Karnataka Times
Trending Stories, Viral News, Gossips & Everything in Kannada

Exam Schedule: 5 ಮತ್ತು 8ನೇ ತರಗತಿ ಮಕ್ಕಳ ಪಬ್ಲಿಕ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡಬೇಕೆಂದು ನಿರ್ಧಾರಿಸಲಾಗಿತ್ತು, 5 ಮತ್ತು 8ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿತ್ತು, ಅದನ್ನು ವಿರೋಧಿಸಿ ಪೋಷಕರ ಸಂಘಟನೆ ಕೋರ್ಟ್ ಮೊರೆ ಹೋಗಿತ್ತು. ಪೋಷಕರ ಮನವಿಗೆ ಸಮ್ಮತಿಸಿದ್ದ ನ್ಯಾಯಾಲಯ ಸರ್ಕಾರದ ಆದೇಶಕ್ಕೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು, ಇದೀಗ 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಅನುಮತಿ ನೀಡಿ ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪು ನೀಡಿದೆ.

ಹೈಕೋರ್ಟ್ ಆದೇಶ ಏನು:

ಪಠ್ಯಕ್ರಮದಲ್ಲಿ ಉಲ್ಲೇಖಿಸಿರುವುದನ್ನು ಬಿಟ್ಟು ಬೇರೆ ಪ್ರಶ್ನೆಗಳನ್ನು ಕೇಳುವಂತಿಲ್ಲ, ಯಾರನ್ನೂ ಅನುತ್ತೀರ್ಣಗೊಳಿಸುವಂತಿಲ್ಲ ಎಂದು ಪೀಠ ನಿರ್ದೇಶನ ನೀಡಿದೆ. ‌ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನವನ್ನು ನಡೆಸಲು ಅವಕಾಶ ನೀಡಿದ್ದು, ಸರಳ ಪ್ರಶ್ನೆಗಳಿಗೆ,ಪೋಷಕರ ಗೊಂದಲಗಳಿಗೂ ಉತ್ತರ ನೀಡಿದೆ. ಪಠ್ಯದ ಪ್ರಶ್ನೆಗಳೇ ಇರಬೇಕೆಂದು ತಿಳಿಸಿದೆ, ಈ ಹಿನ್ನಲೆಯಲ್ಲಿ ದಿನಾಂಕ 27-03- 2023 ರಿಂದ 30-03-2023ರ ವರೆಗೆ 5ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನವನ್ನು ನಡೆಸಲು ನಿರ್ಧರಿಸಲಾಗಿದೆ, ಅದೇ ರೀತಿ 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಾಂಕ 27-03-2023. ರಿಂದ 01-04-2023 ವರೆಗೆ ಮೌಲ್ಯಾಂಕನವನ್ನು ನಡೆಸಲಾಗುತ್ತಿದೆ

Join WhatsApp
Google News
Join Telegram
Join Instagram

ವೇಳಾಪಟ್ಟಿ ಹೀಗಿದೆ:

5ನೇ ತರಗತಿ ವೇಳಾಪಟ್ಟಿ:

ಮಾ.27 , ಪ್ರಥಮ ಭಾಷೆ, ಮಾ.28 ದ್ವಿತೀಯ ಭಾಷೆ, ಮಾ.29 , ಪರಿಸರ ಅಧ್ಯಯನ, ಮಾ.30 , ಗಣಿತ

8ನೇ ತರಗತಿ ವೇಳಾಪಟ್ಟಿ:

ಮಾ.27 , ಪ್ರಥಮ ಭಾಷೆ, ಮಾ.28 ದ್ವಿತೀಯ ಭಾಷೆ, ಮಾ.29 ತೃತೀಯ ಭಾಷೆ, ಮಾ.30 , ಗಣಿತ
ಮಾ.31 , ವಿಜ್ಞಾನ, ಏ.1 ಸಮಾಜ ವಿಜ್ಞಾನ ಎಂದು ತಿಳಿಸಿದೆ

Leave A Reply

Your email address will not be published.