Karnataka Times
Trending Stories, Viral News, Gossips & Everything in Kannada

KSRTC: ಬೆಲೆ ಏರಿಕೆಯ ಭೀತಿ ನಡುವೆ ರಾಜ್ಯದ ಇಲ್ಲ ಪೋಷಕರಿಗೆ ಸಿಹಿಸುದ್ದಿ ಕೊಟ್ಟ KSRTC

advertisement

ಇಂದು ರಾಜ್ಯ ಸರಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ್ಗದ ಜನತೆಗೆ ಈಗಾಗಲೇ ನೆರವಾಗುತ್ತಿದೆ. ಗೃಹಲಕ್ಷ್ಮಿ (Gruha Lakshmi), ಗೃಹಜ್ಯೋತಿ (Gruha Jyothi), ಶಕ್ತಿ ಯೋಜನೆ (Shakti Yojana), ಅನ್ನಭಾಗ್ಯ ಯೋಜನೆ (Anna Bhagya Yojana), ಯುವನಿಧಿ (Yuva Nidhi) ಹೀಗೆ ಎಲ್ಲ ಯೋಜನೆಗಳು ಬಹಳಷ್ಟು ಸಕ್ರಿಯ ವಾಗಿ ಜನತೆಗೆ ಸಿಗುತ್ತಿದೆ. ಅದರಲ್ಲಿ ಮುಖ್ಯ ವಾಗಿ ಶಕ್ತಿ ಯೋಜನೆ ಇಂದು ಬಹಳಷ್ಟು ಪ್ರಚಲಿತ ದಲ್ಲಿದೆ. ಇದರಿಂದ ಮಹಿಳೆಯರು ಹೆಚ್ಚು ಸಂಚಾರ ಮಾಡುವಂತೆ ಆಗಿದೆ.‌ ಈಗಾಗಲೇ ಈ ಯೋಜನೆಯ ಬಗ್ಗೆ ಧನಾತ್ಮಕ ಪ್ರತಿಕ್ರಿಯೆ ಗಳು ಹೆಚ್ಚಾಗ್ತ ಇಂದು ಸರಕಾರಿ ಬಸ್ (Govt Bus) ನಿಂದ ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ, ಮಹಿಳೆಯರಿಗೂ ಹೆಚ್ಚು ಸಹಾಯಕ ವಾಗ್ತ ಇದೆ. ಇದೀಗ ವಿದ್ಯಾರ್ಥಿಗಳಿಗೆ ಕೆ ಎಸ್ ಅರ್ ಟಿ ಸಿ (KSRTC) ನಿಗಮದಿಂದ ಗುಡ್ ನ್ಯೂಸ್ ಮಾಹಿತಿ ಯೊಂದು ಬಂದಿದ್ದು ವಿದ್ಯಾರ್ಥಿಗಳು ಖುಷಿ ಪಡುವಂತೆ ಆಗಿದೆ.

ಈಗಾಗಲೇ ಶಕ್ತಿ ಯೋಜನೆ ಮೂಲಕ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡುತ್ತಿದ್ದಾರೆ. ತಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ತೋರಿಸುವ ಮೂಲಕ ಪ್ರಯಾಣ ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಬಸ್ ಗಳು ಇಲ್ಲದೆ ತೊಂದರೆ ಯಾಗುತ್ತಿದೆ.‌ ಸಮಯಕ್ಕೆ ಸರಿಯಾಗಿ ಸರಕಾರಿ ಬಸ್ ಇಲ್ಲ, ವಿವಿಧ ಹಳ್ಳಿಗಳ ಕಡೆ ಬಸ್ ಕೊರತೆ ಇರಲಿದೆ.‌ ಕೆಲವು ಗ್ರಾಮೀಣ ಭಾಗದ ರಸ್ತೆಗಳು ವ್ಯವಸ್ಥಿತವಾಗಿದ್ದರೂ ಆ ಗ್ರಾಮಗಳಲ್ಲಿ ಬಸ್ ಸೌಕರ್ಯ ಇಲ್ಲ.ಇದಕ್ಕಾಗಿ ಬಸ್ ಸೇವೆಗೆ ಆಗ್ರಹಿಸಿ ಪ್ರತಿಭಟನೆ ಕೂಡ ನಡೆಸ ಲಾಗುತ್ತಿದೆ. ಇದಕ್ಕಾಗಿ ಸರಕಾರ ಈ ಬಗ್ಗೆ ಗುಡ್ ನ್ಯೂಸ್ ನೀಡಿದೆ.

 

Image Source: Coach Builders India

 

advertisement

ಈಗಾಗಲೇ ವಿದ್ಯಾರ್ಥಿಗಳು ,ಪೋಷಕರು ಬಸ್ ಕೊರತೆ ಬಗ್ಗೆ ಕೆ.ಎಸ್.ಆರ್.ಟಿ.ಸಿ (KSRTC) ಗೆ ಹಲವು ಬಾರಿ ಮನವಿ ಮಾಡಿದ್ದರು. ಇದೀಗ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಕೆ.ಎಸ್.ಆರ್.ಟಿ.ಸಿ (KSRTC) 300ಕ್ಕೂ ಹೆಚ್ಚು ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸೇವೆ ನೀಡುವ ಬಗ್ಗೆ ಸೂಚನೆ ನೀಡಿದೆ.‌ ಇದಕ್ಕಾಗಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಇನ್ಮುಂದೆ ಸುಲಭ ವಾಗಬಹುದು.‌ಬಸ್ ಇರದಂತಹ ಸ್ಥಳ ಗಳಿಗೆ ಹೆಚ್ಚುವರಿ ಬಸ್ ಅನ್ನು ಹಾಕುವ ಬಗ್ಗೆ ನಿಗಮ ಗುಡ್ ನ್ಯೂಸ್ ನೀಡಿದೆ.

ಹೊಸ ಮಾರ್ಗಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಹೆಚ್ಚಿನ ಬಸ್ ಗಳ ಸೇವೆ ಹಾಕಿ, ವಿದ್ಯಾರ್ಥಿಗಳಿಗೆ ಸುಲಭ ವಾಗಿ ಪ್ರಯಾಣಿಸುವಂತೆ ಮಾಡುತ್ತೇವೆ, ಬಸ್​ ಸೇವೆ ಅವಶ್ಯಕತೆಯಿರುವ ಮಾರ್ಗಗಳ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ಕೂಡ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದ್ದಾರೆ.

ಈಗ 814 ಹೊಸ ಬಸ್​ಗಳ ಸೇರ್ಪಡೆ ಯೊಂದಿಗೆ‌ 977 ಹಳೇ ಬಸ್‌ಗಳನ್ನು ಸರಿ ಮಾಡಲಾಗುತ್ತದೆ. 100 ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳ ಸೇರ್ಪಡೆಗೆ ಸರ್ಕಾರ ಅನುಮತಿ ನೀಡಿದ್ದು, 20 ಅಂಬಾರಿ, 20 ಐರಾವತ ಉತ್ಸವ ಬಸ್‌ಗಳ ಖರೀದಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ‌ಕೂಡ ‌ನೀಡಲಾಗಿದೆ.‌ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಸಿಗುತ್ತಿ‌ ಲ್ಲ ಎನ್ನುತ್ತಿದ್ದವರಿಗೆ ಹೊಸ ಬಸ್ ಆರಂಭ ವಿಚಾರ ಖುಷಿ ಸಿಕ್ಕಂತೆ ಆಗಿದೆ.

advertisement

Leave A Reply

Your email address will not be published.