Karnataka Times
Trending Stories, Viral News, Gossips & Everything in Kannada

ತಿಂಗಳಿಗೆ 2000 ರೂ ಸಿಗುವ ಮಹಿಳೆಯರಿಗೆ ಈಗ 11000 ರೂ ಕೂಡ ಸಿಗುತ್ತೆ, ಈ ಅರ್ಜಿ ಹಾಕಿ

advertisement

ಕರ್ನಾಟಕ ಸರ್ಕಾರದ ಆಡಳಿತವನ್ನು ಸ್ವೀಕರಿಸಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರು (CM Siddaramaiah) ಜನಸಾಮಾನ್ಯರಿಗೆ ಅನುಕೂಲವಾಗುವಂತ ಸಾಕಷ್ಟು ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಿದ್ದಾರೆ, ಕೋಟ್ಯಾಂತರ ಜನರು ಇದರಿಂದ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ.

ಇದೀಗ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಪಡಿತರ ಚೀಟಿಯನ್ನು (Ration Card) ಹೊಂದಿರುವ ಹೆಂಗಸರಿಗೆ 11,000 ಹಣವನ್ನು ನೀಡುವುದಾಗಿ ತಿಳಿಸಿದೆ. ಅಷ್ಟಕ್ಕೂ ಈ ಹೊಸ ಯೋಜನೆ ಯಾವುದು? ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಸಂಪೂರ್ಣ ವಿವರವನ್ನು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.

Matru Vandana Yojana:

 

Image Source: Study IQ

 

ಮಹಿಳೆಯರಿಗೋಸ್ಕರ ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವಂತಹ ಯೋಜನೆ ಇದಾಗಿದ್ದು, ಈ ಯೋಜನೆಯಡಿ ಪಡಿತರ ಚೀಟಿ (Ration Card) ಯನ್ನು ಹೊಂದಿರುವಂತಹ ಮಹಿಳೆಯರಿಗೆ ಅದರಲ್ಲೂ ಬಹು ಮುಖ್ಯವಾಗಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಬಾಣಂತಿಯರಿಗೆ ಅನುಕೂಲವಾಗುವ ಯೋಜನೆಯನ್ನು ಜಾರಿ ಮಾಡಲಾಗಿದೆ. ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಂತಹ ಸಮಯದಲ್ಲಿ ಹಾಗೂ ಬಾಣಂತಿಯರಾಗಿದ್ದಾಗ ಹೆಚ್ಚಿನ ಖರ್ಚು ವೆಚ್ಚಗಳು (Expenditure) ತಗ್ಗುತ್ತಿರುತ್ತದೆ ಅಂತಹ ಸಮಯದಲ್ಲಿ ಕೆಳ ಹಾಗು ಮಧ್ಯಮ ವರ್ಗದ ಜನರಿಗೆ ಅದನ್ನು ಪೂರೈಸಲು ಸಾಧ್ಯವಾಗುವುದಿಲ್ಲ.

advertisement

ಇಂತಹ ಮಹಿಳೆಯರ ಕಷ್ಟವನ್ನು ಅರಿತಂತಹ ಕೇಂದ್ರ ಸರ್ಕಾರವು ಮಾತೃ ವಂದನಾ ಯೋಜನೆ (Matru Vandana Yojana) ಯನ್ನು ಜಾರಿಗೆ ತಂದಿದ್ದು, ಪುಟ್ಟ ಮಗುವಿನ ಹಾಗೂ ತಾಯಿಯ ಆರೋಗ್ಯವನ್ನು ಸುರಕ್ಷಿತವಾಗಿರಿಸುವ ನಿಟ್ಟಿನಲ್ಲಿ ರೇಷನ್ ಕಾರ್ಡ್ (Ration Card) ಹೊಂದಿರುವ ಎಲ್ಲಾ ಗರ್ಭಿಣಿ ಹಾಗೂ ಬಾಣಂತಿ ಮಹಿಳೆಯರಿಗೆ ಧನ ಸಹಾಯವನ್ನು ಮಾಡುತ್ತಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಗೆ ಚುಚ್ಚಲ‌ ಹೆರಿಗೆಯಾದರೆ (First Delivery) ಎರಡು ಕಂತಿನಲ್ಲಿ 5000 ಹಣ ದೊರಕುತ್ತದೆ. ಅದರಂತೆ ಎರಡನೇ ಮಗುವಾದರೆ (Second Child’s Delivery) ಒಂದೇ ಸಾರಿ 6000 ರೂಪಾಯಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ತಾಯಿಯ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ವಿವರ
  • ಮಗುವಿನ ಬರ್ತ್ ಸರ್ಟಿಫಿಕೇಟ್(ಬಾಣಂತಿಯರಿಗೆ)

ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

 

Image Source: The New Indian Express

 

ಯೋಜನೆಯ ಸೌಲಭ್ಯವನ್ನು ಪಡೆಯಲು ಮಹಿಳೆಯರು ಆನ್ಲೈನ್ ಅಥವಾ ಆಫ್ಲೈನ್ ಮೂಲಗಳಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸುವಂತಹ ಮಹಿಳೆಯರು ನಿಮ್ಮ ಹತ್ತಿರದ ಕರ್ನಾಟಕ ಒನ್ ಬೆಂಗಳೂರು ಒನ್ (Bangalore One) ಅಥವಾ ಗ್ರಾಮ ಒನ್ನಂತಹ ಸೆಂಟರ್ಗಳಿಗೆ ಹೋಗಿ ಬೇಕಾಗುವಂತಹ ದಾಖಲಾತಿಗಳನ್ನು ನೀಡಿ ಮಾತೃ ವಂದನ ಯೋಜನೆಗೆ (Matru Vandana Yojana) ಅರ್ಜಿ ಸಲ್ಲಿಸಿ ಅನುಕೂಲವನ್ನು ಪಡೆದುಕೊಳ್ಳಬಹುದು. ಅದರಂತೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮಹಿಳೆಯರು ಆರೋಗ್ಯ ಕೇಂದ್ರಕ್ಕೆ (Health Centre) ಭೇಟಿ ನೀಡಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.