Karnataka Times
Trending Stories, Viral News, Gossips & Everything in Kannada

ತಿಂಗಳಿಗೆ ಕೇವಲ 34 ರೂ ಕಟ್ಟಿ 10 ಲಕ್ಷ ಪಡೆಯುವ ಕೇಂದ್ರದ ಈ ಸ್ಕೀಮ್ ಗೆ ಮುಗಿಬಿದ್ದ ಜನ!

advertisement

ಜೀವೆ ವಿಮೆ (Life Insurance) ಮಾಡಿಸುವುದು ಎಲ್ಲ ಕಾಲಕ್ಕೂ ಬಹಳ ಉಪಯೋಗಕ್ಕೆ ಬರಲಿದೆ ಎನ್ನಬಹುದು. ಜೀವ ವಿಮೆ ಮಾಡಿಸುವುದು ನೀವು ಕೆಲಸಕ್ಕೆ ಸೇರಿದ ಕೂಡಲೆ ಮಾಡಿಸಿದರೆ ಆ ಬಳಿಕ ನಿಮಗೆ ಲಾಭ ಸಿಗುತ್ತದೆ ಎಂದು ಕೂಡ ಹೇಳಬಹುದು. ವಿಮೆಯನ್ನು ಯಾವುದೇ ಪೂರ್ವ ಪರ ಯೋಚನೆ ಯೋಜನೆ ಇಲ್ಲದೆ ಮಾಡಿಸುವ ಬದಲು ಅದನ್ನು ನೀವು ಸುರಕ್ಷಿತವಾದ ಕ್ಷೇತ್ರದಲ್ಲಿ ಮಾಡಿಸಿದರೆ ಅಧಿಕ ಲಾಭಗ್ಯಾರೆಂಟಿ ಈ ನಿಟ್ಟಿನಲ್ಲಿ ಅಂಚೆ ಇಲಾಖೆ ಯಲ್ಲಿ ದೊರೆಯುವ ಜೀವ ವಿಮೆ (Life Insurance) ಮಹತ್ವದ ಸ್ಥಾನ ಪಡೆದಿದೆ. ಈ ಬಗ್ಗೆ ಕೆಲ ಮಹತ್ವ ಪೂರ್ಣ ಮಾಹಿತಿ ಇಲ್ಲಿದೆ.

ನೀವು ವಿಮೆ ಮಾಡಿಸುವುದಾದರೆ ಅನೇಕ ಬ್ಯಾಂಕ್ , ಕಂಪೆನಿಗಳ LIC ಪಾಲಿಸಿ ಇದೆ ಆದರೆ ನೀವು ಇಂಡಿಯನ್ ಪೋಸ್ಟ್ ಆಫೀಸ್ (Post Office) ನಲ್ಲೇ ವಿಮೆ ಮಾಡಿದರೆ ಕಡಿಮೆ ಹಣಕ್ಕೆ ಅಧಿಕ ವಿಮೆ ಪ್ರಯೋಜನೆ ಸಿಗುತ್ತದೆ ಎನ್ನಬಹುದು. ವಿಮೆಯಲ್ಲಿ Post office ಹಾಗೂ TATA AIG ಇನ್ಶುರೆನ್ಸ್ ಕಂಪೆನಿ ಸೇರಿಕೊಂಡು Group Accident Insurance ಯೋಜನೆ ಜಾರಿಗೆ ತಂದಿದೆ. 299, 399 ರೂಪಾಯಿಗೆ ಅಪಘಾತ ಆದಾಗ ವಿಮೆ ಪರಿಹಾರ ಮೊತ್ತ ಸಿಗಲಿದೆ. ಇದರಲ್ಲಿ ಬೇಸಿಕ್ ಗೆ 299 ಹಾಗೂ ಪಿಮಿಎಂ ಇದ್ದರೆ ಅದಕ್ಕೆ 399 ರೂಪಾಯಿ ಆಗಲಿದೆ.

ಯಾವೆಲ್ಲ ಸೌಕರ್ಯ ಇದೆ:

 

Image Source: Freepik

 

advertisement

ವರ್ಷಕ್ಕೆ 399 ರೂಪಾಯಿ ಪ್ರಿಮಿಯಂ ಆಯ್ಕೆ ನೀವು ಪಡೆದುಕೊಂಡರೆ ಆಗ ತಿಂಗಳಿಗೆ 34 ರೂಪಾಯಿಯಂತೆ ಮೊತ್ತ ಪಾವತಿ ಮಾಡಬಹುದು. ಅಪಘಾತದಿಂದ ಸಾವನಪ್ಪಿದರೆ , ಶಾಶ್ವತ ಅಂಗವೈಕಲ್ಯ ಇದ್ದರೆ 10 ಲಕ್ಷ ರೂಪಾಯಿ ಸಿಗಲಿದೆ. ಪ್ಯಾರಾಲಿಸಿಸ್ ಇತರ ಕಾರಣಕ್ಕೆ ಎದ್ದು ಓಡಾಟ ಮಾಡಲು ಆಗದಿದ್ದ ಸಂದರ್ಭದಲ್ಲಿ 10 ಲಕ್ಷ ರೂಪಾಯಿ ಸಿಗಲಿದೆ. ಕೆಲವು ಸಲ ಅಪಘಾತ ನಡೆದಾಗ 60 ಸಾವಿರದ ತನಕ ಚಿಕಿತ್ಸಾ ವೆಚ್ಚ ನೀಡಲಾಗುವುದು. ಅಷ್ಟು ಮಾತ್ರವಲ್ಲದೆ ನಮ್ಮ ಮೇಲೆ ಅವಲಂಬಿತರಾಗಿದ್ದ ಮಕ್ಕಳಿದ್ದರೆ ಅವರಿಗೆ 10 ಲಕ್ಷದಲ್ಲಿ 1 ಲಕ್ಷದ ವರೆಗೆ ವಿಮೆ (Insurance) ನೀಡಲಾಗುವುದು.

ಇಬ್ಬರು ಮಕ್ಕಳಿಗೆ ಮಾತ್ರ ಈ ಸೌಲಭ್ಯ ಇರಲಿದೆ‌. ಅಷ್ಟು ಮಾತ್ರವಲ್ಲದೇ ಅಪಘಾತ ಆಗಿ ಸತ್ತು ಹೋಗಿದ್ದರೆ 10 ಲಕ್ಷ ಸಿಗುವ ಜೊತೆಗೆ ಅಂತ್ಯ ಸಂಸ್ಕಾರಕ್ಕೆ 5000 ರೂಪಾಯಿ ತನಕ ಸಿಗಲಿದೆ. ಆಸ್ಪತ್ರೆಯ ಖರ್ಚಿಗೆ In Hand Cash ಹಾಗೂ ಇತರ ಕಡೆ ಆಸ್ಪತ್ರೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಕೂಡ ಪ್ರಯಾಣ ವೆಚ್ಚ ಸಿಗುತ್ತದೆ. 150 ಕಿಲೋಮೀಟರ್ ದೂರ ಕ್ರಮಿಸಿದರೆ ಬಳಿಕ ಅದಕ್ಕೆ 25,000 ತನಕ ಮೊತ್ತ ಸಿಗಲಿದೆ.

 

Image Source: News18

 

299 ರೂಪಾಯಿ ಬೇಸಿಕ್ ಇನ್ಶೂರೆನ್ಸ್ ಪಡೆದರೆ ಅಪಘಾತದಿಂದ ಸಾವನಪ್ಪಿದರೆ, ಶಾಶ್ವತ ಅಂಗವೈಕಲ್ಯ ಇದ್ದರೆ 10 ಲಕ್ಷ ರೂಪಾಯಿ ಸಿಗಲಿದೆ. ಪ್ಯಾರಾಲಿಸಿಸ್ ಇತರ ಕಾರಣಕ್ಕೆ ಎದ್ದು ಓಡಾಟ ಮಾಡಲು ಆಗದಿದ್ದ ಸಂದರ್ಭದಲ್ಲಿ 10 ಲಕ್ಷ ರೂಪಾಯಿ ಸಿಗಲಿದೆ. ಕೆಲವು ಸಲ ಅಪಘಾತ ನಡೆದಾಗ 60 ಸಾವಿರದ ತನಕ ಚಿಕಿತ್ಸಾ ವೆಚ್ಚ ನೀಡಲಾಗುವುದು. ಆದರೆ ಚಿಕಿತ್ಸೆ ಇತರ ವೆಚ್ಚ ಮತ್ತು ಶೈಕ್ಷಣಿಕ ವೆಚ್ಚ ಇತರೆ ಬೆನಿಫಿಟ್ ಇಲ್ಲ ಎನ್ನಬಹುದು. ಹಾಗಾಗಿ ವರ್ಷಕ್ಕೆ 299 ರೂಪಾಯಿ ಕಟ್ಟಿದರೆ 10 ಲಕ್ಷದ ತನಕ ವಿಮೆ ಸಿಗುತ್ತದೆ ಎನ್ನಬಹುದು

ಅಪಘಾತ ಆಗಿ ಒಂದು ವರ್ಷದಲ್ಲಿ ಮೃತ ಪಟ್ಟ ಸಂದರ್ಭ ಈ ಯೋಜನೆ ಅಡಿಯಲ್ಲಿ ಕ್ಲೈಮ್ ಮಾಡಿ ಹಣ ಪಡೆಯಬಹುದು. ಅಪಘಾತ ಆಗಿ ಒಂದು ವರ್ಷದಲ್ಲಿ ಅದೇ ಅಪಘಾತದಿಂದ ಬೇರೆ ರೋಗದ ಸಮಸ್ಯೆ ಕಂಡು ಬಂದರೆ 365 ದಿನದ ಒಳಗೆ ಕಂಪ್ಲೀಟ್ ಲಾಭ ಪಡೆಯಬಹುದು. 18 ವರ್ಷ ಮೇಲ್ಪಟ್ಟು 65 ವರ್ಷದ ಒಳಗಿನವರು ಈ ಯೋಜನೆಗೆ ಅರ್ಹತೆ ಪಡೆಯಬಹುದು. ವರ್ಷಕ್ಕೆ 399 ರೂಪಾಯಿ ಕಟ್ಟಬೇಕು. ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರಬೇಕು. 500 ರುಪಾಯಿ ಮಿನಿಮಮ್ ಬ್ಯಾಲೆನ್ಸ್ (Minimum Balance) ಕಾಯ್ದಿರಿಸಬೇಕು. ಆತ್ಮಹತ್ಯೆ, ಅನೈತಿಕ ಚಟುವಟಿಕೆ, ಯುದ್ಧದಲ್ಲಿ ಮರಣ ಹೊಂದಿದರೆ, ಬ್ಯಾಕ್ಟೀರಿಯಾ ಇನ್ ಫೆಕ್ಷನ್ ಅಂದರೆ ಸುಧೀರ್ಘ ಕಾಯಿಲೆ ಇಂದ ಸತ್ತರೆ, ಕ್ರೀಡೆ, ಏಡ್ಸ್ ರೋಗದಿಂದ ಸತ್ತರೆ ಆಗ ವಿಮೆ ಮೊತ್ತ ಕ್ಲೈಮ್ ಮಾಡಲು ಸಾಧ್ಯವಿಲ್ಲ.

advertisement

Leave A Reply

Your email address will not be published.