ಶಕ್ತಿ ಯೋಜನೆ (Shakti Yojana) ಕರ್ನಾಟಕ ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ರಾಜ್ಯದ ಎಲ್ಲ ಮಹಿಳೆಯರಿಗೆ ಖುಷಿಯ ವಿಚಾರ ಸಿಕ್ಕಂತಾಗಿದೆ. ಮಹಿಳೆಯರು ರಾಜ್ಯದೆಲ್ಲಡೆ ಉಚಿತ ಪ್ರಯಾಣ (Free Bus Travel) ಮಾಡಲು ಈ ಯೋಜನೆ ಅನುಕೂಲವಾಗಿದ್ದು ಅದರ ಬೆನ್ನಲ್ಲೇ ಸರಕಾರಿ ಬಸ್ ಕೂಡ ಜನ ಜಂಗುಳಿಯಲ್ಲೇ ಸಾಗುತ್ತಿದೆ.
ಸಾಮಾನ್ಯ ದಿನದಲ್ಲೇ ಬಸ್ ರೆಶ್ ಇರುವಾಗ ಇನ್ನು ಹಬ್ಬ ಹರೊದಿನಗಳಲ್ಲಿ ಬಸ್ ರಶ್ (Bus Rush) ಇರುವುದು ಸಾಮಾನ್ಯವಾಗಿದೆ. ಅದೇ ರೀತಿ ಬಸ್ ರಶ್ ಇದ್ದರೂ ಇಂದಿಗೂ ಹತ್ತುವವರ ಸಂಖ್ಯೆ ಏನು ಕಮ್ಮಿ ಆಗಿಲ್ಲ. ಹೆಚ್ಚುವರಿ ಬಸ್ ವ್ಯವಸ್ಥೆ ಹಾಗೂ ಸಿಬಂದಿ ವ್ಯವಸ್ಥೆ ಮಾಡುವಂತೆ ಸಾರಿಗೆ ಇಲಾಖೆ ತಿಳಿಸಿದ್ದರೂ ಕೂಡ ಇನ್ನು ಕೂಡ ಆ ವಿಧಾನ ಕಾರ್ಯ ಇನ್ನು ಜಾರಿಗೆ ಬಂದಿಲ್ಲ ಅದರ ಬೆನ್ನಲ್ಲೆ ಈಗ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಸಲುವಾಗಿ ಸಾರಿಗೆ ಸಿಬಂದಿಗೆ ಭರ್ಜರಿ ಆಫರ್ ಒಂದನ್ನು ಸಾರಿಗೆ ಇಲಾಖೆ ನೀಡಿದೆ.
ಏನದು ಆಫರ್?
ಕರ್ನಾಟಕದ ಸಾರಿಗೆ (KSRTC) ಸಿಬಂದಿಗೆ ಈಗೊಂದು ಶುಭ ಸುದ್ದಿ ಬಂದಿದೆ. ರಜಾ ಅವಧಿಯಲ್ಲಿ ಕೆಲಸ ಮಾಡಿದರೆ ಹೆಚ್ಚುವರಿ ವೇತನ ನೀಡುವ ಭರವಸೆಯನ್ನು ರಾಜ್ಯ ರಸ್ತೆ ಸಾರಿಗೆ ನಿಗಮ ತಿಳಿಸಿದೆ. ಈ ಹಿಂದೆ ಕೋವಿಡ್ (Covid) ಅವಧಿಯಲ್ಲಿ ಸಾರಿಗೆ ಇಲಾಖೆ ಆದಾಯ ಕುಂಟಿತವಾದ ಹಿನ್ನೆಲೆ ರಜಾ ಅವಧಿಯಲ್ಲಿ ಕೂಡ ಕೆಲಸ ನಿರ್ವಹಣೆಗೆ ತಿಳಿಸಲಾಗಿತ್ತು ಬಳಿಕ ಅವರಿಗೆ ಆರ್ಥಿಕ ನೆರವಿನ ಬದಲಿ ಹೆಚ್ಚುವರಿ ರಜಾ ಸೌಲಭ್ಯ ನೀಡಲಾಗಿತ್ತು. ಡಿಸೆಂಬರ್ 22 ರಿಂದ 2023 ರ ಜೂನ್ ವರೆಗೆ ಸವೇಚನಾ ರಜಾ ಅವಧಿ ವಿಸ್ತರಿಸಲಾಗಿದೆ.
ಸುತ್ತೋಲೆ:
ರಾಷ್ಟ್ರೀಯ ರಜಾ ದಿನ ಹಾಗೂ ನೌಕರರು ಆಯ್ಕೆ ಮಾಡಿಕೊಂಡು ಹಬ್ಬಗಳ ರಜಾ ದಿನದಂದು ಕರ್ತವ್ಯ ನಿರ್ವಹಿಸಿದ್ದವರಿಗೆ ಕೋವಿಡ್ ಪೂರ್ವದಲ್ಲಿ ಇದ್ದ ನಿಯಮದಂತೆ ಮುಂದುವರಿಸಲು ಸರಕಾರ ತೀರ್ಮಾನಿಸಿದೆ. ಅವಶ್ಯಕತೆ ಅನುಗುಣವಾಗಿ ಸಿಬಂದಿಗಳನ್ನು ಕರ್ತವ್ಯ ನಿರ್ವಹಣೆಗೆ ಬಳಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧ್ಯಕ್ಷರು ಸುತ್ತೋಲೆ ಮೂಲಕ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ರಜಾ ದಿನದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ವೇತನ ಹೆಚ್ಚಳ ಆಗುವ ಕಾರಣ ಎಲ್ಲರಿಗೂ ಇದೊಂದು ಬಂಪರ್ ಕೊಡುಗೆಯಾಗಿದೆ. ಈ ಮೂಲಕ ಸರಕಾರಿ ಬಸ್ ನಿರ್ವಹಣೆ ಕೂಡ ಸುಲಭವಾಗಲಿದೆ ಎನ್ನಬಹುದು.