Karnataka Times
Trending Stories, Viral News, Gossips & Everything in Kannada

KSRTC: ಬೆಳ್ಳಂಬೆಳಿಗ್ಗೆ ಕಹಿಸುದ್ದಿ ಹಂಚಿಕೊಂಡ KSRTC! ನಿಜಕ್ಕೂ ಬೇಸರದ ಸಂಗತಿ

advertisement

ಸಾರಿಗೆ ಇಲಾಖೆಯು ಜನರ ಹಿತದೃಷ್ಟಿಯಿಂದ ಆಗಾಗ ನೂತನ ನಿಯಮವನ್ನು ಜಾರು ಮಾಡುತ್ತಲೇ ಇರುತ್ತದೆ ಒಂದೊಂದು ನಿಯಮದ ಹಿಂದೆಯೂ ಸಮಾಜದ ಹಿತರಕ್ಷಣೆ ಮುಖ್ಯ ಉದ್ದೇಶ ಹೊಂದಿರುವುದನ್ನು ನಾವು ಕಾಣಬಹುದು. ಸರಕಾರದ ಪ್ರಮುಖ ವಾಹನಗಳ ಸಾಲಿನಲ್ಲಿ KSRTC ಜನ ಸೇವೆಗಾಗಿ ಸದಾ ಸನ್ನದ್ಧವಾಗಿದೆ. ಜನರಿಗಾಗಿ ಅವರ ಓಡಾಟಕ್ಕೆ ಬಸ್ ವ್ಯವಸ್ಥೆ ನೀಡಲಾಗುತ್ತಿದ್ದು ಬಳಿಕ‌ ಸೇವೆಯಲ್ಲಿಯೂ ಲಗ್ಗೆ ಇಟ್ಟಿದ್ದ ವಿಚಾರ ನಮಗೆಲ್ಲ ತಿಳಿದೆ ಇದೆ. ಜನರಿಗೆ ಒಳಿತಾಗಲಿ ಎಂದು ಪಾರ್ಸೆಲ್ ಹಾಗೂ ಕೊರಿಯರ್ ಸೇವೆಯನ್ನು ಕೂಡ KSRTC ಆರಂಭ ಮಾಡಿದ್ದು ಇದೀಗ ಇದೆ ವ್ಯವಸ್ಥೆ ಬೆಳ್ಳಂಬೆಳಗ್ಗೆ ಕಹಿ ಸುದ್ದಿ ನೀಡುತ್ತಿದೆ.

ಪಾರ್ಸೆಲ್ ಮತ್ತು ಕೊರಿಯರ್ ಕ್ಷೇತ್ರದಲ್ಲಿ ಕೂಡ KSRTC ಅಧಿಕ ಆದಾಯ ಪಡೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಈಗ ಆ ನಿರೀಕ್ಷೆ ಎಲ್ಲವೂ ಕೂಡ ಹುಸಿಯಾಗಿದೆ ಎಂದು ಹೇಳಬಹುದು. ಹಾಗಾದರೆ ಈ ಯೋಜನೆ ಯಾವುದು, ರಾಜ್ಯದ ಜನತೆಗೆ ಈ ಸೇವೆ ಬಳಕೆ ಆಗಲಿಲ್ಲವೇ, ಎಷ್ಟು ಆದಾಯ ಬಂದಿದೆ ಎಂಬ ಇತ್ಯಾದಿ ವಿಚಾರದ ಬಗ್ಗೆ ನಾವು ಇಂದು ನಿಮಗೆ ತಿಳಿಸಲಿದ್ದು ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

ಯಾವಾಗ ಜಾರಿಗೆ ಬಂದಿದೆ?

ಆಂಧ್ರ ಪ್ರದೇಶದಲ್ಲಿ ರಸ್ತೆ ಸಾರಿಗೆ ಸಂಸ್ಥೆಯು ಯಶಸ್ವಿಯಾಗಿ ನಡೆಸುತ್ತಿರುವ ಸೇವೆಯನ್ನು ಕರ್ನಾಟಕ ಮಾದರಿಯಾಗಿ ಪಡೆದಿದೆ. ಆಂಧ್ರಪ್ರದೇಶದಲ್ಲಿ ಕಾರ್ಗೋ ಸೇವೆ ಜಾರಿಗೆ ಬಂದಿದ್ದು ಅದನ್ನು ಕರ್ನಾಟಕದ ಸಾರಿಗೆ ಇಲಾಖೆ ಕೂಲಂಕುಷವಾಗಿ ಅಧ್ಯಯನ ನಡೆಸಿದೆ. ಆಗ ಆಂಧ್ರಪ್ರದೇಶ 150 ಕೋಟಿ ರೂಪಾಯಿ ಆದಾಯ ಪಡೆಯುವ ಮೂಲಕ ಸಾಧನೆ ಮಾಡಿದೆ.

 

advertisement

Image Source: Adda247

 

ಇದನ್ನೇ ಸ್ಫೂರ್ತಿಯಾಗಿ ಪರಿಗಣಿಸಿ ಸರಕಾರವು ನಮ್ಮ ರಾಜ್ಯ ಸಾರಿಗೆ ಇಲಾಖೆಯ ಅಧೀನದಲ್ಲಿ ಕಾರ್ಪೋರೇಷನ್ ಬಸ್ ಅನ್ನು ಬಳಸಿಕೊಂಡು ಸಾರಿಗೆ ಇಲಾಖೆಯು 2021ರಲ್ಲಿ KSRTC ಅಧೀನದಲ್ಲಿ ನಮ್ಮ ಕಾರ್ಗೋ ಸೇವೆಗಳನ್ನು ಪ್ರಾರಂಭ ಮಾಡಲಾಗಿದೆ. ಇದನ್ನು ಜಾರಿಗೆ ತಂದ ಆರಂಭದಲ್ಲಿ ಅತ್ಯುತ್ತಮ ಪ್ರಚಾರ ಪಡೆದಿತ್ತು. 2021ರಲ್ಲಿಯೇ ಪಾರ್ಸೆಲ್ ಹಾಗೂ ಕೊರಿಯರ್ ಸರ್ವಿಸ್ ನಿಂದ 10ಕೋಟಿ ರೂಪಾಯಿ ಆದಾಯ ಪಡೆದಿತ್ತು.

ಹಿಂದೆಲ್ಲ ಕೊರಿಯರ್ ಹಾಗೂ ಪಾರ್ಸೆಲ್ ಸೇವೆಗಾಗಿ ಹಳೆ ಬಸ್ ಬಳಕೆ ಮಾಡುತ್ತಿದ್ದರು ಅದು ತುಂಬಾ ರಿಪೇರಿಯಾಗುತ್ತಲೇ ಇರಬೇಕಿತ್ತು ಹಾಗಾಗಿ ಸರಕಾರದ ಅಧೀನದಲ್ಲಿ ರಾಜ್ಯದ ಕಾರ್ಗೋ ಸೇವೆ ಆರಂಭ ಆಗಿದೆ. ಆರಂಭದಲ್ಲಿ 20 ಲಾರಿಯನ್ನು GPS ಅಳವಡಿಕೆ ಮಾಡಿ ಬಳಸಲಾಯಿತು. 20 ಲಾರಿಯಲ್ಲಿ 14 ಲಾರಿಯ ಬಿಡಿ ಭಾಗವನ್ನು ಹಾಗೂ ಇತರ ಸರಕು ಮತ್ತು ಸೇವಾ ಉದ್ದೇಶಕ್ಕಾಗಿ ಬಳಕೆ ಮಾಡಲಾಗುತ್ತಿದೆ. 2025ರ ಹೊತ್ತಿಗೆ 100 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸುವ ನಿರೀಕ್ಷೆ ಇತ್ತು ಆದರೆ ಈಗ ನಿರೀಕ್ಷೆ ಹುಸಿಯಾಗಿದೆ ಎನ್ನಬಹುದು.

ಖಾಸಗಿ ಪೈಪೋಟಿ:

ಕಾರ್ಗೋ ಸೇವೆ ಸರಕಾರದ ಸಾರಿಗೆ ಇಲಾಖೆ ಮೂಲಕ ನೀಡುವಂತದ್ದಾಗಿದ್ದು ಖಾಸಗಿಯಾಗಿ ಅನೇಕ ಕೊರಿಯರ್ ಹಾಗೂ ಪಾರ್ಸೆಲ್ ನೀಡುವ ಸಂಸ್ಥೆ ಈಗಾಗಾಲೇ ಪ್ರಖ್ಯಾತಿ ಪಡೆದಿದೆ. ಅವರು ನೀಡುವ ಅತ್ಯಧಿಕ ಸೇವಾ ಸೌಲಭ್ಯ ಸರಕಾರದ KSRTC ನಮ್ಮ ಕಾರ್ಗೋ ಸೇವೆಯಲ್ಲಿ ಲಭ್ಯ ಇಲ್ಲ ಎನ್ನಬಹುದು. ಸರಕುಗಳು ಲೋಡರ್ ಹಾಗೂ ಅನ್ ಲೋಡರ್ ವ್ಯವಸ್ಥೆ ಸರಿಯಿಲ್ಲ. ಖಾಸಗಿ ಸಂಸ್ಥೆಗಳು ಅತ್ಯಾಧುನಿಕ ಸೇವೆಯೊಂದಿಗೆ ನಮ್ಮ ಕಾರ್ಗೋ ಸೇವೆಗೆ ಪೈಪೋಟಿ ನೀಡುತ್ತಲಿವೆ. ಹೀಗಾಗಿ 2025ರಲ್ಲಿ 100 ಕೋಟಿ ಆದಾಯ ಗಳಿಕೆ ಮಾಡುವ ಗುರಿ ಹೊಂದಿದ್ದ KSRTC ಕಾರ್ಗೋ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹ ಮಾಡಲು ವಿಫಲವಾಗುತ್ತಿದ್ದು ಮುಂದಿನ ದಿನದಲ್ಲಿ ವ್ಯವಸ್ಥೆ ಸರಿಗೊಳ್ಳುವ ಭರವಸೆ KSRTC ಸಂಸ್ಥೆಗೆ ಇದ್ದು ಮುಂದೇನಾಗುತ್ತದೆ ಎಂದು ನಾವು ಕೂಡ ಕಾದು ನೋಡಬೇಕಿದೆ.

advertisement

Leave A Reply

Your email address will not be published.