Karnataka Times
Trending Stories, Viral News, Gossips & Everything in Kannada

Mobile Number: 10 ಅಂಕಿಯ ಮೊಬೈಲ್ ಸಂಖ್ಯೆಯ ಬಗ್ಗೆ ಸರ್ಕಾರದ ಹೊಸ ನಿಯಮ.

Advertisement

ಇದು ಮೊಬೈಲ್ ಬಳಸದೆ ಇರುವವರು ಯಾರು ಇಲ್ಲ. ಮೊಬೈಲ್ ಇದ್ದಮೇಲೆ ಅದಕ್ಕೊಂದು ಸಿಮ್ ಕಾರ್ಡ್ ಇರಲೇಬೇಕು ಪ್ರತಿಯೊಂದು ಸಿಮ್ ಕಾರ್ಡ್ ಕೂಡ ತನ್ನದೇ ಆದ ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತದೆ. ಭಾರತದಲ್ಲಿ ಮೊಬೈಲ್ ನಂಬರ್ ಅಂದರೆ 10 ಅಂಕೆಗಳನ್ನು ಹೊಂದಿರುತ್ತವೆ. ಆದರೆ ಈಗ ಈ 10 ಅಂಕೆಗಳ ಬಳಕೆಯನ್ನು ನಿಲ್ಲಿಸಲಾಗುವುದು ಎನ್ನುವ ಮಾಹಿತಿ ಇದೆ ಸರ್ಕಾರ ಇದಕ್ಕಾಗಿ ಹೊಸ ಯೋಜನೆ ರೂಪಿಸಿದೆ ಆದರೆ ಇದರಿಂದ ಗ್ರಾಹಕರಿಗೆ ಪ್ರಯೋಜನ ಆಗುತ್ತಾ ಅಥವಾ ಸಮಸ್ಯೆ ಆಗುತ್ತಾ ನೋಡೋಣ.

Mobile Number:

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಈ ಒಂದು ಹೊಸ ನಿಯಮವನ್ನು ಜಾರಿಗೆ ತರಲಿದೆ. ಕೆಲವು ವರದಿಯ ಪ್ರಕಾರ ಟ್ರೈ ಜಾರಿಗೊಳಿಸಲಾಗುವ ಈ ನಿಯಮದಿಂದ ಸಮಸ್ಯೆ ಉಂಟಾಗಬಹುದು. ಟ್ರಾಯ್ ನ ಈ ಹೊಸ ನಿಯಮಗಳು ನೋಂದಾಯಿತವಲ್ಲದ ಟೆಲಿಕಾಂ ಮಾರ್ಕೆಟಿಂಗ್ ಕಂಪನಿಗೆ ಮಾತ್ರ ಅಪ್ಲೈ ಆಗಲಿದ್ದು ಏಳು ದಿನಗಳಲ್ಲಿ ಈ ಸಂಖ್ಯೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಲಾಗಿದೆ.

Advertisement

ಟೆಲಿಕಾಂ ಕಂಪನಿಗಳು:

ಟೆಲಿ ಮಾರ್ಕೆಟಿಂಗ್ ಕಂಪನಿಗಳಿಗೆ ಟೆಲಿಕಾಂ ಕಂಪನಿಗಳು ವಿಭಿನ್ನ ಮೊಬೈಲ್ ಸಂಖ್ಯೆಯನ್ನು ನೀಡಿರುತ್ತವೆ. ಸಾಮಾನ್ಯ ಸಂಖ್ಯೆ ಹಾಗೂ ಪ್ರಚಾರದ ನಡುವಿನ ಸಂಖ್ಯೆಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಇದು ಸಾಮಾನ್ಯ ಜನರಿಗೆ ಸಹಾಯಕವಾಗುತ್ತದೆ. ಯಾವುದು ಪ್ರಚಾರಕ್ಕಾಗಿ ಅಥವಾ ಪ್ರಮೋಶನಲ್ ಹಾಗೂ ಜಾಹೀರಾತಿಗಾಗಿ ಬಳಸುವ ಸಂಖ್ಯೆ ಹಾಗೂ ಯಾವುದು ಸಾಮಾನ್ಯ ಸಂಖ್ಯೆ ಎಂಬುದು ಜನರು ಸುಲಭವಾಗಿ ಈ ಸಂಖ್ಯೆಗಳಿಂದ ತಿಳಿದುಕೊಳ್ಳಬಹುದು.

ಅದಕ್ಕೂ ಈಗ ಕೆಲವು ಟೆಲಿ ಮಾರ್ಕೆಟಿಂಗ್ ಕಂಪನಿಗಳು ಪ್ರಚಾರಕ್ಕಾಗಿ ಸಾಮಾನ್ಯ ಸಂಖ್ಯೆಯನ್ನು ಬಳಸುವುದು ಟ್ರಾಯ್ ಗಮನಕ್ಕೆ ಬಂದಿದೆ. ಹಾಗಾಗಿ ಟ್ರಾಯ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದೆ. ಕಂಪನಿಗಳು ಸಾಮಾನ್ಯ ಜನರಿಗೆ ಸಾಮಾನ್ಯ ನಂಬರ್ ನಿಂದ ಕರೆ ಮಾಡಿ ಸಮಸ್ಯೆ ಉಂಟುಮಾಡುತ್ತಿದ್ದಾರೆ ಯಾವುದೇ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಸಾಮಾನ್ಯರಿಗೆ ಬಲವಂತವಾಗಿ ಕರೆ ಮಾಡುವುದು ಅಥವಾ ಸಂದೇಶವನ್ನು ಮಾಡುವುದು ಟ್ರಾಯ್ ನಿಯಮದ ವಿರುದ್ಧವಾಗಿದೆ. ಇದೀಗ ವಿಶೇಷವಾದ ಕ್ರಮ ಕೈಗೊಂಡಿದ್ದು ಟೆಲಿ ಮಾರ್ಕೇಟಿಂಗ್ ಕಂಪನಿಗಳು ಸಾಮಾನ್ಯ ಸಂಖ್ಯೆ ಬಳಸುತ್ತಿದ್ದರೆ ಅದನ್ನು ಕೂಡಲೇ ರದ್ದು ಪಡಿಸಲಾಗುವುದು.

Advertisement

Leave A Reply

Your email address will not be published.