Jan Dhan Yojana: ಅಕೌಂಟ್ ನಲ್ಲಿ ಹಣ ಇಲ್ಲದಿದ್ದರೂ 10000 ರೂ ತಗೆಯಬಹುದು, ಇಲ್ಲಿದೆ ಸಿಹಿಸುದ್ದಿ
ಎಷ್ಟೊ ಬಾರಿ ಅತೀ ಕಷ್ಟದ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಒಂದಿಷ್ಟು ಹಣ ಆದರೂ ಇರಬೇಕಿತ್ತು ಎಂದು ಅನಿಸುತ್ತದೆ. ಆದರೆ ಇದೀಗ ಕೇಂದ್ರ ಸರಕಾರದ ಮಹತ್ವದ ಯೋಜನೆಯೊಂದು ಕಷ್ಟಕಾಲದಲ್ಲಿ ನಿಮಗೆ ನೆರವಾಗಲಿದೆ. ಈ ಯೋಜನೆಯಿಂದ ಆರ್ಥಿಕ ಸ್ವಾವಲಂಬನೆ ದೊರೆಯುವುದು ಮಾತ್ರವಲ್ಲದೆ ಪ್ರೋತ್ಸಾಹ ಕೂಡ ದೊರೆತಂತಾಗುತ್ತದೆ. ಹಾಗಾದರೆ ಈ ಯೋಜನೆ ಯಾವುದು ಇದರಿಂದ ಆಗುವ ಒಳಿತೇನು ಎಂಬ ಬಗ್ಗೆ ಇಲ್ಲಿದೆ ಲೇಖನ.
ಮೋದಿ ಸರಕಾರ ಯಾವಾಗಲೂ ಹೊಸ ಯೋಜನೆ, ಹೊಸ ಪರಿಕಲ್ಪನೆಗೆ ಒತ್ತು ನೀಡುತ್ತಾ ಬಂದಿದ್ದು ಈಗ ಇರುವ ಹಳೆ ಯೋಜನೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ.
ಯಾವುದು ಈ ಯೋಜನೆ?
ಈ ಯೋಜನೆಯ ಹೆಸರು ಜನ್ ಧನ್ ಯೋಜನೆ (Jan Dhan Yojana). ಇದು ಮಹಿಳೆಯರಿಗೆ ಹೆಚ್ಚು ಸ್ವಾವಂಲಂಬನೆ ಬದುಕು ಸಾಗಿಸಲು ನೆರವು ನೀಡಲಿದೆ. ಜನ್ ಧನ್ ಖಾತೆದಾರರಿಗೆ ಸರಕಾರ 10,000 ರೂಪಾಯಿ ನೀಡುತ್ತೆ. ಇದಕ್ಕಾಗಿ ನೀವು ಬ್ಯಾಂಕ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಪ್ರಯೋಜನ ಎಂದರೆ ನಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಇಲ್ಲದಾದರೂ 10 ಸಾವಿರ ರೂ. ದೊರೆಯುತ್ತದೆ. ಕ್ರೆಡಿಟ್ ಸೌಲಭ್ಯಗಳಂತೆ, ಓವರ್‌ಡ್ರಾಫ್ಟ್ ಸೌಲಭ್ಯದ ಮೂಲಕ ಹಣವನ್ನ ಹಿಂಪಡೆಯುವಾಗ ಗ್ರಾಹಕರು ಸ್ವಲ್ಪ ಬಡ್ಡಿಯನ್ನ ಪಾವತಿಸಬೇಕಾಗುವುದು ಅನಿವಾರ್ಯ ಎನ್ನಬಹುದು.
ಹಿಂದೆಲ್ಲ 5ಸಾವಿರ ಮಿತಿಯ ಹಣವನ್ನು ಹಾಕಿಕೊಂಡು ಸರಕಾರ ಜನ್ ಧನ್ ಖಾತೆಗೆ ಹಣ ವರ್ಗಾಯಿಸುತ್ತಿತ್ತು ಆದರೆ ಈಗ ಆ ಮೊತ್ತವನ್ನು ಹೆಚ್ಚಿಸಿದೆ. ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು PMJDY ಖಾತೆದಾರರು ಕನಿಷ್ಟ ಆರು ತಿಂಗಳ ಕಾಲ ಆ ಖಾತೆಯಲ್ಲಿ ಸಕ್ರಿಯರಾಗಿರ ಬೇಕು ಎಂಬ ನಿಯಮವಿದೆ. ಅದೇ ರೀತಿ ಈ ಸೌಲಭ್ಯ ಪಡೆಯಲು 2000ರೂ. ವರೆಗೆ ಪಡೆಯಲು ಯಾವುದೆ ಹೆಚ್ಚಿನ ದಾಖಲಾತಿ ಅಗತ್ಯವಿರಲಾರದು.
ಅರ್ಹತೆ ಏನು?
- ಭಾರತೀಯ ಪ್ರಜೆಯಾಗಿರಬೇಕು.
- 18 ವರ್ಷ ಕನಿಷ್ಠ ವಯೋ ಮಿತಿ ಇರಬೇಕು.
- 60 ರಿಂದ 65 ವರ್ಷ ಗರಿಷ್ಠ ವಯೋಮಿತಿ ಇರಬೇಕು.
- ಯಾವುದೇ ಅಕ್ರಮ ಕಾನೂನು ಬಾಹಿರ ಚಟುವಟಿಕೆಯಲ್ಲಿ ಇರಬಾರದು.
- ಭಾರತೀಯ ಪ್ರಜೆ ಎನ್ನಲ್ಲು ಅಗತ್ಯವಾದ ಓಟರ್ ಐಡಿ, ಆಧಾರ್ ಇತರ ಮಾಹಿತಿ ಅಗತ್ಯ.
- ಈ ಎಲ್ಲ ಅರ್ಹತೆ ನಿಮಗಿದ್ದರೆ ಬ್ಯಾಂಕಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟಾರೆಯಾಗಿ ಸರಕಾರದ ಈ ಮಹತ್ವದ ಯೋಜನೆ ಹಲವರಿಗೆ ನೆರವಾಗಲಿದ್ದು ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎನ್ನಬಹುದು. ನೀವು ಈ ಸೌಲಭ್ಯ ಪಡೆಯಲು ಹತ್ತಿರದ ಬ್ಯಾಂಕ್ನಲ್ಲಿ ಅಗತ್ಯ ದಾಖಲಾತಿ ಸಲ್ಲಿಸಬಹುದು. ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.