Karnataka Times
Trending Stories, Viral News, Gossips & Everything in Kannada

V Somanna: ಮಿನಿಸ್ಟರ್ ಆದ ಕೆಲವೇ ದಿನಕ್ಕೆ ರಾಜ್ಯದ ಜನತೆಗೆ ಗುಡ್ ನ್ಯೂಸ್ ಕೊಟ್ಟ ವಿ ಸೋಮಣ್ಣ

advertisement

ಕೇಂದ್ರ ಸರಕಾರದಲ್ಲಿ ಮೋದಿ ಅವಧಿಯ ಮೂರನೇ ಅವಧಿಗೆ ಈಗಾಗಲೇ ಎಲ್ಲ ವಿಧವಾದ ಸಕಲ ಸಿದ್ಧತೆ ಕಾರ್ಯ ಮುಗಿಯುತ್ತಲಿದೆ ಎಂದು ಹೇಳಬಹುದು. ಈಗ ಎಲ್ಲ ಖಾತೆ ಹಂಚಿಕೆ ಆಗಿದ್ದು ಆಯಾ ಖಾತೆಯ ಸಚಿವರು ಆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಸಮಯ ನೀಡುತ್ತಿದ್ದು ಅಭಿವೃದ್ಧಿ ಯೋಜನೆಗೆ ಅಧಿಕ ಒತ್ತು ನೀಡುತ್ತಿದ್ದಾರೆ ಈ ನಿಟ್ಟಿನಲ್ಲಿ ಅನೇಕ ವರ್ಷದಿಂದ ಬಾಕಿ ಉಳಿದಿರುವ ರೈಲ್ವೇ ಇಲಾಖೆಯ ಕಾರ್ಯಗಳು ಈಗ ಕೈ ಗೂಡಲಿದೆ ಎಂದು ಹೇಳಬಹುದು. ಇದಕ್ಕೆ ರೈಲ್ವೇ ಸಚಿವರಾದ ಸೋಮಣ್ಣನವರೇ (V Somanna) ಮುನ್ನುಡಿ ಕೂಡ ಇಡುತ್ತಿದ್ದು ಈ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿ ಇಲ್ಲಿದೆ.

ರಾಜ್ಯದ ರೈಲ್ವೇ ಇಲಾಖೆಯ ಸ್ಥಿತಿಗತಿಯ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಿ ಕೆಲವು ಅಗತ್ಯ ಕ್ರಮ ಜಾರಿಗೆ ತರಲು ಸರಕಾರ ಮುಂದಾಗಿದೆ. ರಾಜ್ಯದಲ್ಲಿ ಕಳೆದ 30 ವರ್ಷದಿಂದ ಬಾಕಿ ಉಳಿದ 9 ರೈಲ್ವೇ ಯೋಜನೆ ಶೀಘ್ರ ಪ್ರಗತಿ ಮೂಲಕ ಜಾರಿಗೆ ತಂದು ಮುಂದಿನ ಎರಡು ವರ್ಷದ ಒಳಗೆ ಪೂರ್ಣ ಗೊಳಿಸಬೇಕು ಎಂದು ರೈಲ್ವೇ ರಾಜ್ಯ ಖಾತೆಯ ಸಚಿವ ವಿ.ಸೋಮಣ್ಣ (V Somanna) ಅವರು ಈ ಬಗ್ಗೆ ಕೆಲವು ಪ್ರಮುಖ ಮಾಹಿತಿಯನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

ಎರಡು ವರ್ಷದೊಳಗೆ ಪೂರ್ಣ:

 

Image Source: Deccan Herald

 

advertisement

ರೈಲ್ವೇ ಕಾರ್ಯಗಳು ಬಹುತೇಕ ಬಾಕಿ ಇದ್ದು 9 ವರ್ಷದಲ್ಲಿ 1264 km ರೈಲ್ವೇ ಕಾರ್ಯ ಬಾಕಿ ಆಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಈ ಬಾಕಿ ಉಳಿದ 9 ರೈಲ್ವೇ ಯೋಜನೆಯನ್ನು 2025 ರಲ್ಲಿ ಬಹುತೇಕ ಪೂರ್ಣವಾಗಿ 2026 ರ ಅಂತ್ಯದೊಳಗೆ ಮುಗಿಸಲಾಗುತ್ತದೆ. ಇದನ್ಬು ಆಗಾಗ ಸಭೆ ನಡೆಸಿ ಅಗತ್ಯ ಸಂದರ್ಭದಲ್ಲಿ ಸಲಹೆ ಸೂಚನೆ ಮೇರೆಗೆ ಕೆಲವು ಅಗತ್ಯ ಕ್ರಮ ಸಹ ಕೈಗೊಳ್ಳಲಾಗುವುದು ಎಂದು ಇತ್ತೀಚೆಗಷ್ಟೇ ರಾಜ್ಯದ ರೈಲ್ವೇ ಸ್ಥಿತಿ ಗತಿ ಬಗ್ಗೆ ಸಭೆ ನಡೆಸಿ ಬಳಿಕ ಸುದ್ದಿ ಗೋಷ್ಟಿಯಲ್ಲಿ ರೈಲ್ವೇ ರಾಜ್ಗ ಖಾತೆ ಸಚಿವ ವಿ. ಸೋಮಣ್ಣ (V Somanna) ಅವರು ಮಾತನಾಡಿದ್ದಾರೆ.

ಕಲ್ಯಾಣ ದುರ್ಗ, ರಾಮದುರ್ಗ, ತುಮಕೂರು, ಗದಗ ವಾಡಿ, ಗಿಣಿ ಗೇರಾ, ರಾಯಚೂರು, ತುಮಕೂರು ಚಿತ್ರದುರ್ಗ, ದಾವಣಗೆರೆ, ಕಡೂರು , ಚಿಕ್ಕಮಗಳೂರು, ಬೆಳಗಾವಿ, ಕಿತ್ತೂರು, ಧಾರವಾಡ, ಬಾಗಲ ಕೋಟೆ, ಕುಡಚಿ, ಹಾಸನ, ಬೇಲೂರು ಇತರ ಭಾಗದಲ್ಲಿ 9 ರೈಲ್ವೇ ಇಲಾಖೆಯ ಬಗ್ಗೆ ಇನ್ನು ಎರಡು ವರ್ಷದ ಒಳಗೆ ರೈಲ್ವೇ ಸಂಪರ್ಕ ಪೂರ್ಣವಾಗಲಿದೆ ಎಂದು ಕೇಂದ್ರ ರೈಲ್ವೇ ಸಚಿವರಾದ ವಿ. ಸೋಮಣ್ಣ (V Somanna) ಅವರು ತಿಳಿಸಿದ್ದಾರೆ.

ತಜ್ಞರ ನೇಮಕಾತಿಗೆ ಸೂಚನೆ:

ಖಾಲಿ ಇರುವ ರೈಲ್ವೇ ಖಾತೆ ಹುದ್ದೆ ಭರ್ತಿ ಮಾಡುವ ಜೊತೆಗೆ ಇದ್ದ ಹುದ್ದೆಗಳಿಗೂ ತಜ್ಞರ ನೇಮಕ ಮಾಡಲೇಬೇಕು. ಬೆಂಗಳೂರು ಉಪನಗರ ರೈಲು ಯೋಜನೆ ನಿಧಾನ ಗತಿಯಲ್ಲಿದ್ದು ಕಾಮಗಾರಿ ಶೀಘ್ರ ಗತಿಯಲ್ಲಿ ಸಾಗಬೇಕು ಎಂದು ಸಲಹೆನೀಡಿದರು. ಮುಂದಿನ15 ದಿನದ ಒಳಗೆ ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ರೈಲ್ವೇ ತಾಂತ್ರಿಕ ತಜ್ಞರ ನೇಮಕಾತಿಗೆ ಕ್ರಮ ವಹಿಸುವುದಾಗಿ ಸೂಚಿಸಿದ್ದಾರೆ.

advertisement

Leave A Reply

Your email address will not be published.