Karnataka Times
Trending Stories, Viral News, Gossips & Everything in Kannada

BPL Ration Card: ಇಷ್ಟು ಕೃಷಿಭೂಮಿ ಇದ್ದರೆ ಅಂತಹವರಿಗೆ BPL ರೇಷನ್ ಕಾರ್ಡ್ ಸಿಗಲ್ಲ! ಹೊಸ ರೂಲ್ಸ್

advertisement

ಭಾರತ ಸರ್ಕಾರ ತನ್ನ ಪ್ರಜೆಗಳಿಗಾಗಿ ಅವರ ಜೀವನಶೈಲಿಯನ್ನು ಸುಧಾರಿಸುವುದಕ್ಕಾಗಿ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಇನ್ನು ಸರ್ಕಾರದ ಯೋಜನೆಗಳನ್ನ ನೇರವಾಗಿ ಜನರಿಗೆ ತಲುಪಿಸುವುದಕ್ಕಾಗಿ ಕೂಡ ಸರ್ಕಾರ ಸಾಕಷ್ಟು ಮೂಲಗಳನ್ನು ಕಂಡು ಹುಡುಕಿದೆ. ಇದೇ ಕಾರಣದಿಂದಾಗಿ ಮೇಲ್ವರ್ಗದ ಹಾಗೂ ಬಡತನದ ರೇಖೆಗಿಂತ ಕೆಳವರ್ಗದ ಜನರನ್ನ ಬೇರೆ ಬೇರೆ ರೀತಿಯಲ್ಲಿ ವಿಂಗಡಿಸುವ ಕೆಲಸವನ್ನು ಕೂಡ ಮಾಡಿದೆ.

ಇದೇ ಕಾರಣಕ್ಕಾಗಿ ಸರ್ಕಾರ ಎಪಿಎಲ್ ಬಿಪಿಎಲ್ ಕಾರ್ಡ್ಗಳ (APL-BPL Ration Card) ಸೃಷ್ಟಿಯನ್ನು ಮಾಡಿರೋದು. ಈ ರೇಷನ್ ಕಾರ್ಡುಗಳ ಮೂಲಕವೇ ಬಡವರ್ಗದ ಜನರಿಗೆ ಸೇರಬೇಕಾಗಿರುವಂತಹ ಪ್ರತಿಯೊಂದು ಯೋಜನೆ ಹಾಗೂ ಸೌಲಭ್ಯಗಳನ್ನು ಸರ್ಕಾರ ಒದಗಿಸುವಂತಹ ಕೆಲಸವನ್ನು ಮಾಡುತ್ತದೆ.

ಹೀಗೆ ಅಂದ ಮಾತ್ರಕ್ಕೆ ಪ್ರತಿಯೊಬ್ಬರಿಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಸಿಗುತ್ತೆ ಅಂತ ಅಂದುಕೊಳ್ಳಬೇಡಿ. ಯಾಕೆಂದ್ರೆ ಈಗ ಸರ್ಕಾರದ ಕಣ್ಣಿಗೆ ಮಣ್ಣನ್ನು ಎರಚಿ ಸಾಕಷ್ಟು ಆರ್ಥಿಕವಾಗಿ ಸ್ಥಿತಿವಂತರಾಗಿರುವಂತಹ ಜನರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನಕಲಿ ದಾಖಲೆಗಳನ್ನು ನೀಡುವ ಮೂಲಕ ಹೊಂದಿರುವುದನ್ನು ನೀವು ಕಾಣಬಹುದಾಗಿದೆ. ಈ ಮೂಲಕ ಅರ್ಹ ಆಗಿರುವಂತಹ ಜನರಿಗೆ ಸೇರಬೇಕಾಗಿರುವಂತಹ ಸೇವೆ ಸೌಲಭ್ಯಗಳು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಮೂಲಕ ಕೆಲವು ಅನರ್ಹ ಅಯೋಗ್ಯರಿಗು ಕೂಡ ಸೇರ್ತಾಯಿದೆ ಅನ್ನೋದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ.

 

Image Source: informalnewz

 

advertisement

ಮಾಹಿತಿ ಪ್ರಕಾರ ಈ ರೀತಿಯ ನಕಲಿ ದಾಖಲೆಗಳನ್ನು ನೀಡುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಪಡೆದುಕೊಂಡಿರುವಂತಹ ಆರ್ಥಿಕವಾಗಿ ಚೆನ್ನಾಗಿರುವಂತಹ ಕುಟುಂಬದ ರೇಷನ್ ಕಾರ್ಡ್ ಗಳನ್ನು ರದ್ದುಗೊಳಿಸುವ ಕೆಲಸವನ್ನು ಆಹಾರ ಇಲಾಖೆ ಮಾಡ್ತಾಯಿದೆ. ಇನ್ನೂ ಸಾಕಷ್ಟು ಪ್ರಕರಣಗಳಲ್ಲಿ ಈ ರೀತಿ ತಪ್ಪು ಮಾಡಿರುವುದಕ್ಕಾಗಿ ಕಾನೂನು ಪ್ರಕರಣಗಳನ್ನು ಜರುಗಿಸುವ ಸಾಧ್ಯತೆ ಕೂಡ ಇದೆ ಅದಕ್ಕಾಗಿ ಅದಕ್ಕಿಂತ ಮುಂಚೆನೇ ನಿಮ್ಮ ಕಾರ್ಡುಗಳನ್ನು ಸರೆಂಡರ್ ಮಾಡಿಬಿಡಿ ಎನ್ನುವುದಾಗಿ ಕೂಡ ಹೇಳಲಾಗುತ್ತಿದೆ. ಇನ್ನು ನೀವು ಕೃಷಿಕರಾಗಿದ್ದರೂ ಕೂಡ ಇಂತಿಷ್ಟು ಜಮೀನಿಗಿಂತ ಹೆಚ್ಚಿಗೆ ಜಮೀನು ನಿಮ್ಮ ಬಳಿ ಇದ್ದರೆ ನಿಮಗೂ ಕೂಡ ಬಿಪಿಎಲ್ ರೇಷನ್ ಕಾರ್ಡ್  (BPL Ration Card) ಸಿಗೋದಿಲ್ಲ ಅನ್ನೋದನ್ನ ತಿಳಿದುಕೊಳ್ಳಿ.

ಇದಕ್ಕಿಂತ ಹೆಚ್ಚಿನ ಜಮೀನು ಇರಬಾರದು:

 

Image Source: FACTLY

 

ಹೌದು ಆಹಾರ ಇಲಾಖೆಯ ನಿಯಮಗಳ ಪ್ರಕಾರ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಪಡೆದುಕೊಳ್ಳುವಂತಹ ಕುಟುಂಬದವರು ಮೂರು ಹೆಕ್ಟೇರ್ಗಿಂತ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದರೆ ಅಥವಾ ಭೂಮಿಯನ್ನು ಹೊಂದಿದ್ದರೆ ಯಾವುದೇ ಕಾರಣಕ್ಕೂ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲು ಸಾಧ್ಯವಿಲ್ಲ ಎಂಬುದಾಗಿ ನಿಯಮಾವಳಿಗಳಲ್ಲಿ ಬರೆಯಲಾಗಿದೆ.

ಹೀಗಾಗಿ ನೀವು ಕೃಷಿಕರೇ ಆಗಿದ್ದರೂ ಕೂಡ ನೀವು ಈ ನಿಯಮಗಳ ಅಡಿಯಲ್ಲಿ ಈ ಭೂಮಿಗಿಂತ ಹೆಚ್ಚಿನ ಭೂಮಿಯನ್ನು ಹೊಂದಿದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ನೀಡಲಾಗುವುದಿಲ್ಲ ಹಾಗೂ ಈಗಾಗಲೇ ನಿಮ್ಮ ಬಳಿ ಇದ್ದರೆ ಕೂಡಲೆ ಸರಂಡರ್ ಮಾಡಿಬಿಡಿ. ಇಲ್ಲವಾದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಲಾಗುತ್ತದೆ ಹಾಗೂ ಇದರಿಂದ ನಿಮಗೆ ಅಧಿಕಾರಿಗಳಿಂದ ವಾರ್ನಿಂಗ್ ಸಿಗುವಂತಹ ಸಾಧ್ಯತೆ ಕೂಡ ಇರುತ್ತದೆ.

advertisement

Leave A Reply

Your email address will not be published.