Karnataka Times
Trending Stories, Viral News, Gossips & Everything in Kannada

ಮನೆ ಕಟ್ಟಲು ಹಣ ಇರದೇ ಅರ್ಧಕ್ಕೆ ನಿಲ್ಲಿಸಿದವರಿಗೆ ಗುಡ್ ನ್ಯೂಸ್

advertisement

ಇದೀಗ ಮನೆ ಕಟ್ಟಲು ಹಣ ಇರದೇ ಅರ್ಧಕ್ಕೆ ನಿಲ್ಲಿಸಿದವರಿಗೆ ಗುಡ್ ನ್ಯೂಸ್ ಮಾಹಿತಿಯೊಂದು ಬಂದಿದೆ.‌ಹೌದು ಇಂದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮನೆ ನಿರ್ಮಾಣ ಮಾಡಬೇಕು, ತನ್ನ ಕನಸಿನಂತೆ ಮನೆ ನಿರ್ಮಾಣ ಆಗಬೇಕು ಎನ್ನುವ ಆಸೆ ಆಕಾಂಕ್ಷೆಗಳು ಬಹಳಷ್ಟು ಇರಲಿದೆ, ಆದರೆ ಅಷ್ಟು ಸುಲಭದಲ್ಲಿ ಬಡ ಮದ್ಯಮ ವರ್ಗದ ಜನತೆಗೆ ಮನೆ ನಿರ್ಮಾಣ ಮಾಡಲು ಆಗುವುದಿಲ್ಲ.‌

ಯಾಕೆಂದರೆ ಇಂದು ಮನೆ ನಿರ್ಮಾಣ ಮಾಡಲು ಹೆಚ್ಚಿನ ಹಣ ಕಾಸಿನ ಅಗತ್ಯ ಇರಲಿದೆ.‌ ಇದಕ್ಕಾಗಿ ಬಡವರ ಕನಸನ್ನು ನಿರ್ಮಾಣ ಮಾಡಲು ಕೇಂದ್ರ ಸರಕಾರವು ಹೊಸ ಯೋಜನರಯನ್ನು ರೂಪಿಸಿದೆ.‌ಈ ಯೋಜನೆಯಡಿ ಆರ್ಥಿಕ ಸಹಾಯಧನ ಸಿಗಲಿದ್ದು ಯಾರು ಈ ಯೋಜನೆಯ ಸೌಲಭ್ಯ ಪಡೆಯಬಹುದು? ಎಲ್ಲಿ ಅರ್ಜಿ ಹಾಕಬೇಕು ಎನ್ನುವ ಮಾಹಿತಿ ಬೇಕಿದ್ದಲ್ಲಿ ಈ ಲೇಖನ ಪೂರ್ತಿಯಾಗಿ ಓದಿರಿ.

ಬಡವರ್ಗದ ಜನತೆಗೆ ಮನೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ನರೇಂದ್ರ ಮೋದಿ ಅವರು ಪಿಎಮ್ ಆವಾಸ್ ಯೋಜನೆ (PM Awas Yojana) ಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆಯಡಿ ಸಬ್ಸಿಡಿ ಮೂಲಕ ಸಾಲ‌ ಸೌಲಭ್ಯ ಪಡೆದು ನಿಮ್ಮ ಕನಸಿನ ಮನೆಯನ್ನು ನಿರ್ಮಾಣ ಮಾಡಬಹುದಾಗಿದೆ. ಈ ಭಾರಿ ಪಿಎಮ್ ನರೇಂದ್ರ ಮೋದಿ (PM Narendra Modi) ಅವರು ಗೆ 3ನೇ ಬಾರಿ ಪಿಎಮ್ ಆಗಿ ಆಯ್ಕೆಯಾಗಿದ್ದು ಈ ಸಂದರ್ಭದಲ್ಲಿ ಮೋದಿ ಅವರು ಪಿಎಮ್ ಆವಾಸ್ ಯೋಜನೆಯ ಕುರಿತು ಮಾತನಾಡಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಸುಮಾರು 3 ಕೋಟಿ ಮನೆಗಳ ನಿರ್ಮಾಣಕ್ಕೆ ಅನುಮತಿ ಕೂಡ ನೀಡಿದ್ದಾರೆ.

 

Image Source: Zee Business

 

ಈ ಯೋಜನೆ (PM Awas Yojana) ಯಡಿಯಲ್ಲಿ‌ ಮನೆ ನಿರ್ಮಾಣ ಮಾಡುವ ಎಲ್ಲಾ ಫಲಾನುಭವಿಗಳಿಗೆ ಕೇವಲ ವಾರ್ಷಿಕ ಶೇ. 6.50 ಬಡ್ಡಿದರದಲ್ಲಿ 20 ವರ್ಷಗಳವರೆಗೆ ವಸತಿ ಸಾಲ ನೀಡ ಲಾಗುತ್ತದೆ. ಈ ಯೋಜನೆಯ ಸಬ್ಸಿಡಿಯು ವಾರ್ಷಿಕ ಆದಾಯದ ಆದಾರದಲ್ಲಿ ನೀಡಲಾಗುತ್ತದೆ. ಮಧ್ಯಮ ಆದಾಯ ಗುಂಪು 1 ಕ್ಕೆ 6 ಲಕ್ಷದಿಂದ 12 ಲಕ್ಷ ರೂ, ಮಧ್ಯಮ ಆದಾಯ ಗುಂಪು 2 ಇದಕ್ಕೆ 12 ಲಕ್ಷದಿಂದ 18 ಲಕ್ಷ ರೂ,ಕಡಿಮೆ ಆದಾಯದ ಗುಂಪು ‌3 ಗೆ ಲಕ್ಷದಿಂದ 6 ಲಕ್ಷ ರೂ, ಆರ್ಥಿಕವಾಗಿ ಹಿಂದು ಳಿದ ವರ್ಗ 3 ಲಕ್ಷದವರೆಗೆ ಸಾಲ ಸೌಲಭ್ಯ ಮತ್ತು ಸಬ್ಸಿಡಿ ನೀಡಲಿದೆ.

advertisement

ಅರ್ಹತೆ ಏನು?

 

Image Source: MagicBricks

 

ಅರ್ಜಿ ಸಲ್ಲಿಸುವ ವ್ಯಕ್ತಿ ನಮ್ಮ ಕರ್ನಾಟಕದವರೇ ಆಗಿರಬೇಕು ಹಾಗೆಯೇ ಅವರ ವಯಸ್ಸು 18 ವರ್ಷ ಆಗಿರಬೇಕು.ಅರ್ಜಿ ಹಾಕುವವರ ಬಳಿ ಇನ್ನೆಲ್ಲಿಯೂ ಸ್ವಂತ ಮನೆ ಇರಬಾರದು.ತಮ್ಮದೇ ಸ್ವಂತ ಭೂಮಿ ಇದ್ದರೆ, ಅಲ್ಲಿ ಮನೆ ಕಟ್ಟಿಸಬಹುದು.

ಈ‌ ದಾಖಲೆ ಬೇಕು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಫೋಟೋ
  • ಜಾಬ್ ಕಾರ್ಡ್ ಸಂಖ್ಯೆ
  • ಬ್ಯಾಂಕ್ ಪಾಸ್‌ಬುಕ್
  • ಮೊಬೈಲ್ ನಂಬರ್

ಪ್ರಧಾನಮಂತ್ರಿ ಆವಾಸ್ ಯೋಜನೆ (PM Awas Yojana) ಸೌಲಭ್ಯ ಪಡೆಯಲು‌ pmaymis.gov.in ಗೆ ಹೋಗಿ ಅರ್ಜಿ ಸಲ್ಲಿಸಿ.

advertisement

Leave A Reply

Your email address will not be published.