Karnataka Times
Trending Stories, Viral News, Gossips & Everything in Kannada

RTO: ಎಲ್ಲಾ ಶಾಲಾ ಬಸ್ ಗಳ ಕುರಿತು RTO ಹೊಸ ನಿರ್ಧಾರ! ಪೋಷಕರಿಗೂ ಮಹತ್ವದ ಸೂಚನೆ.

advertisement

ಬೇಸಿಗೆ ರಜೆ ಮುಗಿದು ಯಥಾಪ್ರಕಾರ ಮತ್ತೆ ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು, ಇದರಿಂದ ಸಾಕಷ್ಟು ಶಾಲಾ ಬಸ್ ಗಳು ರಸ್ತೆಯಲ್ಲಿ ಚಾಲಿತ ಗೊಳ್ಳುತ್ತಿರುವುದನ್ನು ಗಮನಿಸುತ್ತಿರುವ ಆರ್ ಟಿ ಓ (RTO), ಈ ಕುರಿತು ಸೂಕ್ಷ್ಮವಾದ ತನಿಖೆ ನಡೆಸಿ ಅರ್ಹತಾ ಪ್ರಮಾಣ ಪತ್ರಗಳಿಲ್ಲದೆ, ರಸ್ತೆ ನಿಯಮವನ್ನು ಉಲ್ಲಂಘನೆ ಮಾಡುತ್ತಾ, ಬಸ್ ಚಲಾವಣೆ ಮಾಡುತ್ತಿರುವ ಸಾವಿರಾರು ಶಾಲಾ ಬಸ್ಗಳ (School Buses) ಮಾಹಿತಿ ತಿಳಿದು ಅವರ ವಿರುದ್ಧ ಕಠಿಣವಾದ ಕ್ರಮ ಕೈ ತೆಗೆದುಕೊಳ್ಳುವುದಾಗಿ ತಿಳಿಸಲಾಗಿದೆ.

ಪಿಂಪ್ರಿ ಚಿಂಚವಾಡ್ ಪ್ರದೇಶದಲ್ಲಿ ಈಗಾಗಲೇ ಸಾವಿರಾರು ಶಾಲಾ ಬಸ್ ಗಳು ಅನಗತ್ಯವಾಗಿ ಕಾರ್ಯನಿರ್ವಹಿಸುತ್ತಿರುವಂತಹ ಮಾಹಿತಿ ತಿಳಿದು ಬಂದಿದ್ದು, ಇದು ವಿದ್ಯಾರ್ಥಿಗಳಿಗೆ ಗಮನಾರ್ಹ ಅಪಾಯವನ್ನು ಉಂಟು ಮಾಡಲಿದೆ‌, ನಿಯಮಗಳನ್ನು ಉಲ್ಲಂಘನೆ ಮಾಡುವ ಬಸ್ ಚಾಲಕರ (Bus Driver) ವಿರುದ್ಧ ಹಾಗೂ ಬಸ್ ಮಾಲೀಕರ ವಿರುದ್ಧ ಶಿಕ್ಷಾರ್ಹ ಕ್ರಮ ತೆಗೆದುಕೊಳ್ಳುವುದಾಗಿ ಆರ್ ಟಿ ಓ (RTO) ಅಧಿಕಾರಿಗಳಾದ ಮನೋಜ್ ಒಟಾರಿ (RTO Officer Manoj Otari) ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸಿ ಅಕ್ರಮವಾಗಿ ಶಾಲಾ ಬಸ್ ಚಲಾವಣೆ ಮಾಡಿದರೆ ಶಿಕ್ಷಾರ್ಹ ಕ್ರಮ!

 

Image Source: Telegraph India

 

advertisement

ಜೂನ್ ಎರಡನೇ ವಾರದಿಂದ ಪಿಂಪ್ರಿ ಚಿಂಚವಾಡ್ (Pimpri Chinchwad) ನಲ್ಲಿ ಇರುವಂತಹ ಶಾಲೆಗಳು ತೆರೆಯುವುದರಿಂದ ಮಕ್ಕಳೆಲ್ಲರೂ ಯಥಾಪ್ರಕಾರ ಬಸ್ನಲ್ಲಿ ಪ್ರಯಾಣ ಬೆಳೆಸಿ ಶಾಲೆಗೆ ಬರಲು ಮುಂದಾಗಿದ್ದಾರೆ. ಈ ಕಾರಣದಿಂದ ಪ್ರತಿನಿತ್ಯ ರಸ್ತೆಯಲ್ಲಿ ಸಾವಿರಾರು ಬಸ್ ಗಳು ಹಾಗೂ ಶಾಲಾ ವ್ಯಾನ್ಗಳು ಚಲಿಸುತ್ತಿದೆ.

ಇಂತಹ ಬಸ್ಗಳ ಚಾಲಕರು ಬೇಜವಾಬ್ದಾರಿಯಿಂದ ರಸ್ತೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಬಸ್ನಲ್ಲಿ ಕುಳಿತಿರುವ ಸಣ್ಣ ಮಕ್ಕಳ ಕುರಿತು ಕಾಳಜಿ ಇಲ್ಲದೆ ಬಸ್ಸನ್ನು ಓಡಿಸುತ್ತಿರುವುದನ್ನು ಅಧಿಕಾರಿಗಳು ಗಮನಿಸಿ, ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ವಾಹನ ನಿರೀಕ್ಷಕ ಕಚೇರಿಯು ನಿಯಮಾವಳಿಗಳನ್ನು ರೂಪಿಸಿದ್ದು, ಬಸ್ಸಿನ ಫಿಟ್ನೆಸ್ ಹಾಗೂ ವಾಹನ ಚಾಲಕರ ಅರ್ಹತೆಯ ಕುರಿತು ಮಾಹಿತಿ ತಿಳಿದು ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ಶಾಲಾ ಬಸ್ (School Bus) ಗಳನ್ನು ಚಾಲನೆ ಮಾಡುತ್ತಿರುವವರ ವಿರುದ್ಧ ಶಿಕ್ಷಾರ್ಹ ಕ್ರಮ ಕೈ ತೆಗೆದುಕೊಳ್ಳಲಾಗುವುದು.

ಈವರೆಗೂ 2,951 ಶಾಲಾ ಬಸ್ಗಳನ್ನು ಪರಿಶೀಲಿಸಲಾಗಿದೆ!

ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ 2,951 ಶಾಲಾ ಬಸ್ (School Bus) ಗಳ ಫಿಟ್ನೆಸ್ ಹಾಗೂ ಸುರಕ್ಷತಾ ನಿಯಮಗಳನ್ನು ಪರಿಶೀಲನೆ ಮಾಡಲು ಮುಂದಾಗಿ ವಾಯು ವೇಗ ತಂಡವನ್ನು ನಿಯೋಜಿಸಿದ್ದಾರೆ.

ಈ ಎಲ್ಲಾ ಬಸ್ಗಳ ತಪಾಸಣೆಯನ್ನು ನಡೆಸಿ ಹಾಗೂ ಅನಗತ್ಯವಾಗಿ ಇಂತಹ ಬಸ್ ಗಳನ್ನು ಚಾಲನೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈ ತೆಗೆದುಕೊಳ್ಳಲಾಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಅವಧಿ ಮೀರಿದ ಪ್ರಮಾಣ ಪತ್ರವನ್ನು (Expired Certificate) ಉಪಯೋಗಿಸುತ್ತ ಶಾಲಾ ಬಸ್ ಗಳನ್ನು ಚಲಾಯಿಸಿದಂತೆ ಮನವಿ ಮಾಡಿಕೊಂಡಿದ್ದಾರೆ.

advertisement

Leave A Reply

Your email address will not be published.