Karnataka Times
Trending Stories, Viral News, Gossips & Everything in Kannada

Ration Scheme: ಪಡಿತರ ಯೋಜನೆ ಅಕ್ರಮ ತಡೆಯಲು ಸರಕಾರದ ಹೊಸ ಕ್ರಮ

Advertisement

ಬಡಜನರಿಗೆ ಉಪಯೋಗವಾಗಲೇಂದು ಸರಕಾರ ಪಡಿತರ ವಿತರಣೆಯ ಯೋಜನೆ ಹಮ್ಮಿಕೊಂಡಿತ್ತು ಅದು ಸಾಕಷ್ಟು ಜನರಿಗೆ ಜೀವನದ ಕನಿಷ್ಟ ಮೌಲ್ಯ ಬರಿಸುವ ಆಹಾರ ಸಾಮಾಗ್ರಿಗಳಿಗೆ ಪ್ರೋತ್ಸಾಹ ಸಹ ನೀಡಿದಂತಾಯ್ತು. ಆದರೆ ಕೆಲವೊಂದು ಬಾರಿ ಜನರಿಗೆ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಅಕ್ಕಿ, ಇತರ ಸರಕನ್ನು ನೀಡಿ ಅದು ಸಾಕಷ್ಟು ಸಮಸ್ಯೆಯಾಯ್ತು ಆದರೀಗ ಇಂತಹ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡ ಸರಕಾರ ಹೊಸ ನೀತಿಗೆ ಕೈ ಹಾಕಿದ್ದು ಪಡಿತರ ಕಾರ್ಡ್ (Rration Card) ಬಳಕೆದಾರರಿಗೆ ಈ ವಿಚಾರ ಸಿಹಿಸುದ್ದಿ ನೀಡಿದಂತಾಗಿದೆ.

ಮಹತ್ವಾಕಾಂಕ್ಷೆಯ ಯೋಜನೆ:

ಮೊದಲಿಂದಲೂ ಕೇಂದ್ರದ ಬಿಜೆಪಿ ಸರಕಾರ ಜನಪರ ಯೋಜನೆಗೆ ಒತ್ತು ನೀಡುತ್ತಿದ್ದು ಈ ಬಾರಿ ಪಡಿತರ ವಿತರಣೆಯ ಯೋಜನೆಗೆ ಹೊಸ ರೂಪ ನೀಡಲು ಮುಂದಾಗಿದೆ. ಒನ್ ನೇಷನ್ ಒನ್ ಪಡಿತರ ಚೀಟಿ ಯೋಜನೆ’ (One Nation One Ration card) ಕೂಡ ಇಡೀ ದೇಶದಲ್ಲಿ ಜಾರಿಗೆ ಬರಲಿದೆ. ಈ ಮೂಲಕ ಕಡಿಮೆ ಪ್ರಮಾಣದ ಆಹಾರ ಸಾಮಾಗ್ರಿಗೆ ಕಡಿವಾಣ ಹಾಕಲು ಸಕಲ ಸಿದ್ಧತೆ ನಡೆಸಲಾಗಿದೆ‌. ಮುಂದಿನ ದಿನದಲ್ಲಿ ಯಾವ ಫಲಾನುಭವಿಗೂ ಕಡಿಮೆ ಪಡಿತರ ಸಿಗುವುದಿಲ್ಲ ಎಂದು ಹೇಳಬಹುದಾಗಿದ್ದು ಈ ವಿಚಾರ ಫಲಾನುಭವಿಗಳಿಗೆ ಖುಷಿಯ ಸುದ್ದಿಯಾಗಿದೆ.

Advertisement

ಅಕ್ರಮಕ್ಕೆ ಕಡಿವಾಣ:

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಕೆಲವೊಂದು ಮಹತ್ತರ ಮಾಹಿತಿ ಇರುವುದು ತಿಳಿದು ಬಂದಿದೆ. ಸರ್ಕಾರವು ಪ್ರತಿ ವ್ಯಕ್ತಿಗೆ ಐದು ಕೆಜಿ ಗೋಧಿ ಮತ್ತು ಅಕ್ಕಿಯನ್ನು (ಆಹಾರ ಧಾನ್ಯಗಳು) ದೇಶದ ಸುಮಾರು 80 ಕೋಟಿ ಜನರಿಗೆ ಕ್ರಮವಾಗಿ ಕೆಜಿಗೆ 2-3 ರೂ.ಗಳ ಸಬ್ಸಿಡಿ ದರದಲ್ಲಿ ನೀಡುತ್ತಿದೆ. ಆದರೆ ಕೆಲವು ಭಾಗದಲ್ಲಿ ಪಡಿತರ ಪ್ರಮಾಣ ಕಡಿಮೆ ನೀಡುತ್ತಿದ್ದಾರೆ ಎಂಬ ದೂರು ಸಹ ಕೇಳಿ ಬರುತ್ತಿದೆ. ಇಂದು ಬಹುತೇಕ ಕಡೆಗಳಲ್ಲಿ ಪಡಿತರ ವಿತರಣೆಯಲ್ಲಿಮೋಸದ ಜಾಲ ಪತ್ತೆಯಾಗಿದೆ.

ಈ ಮೂಲಕ ತೂಕದಲ್ಲಿ ವ್ಯತ್ಯಾಸ ಮಾಡಿ ಜನರ ಕಣ್ಣಿಗೆ ಮಣ್ಣೆರೆಚುವ ಈ ಅಕ್ರಮದ ವಿರುದ್ಧ ಸರಕಾರ ಮಹತ್ತ್ವದ ನಿರ್ಧಾರ ಕೈಗೊಂಡು ಈ‌ ಮೂಲಕ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ (ಇಪಿಒಎಸ್) (EPOS) ಸಾಧನಗಳನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಈ ಮೂಲಕ ಅಕ್ರಮವಾಗಿ ತೂಕ ಮೋಸ ಮಾಡುವ ವಿರುದ್ಧ ಸರಕಾರ ಈ ಕ್ರಮ ಕೈಗೊಂಡಿದ್ದು ಇದು ನೆಟ್‌ವರ್ಕ್ ಇಲ್ಲದಿದ್ದರೆ ಆಫ್‌ಲೈನ್‌ನಲ್ಲಿ ಮತ್ತು ಆನ್‌ಲೈನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಬಹುದು. ಈ ಮೂಲಕ ಅಕ್ರಮಕ್ಕೆ ಕಡಿವಾಣ ಹಾಕುವ ಈ ಯೋಜನೆ ಸದ್ಯ ಬಡ ಜನರ ಪಾಲಿನ ಭವಿಷ್ಯದ ಆಶಾ ಕಿರಣವಾಗಿದೆ ಎನ್ನಬಹುದು.

Advertisement

1 Comment
  1. Aruna v says

    Actually really Good news oly ,,Poor people really will be benefited,,what ever Government as presently ordered ,,Less than that oly we r getting ration ..

Leave A Reply

Your email address will not be published.