಪರಿಶೀಲಿಸುವುದು ಹೇಗೆ?
ಸಾಮಾಜಿಕ ಜಾಲತಾಣದಲ್ಲಿ ಇಂತಹ ಸಾಕಷ್ಟು ತಪ್ಪು ಸಂದೇಶ ರವಾನೆಯಾಗುತ್ತದೆ. ಒಬ್ಬರಿಂದ ಒಬ್ಬರಿಗೆ ಈ ನಕಲಿ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಆ ಸುದ್ದಿ ಸತ್ಯವೋ ಸುಳ್ಳು ಎಂಬುದನ್ನು ನೀವು ಈ https://factcheck.pib.gov.in/ ಅಧಿಕೃತ ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ಅಥವಾ ಇಂತಹ ವಿಡಿಯೋವನ್ನು ಪರಿಶೀಲನೆ ಮಾಡಲು ಈ +918799711259 ನಂಬರಿಗೆ ಅಥವಾ ಈಮೇಲ್ ಐಡಿ [email protected] ಗೆ ಕಳುಹಿಸಬಹುದು. ಈ ರೀತಿಯಾಗಿ ಹರಿದಾಡುತ್ತಿರುವ ಸುದ್ದಿ ಸತ್ಯವೂ ಸುಳ್ಳು ಎಂಬುದನ್ನು ತಿಳಿದುಕೊಳ್ಳಿ ಎಂದು ಸರ್ಕಾರ ತಿಳಿಸಿದೆ.